ಮನೆ ಭಾಗದ ವಿಚಾರದಲ್ಲಿ ಸಿಟ್ಟಿಗೆದ್ದ ತಮ್ಮನಿಂದ ಬೈಕ್ ಗಳಿಗೆ ಬೆಂಕಿ…!!

ಬೆಂಗಳೂರು

        ಮನೆಯ ಭಾಗದ ವಿಚಾರದಲ್ಲಿ ಉಂಟಾದ ಜಗಳದಿಂದ ಆಕ್ರೋಶಗೊಂಡ ತಮ್ಮ ಅಣ್ಣನ ಮನೆ ಮುಂದೆ ನಿಲ್ಲಿಸಿದ್ದ ಬೈಕ್‍ಗಳಿಗೆ ಬೆಂಕಿ ಹಚ್ಚಿರುವ ದುರ್ಘಟನೆ ಕೆಪಿ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಮನೆಯ ಮುಂದೆ ನಿಲ್ಲಿಸಿದ್ದ ಬೈಕ್‍ಗಳಿಗೆ ಬೆಂಕಿ ಇಟ್ಟಿದ್ದ ಸಹೋದರ ಚಂದ್ರು ವಿರುದ್ಧ ಅಣ್ಣ ಭೂಪಾಲ್ ದೂರು ನೀಡಿದ್ದು ಪ್ರಕರಣ ದಾಖಲಿಸಿರುವ ಪೊಲೀಸರು ಚಂದ್ರುನನ್ನು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆ ನಡೆಸಿದ್ದಾರೆ

       ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಅಣ್ಣನ ಮೇಲಿನ ಸಿಟ್ಟಿಗೆ ಚಂದ್ರು, ಬೈಕ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಅದನ್ನು ಪೊಲೀಸರಿಗೆ ನೀಡಿದ್ದಾರೆ.

        ಭೂಪಾಲ್ ಅವರ ತಂದೆ ದಿ.ಸುಬ್ರಮಣ್ಯ ಹೆಸರಿನಲ್ಲಿ ಮಾಗಡಿ ರಸ್ತೆಯಲ್ಲಿ ಮನೆ ಇದ್ದು, ಇದನ್ನು ತಾನೇ ಇಟ್ಟುಕೊಂಡ ಆರೋಪ ಚಂದ್ರು ಮೇಲಿತ್ತು. ಆಸ್ತಿ ವಿಚಾರಕ್ಕಾಗಿ ಅಣ್ಣ-ತಮ್ಮಂದಿರು ಕೋರ್ಟ್ ಮೆಟ್ಟಿಲೇರಿದ್ದರು. ಕುಟುಂಬದ ಜೊತೆ ಅದೇ ಬಡಾವಣೆಯಲ್ಲಿ ಭೂಪಾಲ್ ಸಹ ವಾಸವಾಗಿದ್ದ.

         ಫೆ.14ರ ರಾತ್ರಿ ಏಕಾಏಕಿ ಅಣ್ಣನ ಬಾಡಿಗೆ ಮನೆ ಮುಂದಿದ್ದ ನಾಲ್ಕು ಬೈಕ್‍ಗಳಿಗೆ ಪೆಟ್ರೋಲ್ ಎರಚಿ ಕಡ್ಡಿಗಿರಿ ಬೆಂಕಿ ಹಚ್ಚಿದ್ದಾನೆ. ಭೂಪಾಲ್ ಅವರ ಅಳಿಯ ಹಾಗೂ ವಾಸವಿದ್ದ ಕಟ್ಟಡದ ಮಾಲೀಕನ ಬೈಕ್‍ಗಳು ಸಹ ಬೆಂಕಿಗೆ ಆಹುತಿಯಾಗಿವೆ.ಪ್ರಕರಣ ದಾಖಲಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link