ಹುಳಿಯಾರು:
ಬಸ್ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹುಳಿಯಾರು ಹೋಬಳಿಯ ಬೆಳ್ಳಾರದ ಸಮೀಪದ ಧರ್ಮವೀರ ಫಾರಂ ಬಳಿ ಬುಧವಾರ ರಾತ್ರಿ ಜರುಗಿದೆ.ಹುಳಿಯಾರು ಸಮೀಪದ ಬರಕನಹಾಲ್ ತಾಂಡ್ಯದ ಕುಮಾರನಾಯ್ಕ (25) ಸಾವನ್ನಪ್ಪಿದ ದುರ್ಧೈವಿಯಾಗಿದ್ದಾನೆ. ಈತ ಬೈಕ್ನಲ್ಲಿ ಶಿರಾದಿಂದ ತನ್ನ ಊರು ಬರಕನಹಾಲ್ ತಾಂಡ್ಯಕ್ಕೆ ಬರುವಾಗ ಧರ್ಮವೀರ ಫಾರಂ ಬಳಿ ಕಂದಿಕೆರೆಯಿಂದ ಮಧುಗಿರಿಗೆ ಹೋಗುತ್ತಿದ್ದ ಖಾಸಗಿ ಬಸ್ಗೆ ಡಿಕ್ಕಿ ಹೊಡೆದಿದ್ದಾನೆ.
ಪರಿಣಾಮ ಬೈಕ್ ಸವಾರ ಕುಮಾರನಾಯ್ಕನ ತಲೆಗೆ ಬಲವಾದ ಪೆಟ್ಟು ಬಿದ್ದು ತೀರ್ವ ರಕ್ತ ಸ್ತ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತನಿಗೆ ಪತ್ನಿ, ಮೂವರು ಮಕ್ಕಳಿದ್ದಾರೆ. ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








