ತಿಪಟೂರು
ತಾಲ್ಲೂಕಿನ ಗಂಗನಘಟ್ಟ ಗೇಟ್ ಬಳಿ ಮಾರುತಿ ವ್ಯಾನ್ ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೆ ಸಾವನ್ನಪ್ಪಿದ್ದು, ಮತ್ತೋರ್ವ ಬೈಕ್ ಸವಾರನಿಗೆ ಗಂಭೀರ ಗಾಯವಾಗಿರುವ ಘಟನೆ ನಡೆದಿದೆ.
ತಾಲ್ಲೂಕಿನ ಗುಂಗುರಮಳೆ ಗೇಟ್ ಬಳಿಯ ರಾಜ್ಯ ಹೆದ್ದಾರಿಗೆ ಚನ್ನರಾಯಪಟ್ಟಣ ತಾಲ್ಲೂಕು ಆಡಳಿತವು ಮಣ್ಣು ಸುರಿದು ರಸ್ತೆ ಬಂದ್ ಮಾಡಿತ್ತು. ಇದರಿಂದ ಅಗತ್ಯ ವಸ್ತುಗಳ ಸಾಗಾಣಿಕೆಗೆ ಅನನುಕೂಲವಾಗಿದೆ ಎಂದು ಈ ಭಾಗದ ರೈತರು ಮತ್ತು ವ್ಯಾಪಾರಿಗಳು ದೂರು ನೀಡಿದ್ದರು. ಇದರಿಂದ ಹುಣಸೆಘÀಟ್ಟ್ಟ ಪಂಚಾಯಿತಿಯ ಬಿಲ್ ಕಲೆಕ್ಟರ್ ಹಾಗೂ ವಾಟರ್ ಮನ್ ಸ್ಥಳ ಪರಿಶೀಲನೆಗೆ ತೆರಳಿ, ವಾಪಾಸ್ ಬರುತ್ತಿದ್ದರು.
ಆಗ ಗಂಗನಘಟ್ಟ ಗೇಟ್ ಬಳಿ ತಿಪಟೂರು ಕಡೆಯಿಂದ ಬರುತ್ತಿದ್ದ ಮಾರುತಿ ವ್ಯಾನ್ ನುಗ್ಗೆಹಳ್ಳಿ ಗೇಟ್ ಕಡೆಯಿಂದ ಬಂದ ಬೈಕ್‍ಗೆ ಡಿಕ್ಕಿ ಹೊಡೆದಿದೆ. ಆಗ ತಾಲ್ಲೂಕಿನ ಹುಣಸೆWಟ್ಟ್ಟ ಪಂಚಾಯಿತಿಯ ಬಿಲ್ ಕಲೆಕ್ಟರ್ ಮತ್ತಿಘಟ್ಟ ದಯಾನಂದ್(35) ಎಂಬುವರು ಸ್ಥಳದಲ್ಲಿಯೇ ಮೃತರಾಗಿದ್ದಾರೆ. ಮತ್ತೋರ್ವ ವಾಟರ್‍ಮನ್ ರಮೇಶ್‍ಗೆ ಗಂಭೀರವಾದ ಗಾಯವಾಗಿ, ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
