ಬೆಂಗಳೂರು
ಕೆಲಸಕ್ಕೆ ಹೋಗದೇ ಸುಲಭವಾಗಿ ಜೀವನ ನಡೆಸಲು ಬೈಕ್ ಕಳವು ಮಾಡುತ್ತಿದ್ದ ರೌಡಿ ಅರ್ಜುನ್‍ನನ್ನು ಬಂಧಿಸಿರುವ ಹೆಣ್ಣೂರು ಪೊಲೀಸರು 8.5 ಲಕ್ಷ ರೂ. ಮೌಲ್ಯದ ದುಬಾರಿ ಬೈಕ್‍ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ರೌಡಿ ಹೊರಮಾವಿನ ಅರ್ಜುನ್ (29)ನಿಂದ 8.5 ಲಕ್ಷ ರೂ. ಮೌಲ್ಯದ 8 ದುಬಾರಿ ಬೆಲೆಯ ರಾಯಲ್ ಎನ್‍ಫೀಲ್ಡ್, ಬಜಾಜ್ ಪಲ್ಸರ್ ಬೈಕ್‍ಗಳನ್ನು ವಶಪಡಿಸಿಕೊಂಡು ಹೆಣ್ಣೂರಿನ – 3, ಬಾಣಸವಾಡಿಯ – 2, ಕೆಆರ್ ಪುರಂ, ಮಹದೇವಪುರ ಹಾಗೂ ಯಶವಂತಪುರದ ತಲಾ – 1 ದ್ವಿಚಕ್ರ ವಾಹನ ಕಳವು ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ.
ಆರೋಪಿಯು ಬೆದರಿಕೆ, ಸುಲಿಗೆ, ಡಕಾಯಿತಿ ಯತ್ನ, ಇನ್ನಿತರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದು, ಆತನನ್ನು ಹೆಣ್ಣೂರು ಪೆÇಲೀಸ್ ಠಾಣೆಯ ರೌಡಿಪಟ್ಟಿಗೆ ಸೇರಿಸಲಾಗಿತ್ತು. ಅಪರಾಧ ಕೃತ್ಯದಲ್ಲಿ ಜೈಲಿಗೆ ಹೋಗಿ ಬಿಡುಗಡೆಯಾಗಿ ಬಂದಿದ್ದ ಆರೋಪಿಯು, ಮೋಜು-ಮಸ್ತಿ ಮಾಡಲು ದುಬಾರಿ ಬೆಲೆಯ ಬೈಕ್‍ಗಳನ್ನು ನಕಲಿ ಕೀ ಬಳಸಿ ಇಲ್ಲವೆ, ಹ್ಯಾಂಡಲ್‍ನ ಬೀಗ ಮುರಿದು ಕಳವು ಮಾಡುತ್ತಿದ್ದ.
ಹೆಣ್ಣೂರಿನಲ್ಲಿ ನಡೆದಿದ್ದ ದ್ವಿಚಕ್ರ ವಾಹನ ಕಳವು ಪ್ರಕರಣವೊಂದನ್ನು ದಾಖಲಿಸಿದ್ದ ಪೊಲೀಸರು, ಖಚಿತ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಡಿಸಿಪಿ ರಾಹುಲ್ ಕುಮಾರ್ ಶಹಪುರವಾಡಾ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
