ಬೆಂಗಳೂರು:
ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ಹ್ಯಾಂಡಲ್ ಲಾಕ್ ಮುರಿದು ಮನೆಗಳ ಮುಂಭಾಗ ನಿಲ್ಲಿಸಿದ್ದ ಬೈಕ್‍ಗಳನ್ನು ಕಳವು ಮಾಡಿ ಮಾರಾಟ ಮಾರಾಟ ಮಾಡಿ ಮೋಜು ಮಾಡುತ್ತಿದ್ದ ಇಬ್ಬರು ಬೈಕ್ ಕಳ್ಳರನ್ನು ಬಂಧಿಸುವಲ್ಲಿ ಜಾಲಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
ತುಮಕೂರಿನ ಶಿರಾ ಗೇಟ್‍ನ ನಿರಂಜನ್ ಅಲಿಯಾಸ್ (18), ಕೋರ ಹೋಬಳಿಯ ನಿತಿನ್ ಕುಮಾರ್ ಅಲಿಯಾಸ್ ನಿತಿನ್ (18)ಬಂಧಿತ ಆರೋಪಿಗಳಾಗಿದ್ದಾದ್ದು ಇವರಿಂದ ವಿವಿಧ ಕಂಪನಿಗಳ 9 ಲಕ್ಷ ಮೌಲ್ಯದ 27 ಬೈಕ್‍ಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.
ಜಾಲಹಳ್ಳಿಯ ಬಿಎಲ್ ಸರ್ಕಲ್ ಬಳಿ ಅನುಮಾನಾಸ್ಪದವಾಗಿ ಬೈಕ್‍ನಲ್ಲಿ ಬಂದ ನಿರಂಜನ್‍ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಆತ ಮತ್ತೊಬ್ಬ ಆರೋಪಿ ನಿತಿನ್ ಜತೆ ಸೇರಿ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದನ್ನು ಬಾಯ್ಬಿಟ್ಟಿದ್ದಾನೆ ಎಂದು ಡಿಸಿಪಿ ಚೇತನ್ ಸಿಂಗ್ ತಿಳಿಸಿದ್ದಾರೆ.
ಆರೋಪಿ ನಿರಂಜನ್ ಪಿಯುಸಿ ಮುಗಿಸಿದ್ದರೆ, ನಿತಿನ್ ಡಿಪ್ಲೊಮೊ ಆಟೋಮೊಬೈಲ್ ಕೋರ್ಸನ್ನು ಅರ್ಧಕ್ಕೆ ನಿಲ್ಲಿಸಿದ್ದ. ಈ ಇಬ್ಬರು ಕಾಲೇಜಿನಲ್ಲಿ ಓದುವಾಗ ಪರಿಚಯವಾಗಿ ಮೋಜಿನ ಜೀವನಕ್ಕೆ ಬೈಕ್ ಕಳ್ಳತನಕ್ಕೆ ಇಳಿದಿದ್ದರು.ಕಳವು ಮಾಡಿದ ಬೈಕ್‍ನಲ್ಲಿ ಇಬ್ಬರು ಸಂಚರಿಸುತ್ತಾ ರಾತ್ರಿ ವೇಳೆ ಮನೆಗಳ ಮುಂಭಾಗ ನಿಲ್ಲಿಸಿದ್ದ ಹ್ಯಾಂಡಲ್ ಲಾಕ್ ಮುರಿದು ಇಲ್ಲವೆ ವೈರ್ ಕಟ್ ಮಾಡಿ ಬೈಕ್ ಕಳವು ಮಾಡಿ ಮಾರಾಟ ಮಾಡಿ ಮೋಜಿನ ಜೀವನ ನಡೆಸುತ್ತಿದ್ದರು.
ಆರೋಪಿಗಳ ಬಂಧನದಿಂದ ತುಮಕೂರಿನ 6, ನೆಲಮಂಗಲದ 3, ಮಾದನಾಯಕನ ಹಳ್ಳಿಯ 3, ಸೋಲದೇವನಹಳ್ಳಿಯ 2 ಸೇರಿ 18 ಬೈಕ್ ಕಳವು ಪತ್ತೆಯಾಗಿದ್ದು, 9 ದ್ವಿಚಕ್ರ ವಾಹನಗಳ ವಾರಸುದಾರರು ಪತ್ತೆಯಾಗಬೇಕಾಗಿದೆ ಎಂದು ತಿಳಿಸಿದ್ದಾರೆ.
ಕಾರುಗಳ್ಳರ ಗ್ಯಾಂಗ್ ಪತ್ತೆ ಶೋಕಿಗಾಗಿ ದುಬಾರಿ ಬೆಲೆಯ ಕಾರುಗಳನ್ನ ಕದಿಯುತ್ತಿದ್ದ 7 ಮಂದಿಯ ಗ್ಯಾಂಗ್‍ನ್ನು ರಾಜಗೋಪಾಲನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾಜಗೋಪಾಲನಗರದ ಜೀವನ್, ಶ್ರೀನಿವಾಸ್, ಮಂಜುನಾಥ್, ಸಾಗರ್, ಅಮ್ಜದ್, ನೂರುಲ್ಲಾ ಮತ್ತು ಪ್ರವೀಣ್ ಬಂಧಿತ ಆರೋಪಿಗಳಾಗಿದ್ದಾರೆ. ಒಂದು ವರ್ಷದಿಂದ ಈ ಗ್ಯಾಂಗ್ ಕಾರು ಕಳ್ಳತನ ಮಾಡುತ್ತಿರುವುದು ವಿಚಾರಣೆಯಲ್ಲಿ ಕಂಡುಬಂದಿದೆ.
ಗ್ಯಾಂಗ್ ನವರು ಮೊದಲು ಟ್ರಾವೆಲ್ ಏಜೆನ್ಸಿಯಲ್ಲಿ ಕಾರನ್ನು ಬುಕ್ ಮಾಡಿ ಟ್ರಿಪ್ ಕರೆದುಕೊಂಡು ಹೋಗುತ್ತಿದ್ದರು.
ನಂತರ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕಾರ್ ಚಾಲಕನ ಜೊತೆ ಸಲುಗೆಯಿಂದ ಮಾತನಾಡುತ್ತಿದ್ದರು. ಬಳಿಕ ಕಾರ್ ಚಾಲಕನಿಗೆ ಕಂಠ ಪೂರ್ತಿ ಕುಡಿಸುತ್ತಿದ್ದರು. ಚಾಲಕನಿಗೆ ಮದ್ಯದ ನಶೆ ಏರುತ್ತಿದ್ದಂತೆಯೇ ಕೈಕಾಲು ಕಟ್ಟಿ ಆತನನ್ನು ನಿರ್ಜನ ಪ್ರದೇಶದಲ್ಲಿ ಎಸೆದು ಕಾರ್ ಸಮೇತ ಪರಾರಿಯಾಗುತ್ತಿದ್ದರು.
ಹೀಗೆ ಕದ್ದ ಕಾರುಗಳನ್ನು ಗುರುತು ಸಿಗದಂತೆ ಅಚ್ಚುಕಟ್ಟಾಗಿ ಬದಲಾಯಿಸುತ್ತಿದ್ದರು. ಆರ್ಸಿ ಬುಕ್, ಚಾರ್ಸಿ ನಂಬರ್ ಸೇರಿ ಎಲ್ಲವನ್ನು ಅಚ್ಚುಕಟ್ಟಾಗಿ ಡಾಕ್ಯುಮೆಂಟ್ ಬದಲಾಯಿಸುತ್ತಿದ್ದ ಈ ಖದೀಮರು ಬರೋಬ್ಬರಿ 17 ಬೆಲೆಬಾಳುವ ಕಾರುಗಳನ್ನ ಕಳವು ಮಾಡಿರುವುದು ಪತ್ತೆಯಾಗಿದೆ.ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಬಂಧಿತರಿಂದ ಬೆಲೆ ಬಾಳುವ 17 ಕಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
