ಬೆಂಗಳೂರು
ವೇಗವಾಗಿ ಹೋಗುತ್ತಿದ್ದ ಬೈಕ್ ರಸ್ತೆ ಉಬ್ಬು (ಹಂಪ್) ವಿನಲ್ಲಿ ಆಯತಪ್ಪಿಬಿದ್ದು ಹಿಂಬದಿ ಸವಾರ ಮೃತಪಟ್ಟರೆ, ಸವಾರ ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ಕೆಆರ್ಪುರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದೊಡ್ಡ ನೆಕ್ಕುಂದಿಯ ಮಂಜು (38)ಎಂದು ಮೃತಪಟ್ಟವರನ್ನು ಗುರುತಿಸಲಾಗಿದೆ.ತಲೆಗೆ ಗಾಯಗೊಂಡು ಜೀವಿಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಂತೇಶ್ (28) ಅವರ ಸ್ಥಿತಿ ಚಿಂತಾಜನಕವಾಗಿದೆ.
ನಂಜನಗೂಡು ಮೂಲದ ಮಂಜು ಖಾಸಗಿ ಕಂಪನಿಯಲ್ಲಿ ಕೊರಿಯರ್ ಬಾಯ್ ಆಗಿ ಕೆಲಸ ಮಾಡುತ್ತಿದ್ದು, ಮ್ಯಾಕ್ಯಾನಿಕ್ ಆಗಿದ್ದ ಸ್ನೇಹಿತ ಮಹಂತೇಶ್ ಅವರ ಬೈಕ್ನಲ್ಲಿ ಹಿಂದೆ ಕುಳಿತು ರಾತ್ರಿ 9.30ರ ವೇಳೆ ಕಾರ್ತಿಕ್ ನಗರದಿಂದ ದೊಡ್ಡನೆಕ್ಕುಂದಿಗೆ ವರ್ತುಲ ರಸ್ತೆಯಲ್ಲಿ ವೇಗವಾಗಿ ಹೋಗುತ್ತಿದ್ದರು.
ಮಾರ್ಗಮಧ್ಯೆ ರೈನ್ ಬೋ ಆಸ್ಪತ್ರೆ ಬಳಿ ಹಾಕಿದ್ದ ಹಂಪ್ನಿಂದ ಆಯತಪ್ಪಿ ಕೆಳಗೆ ಬಿದ್ದು, ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನೂ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗಮಧ್ಯೆ ಮಂಜು ಮೃತಪಟ್ಟಿದ್ದಾರೆ .ಗಾಯಗೊಂಡಿರುವ ಮಹಂತೇಶ್ ಚಿಕಿತ್ಸೆ ಪಡೆಯುತ್ತಿದ್ದು, ಸಾವು – ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಆತ ರಾಜ್ ಮಣಿ ಇಂಡಸ್ಟ್ರೀಸ್ನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ.
. ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ