ಬೆಂಗಳೂರು
ಜೈವಿಕ ವೈವಿಧ್ಯದ ಸುಸ್ಥಿರ ಸಂರಕ್ಷಣೆಯೇ ಜೈವಿಕ ವೈವಿಧ್ಯ ಕಾಯ್ದೆಯ ಮುಖ್ಯ ಉದ್ದೇಶವಾಗಿದೆ ಎಂದು ರಾಷ್ಟ್ರೀಯ ಜೀವ ವೈವಿಧ್ಯ ಪ್ರಾಧಿಕಾರದ ಮುಖ್ಯಸ್ಥರಾದ ಡಾ. ಮೀನಾಕುಮಾರಿ ಹೇಳಿದ್ದಾರೆ.
ಬೆಂಗಳೂರು ಜೈವಿಕ ನಾವಿನ್ಯತಾ ಕೇಂದ್ರ ಹಾಗೂ ಕರ್ನಾಟಕ ಜೈವಿಕ ಮಂಡಳಿ ವತಿಯಿಂದ ಇಂದು ಆಯೋಜಿಸಲಾದ ಜೈವಿಕ ವೈವಿಧ್ಯ ಕಾಯ್ದೆ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಭಾರತೀಯ ಅರಣ್ಯ ನಿರ್ವಹಣಾ ಸಂಸ್ಥೆಯ ಮಾಜಿ ನಿರ್ದೇಶಕ ಡಾ.ಜಿ.ಎ.ಕಿನ್ಹಾಲ್, ವಿಶ್ವದಲ್ಲಿ ಆರೂವರೆ ಸಾವಿರಕ್ಕೂ ಹೆಚ್ಚು ಔಷಧೀಯ ಸಸ್ಯಗಳು ಲಭ್ಯವಿದ್ದು ಅವುಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








