ಮಿಡಿಗೇಶಿ
ಸೆ.13 ಮಧುಗಿರಿ – ಪಾವಗಡ ರಾಜ್ಯ ಹೆದ್ದಾರಿಯ ಮಿಡಿಗೇಶಿ ಹೋಬಳಿಯ ಕ್ಯಾತಗೊಂಡನಹಳ್ಳಿ ಗ್ರಾಮದ ಸಮೀಪ ಇಂದು ಬೆಳಿಗ್ಗೆ ಮಡಕಶಿರಾ ತಾಲ್ಲೂಕಿನ ಜಕ್ಕೇನಹಳ್ಳಿ ವಾಸಿಯಾದ ಎನ್.ಶಂಕರರೆಡ್ಡಿ (50) ಎನ್ನುವವರು ದ್ವಿಚಕ್ರವಾಹನದಲ್ಲಿ ಬರುವಾಗ ಪಾವಗಡದಿಂದ ಬಂದ ಕೆ.ಎಸ್.ಆರ್.ಟಿ.ಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಕೆಳಗೆ ಬಿದ್ದ ಸವಾರನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.
ಅಪಘಾತವಾದ ತಕ್ಷಣ ಸವಾರನನ್ನು ಮಿಡಿಗೇಶಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಅಪಘಾತದ ಬಗ್ಗೆ ಸವಾರನ ಸೋದರನಾದ ಚಿದಂಬರ ರೆಡ್ಡಿ ಮಿಡಿಗೇಶಿ ಪೋಲಿಸ್ ಠಾಣೆಗೆ ಲಿಖಿತ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
