ತೇಜಸ್ ಹಗುರ ಯುದ್ಧ ವಿಮಾನದಲ್ಲಿ ಬಿಪಿನ್‍ ರಾವತ್ ಹಾರಾಟ

ಬೆಂಗಳೂರು

       ಎಚ್‍ಎಎಲ್‍ ತಯಾರಿಸಿರುವ ತೇಜಸ್‍ ಹಗುರ ಯುದ್ಧ ವಿಮಾನದಲ್ಲಿ ಸೇನಾ ಮುಖ್ಯಸ್ಥ ಜನರಲ್‍ಬಿಪಿನ್‍ ರಾವತ್ ಗುರುವಾರ ಹಾರಾಟ ನಡೆಸಿದರು.ಎರಡು ಆಸನಗಳ ದೇಶೀಯ ನಿರ್ಮಿತ ತೇಜಸ್ ವಿಮಾನಕ್ಕೆ ಬುಧವಾರವಷ್ಟೇ ಭಾರತೀಯ ವಾಯುಪಡೆಯಿಂದ ಎಫ್ಒಸಿದೊರೆತಿದೆ.

        ಏರೋ ಇಂಡಿಯಾ -2019 ರಕ್ಷಣಾ ಮತ್ತು ವೈಮಾನಿಕ ವಲಯ ಸಮಾವೇಶದ ಎರಡನೇ ದಿನವಾದ ಗುರುವಾರ ಯಲಹಂಕವಾಯಪಡೆ ಕೇಂದ್ರದಲ್ಲಿ ಜನರಲ್‍ ಬಿಪಿನ್‍ ರಾವತ್ ಅವರು ತೇಜಸ್‍ನಲ್ಲಿ ರೋಮಾಂಚಕ ಹಾರಾಟ ನಡೆಸಿದರು.

          ಹಾರಾಟದ ನಂತರ ಅನುಭವದ ಬಗ್ಗೆ ಪ್ರತಿಕ್ರಿಯಿಸಿದ ರಾವತ್ ಅವರು, ತೇಜಸ್ ಯುದ್ಧ ವಿಮಾನ ಅತ್ಯದ್ಭುತವಾಗಿದೆ.ವಿಮಾನದಲ್ಲಿ ಸ್ವಲ್ಪ ಹೊತ್ತಿನ ಹಾರಾಟದ ಅನುಭವ ಮುದ ನೀಡಿತು ಎಂದು ಹೇಳಿದ್ದಾರೆ.

          ಇದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್‍ಎಎಲ್‍ ಅಧ್ಯಕ್ಷ ಆರ್‍. ಮಾಧವನ್‍, ಹಗುರ ಯುದ್ಧ ವಿಮಾನತೇಜಸ್‍ಗೆ ಎಫ್ಒಸಿ ದೊರೆತಿದೆ. 83 ತೇಜಸ್ ವಿಮಾನಗಳ ಖರೀದಿ ಪ್ರಸ್ತಾವನೆಯನ್ನು ವಾಯುಪಡೆ ಶೀಘ್ರದಲ್ಲೇಅಂತಿಮಗೊಳಿಸುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap