ತುಮಕೂರು
ಶುಕ್ರವಾರ ಸಂಜೆ ನಗರದಲ್ಲಿ ಸುರಿದ ಮಳೆ, ಬಿರುಗಾಳಿಗೆ ಕೆ ಆರ್ ಬಡಾವಣೆಯ ಪೊಲೀಸ್ ವಸತಿ ಗೃಹಗಳ ಸೋಲಾರ್ ಶೀಟುಗಳು ಹಾರಿ ಬಿದ್ದವು.ತುಂಗಾ ಹಾಗೂ ಭದ್ರಾ ವಸತಿ ಸಂಕೀರ್ಣದ ಮೇಲೆ ಅಳವಡಿಸಿದ್ದ ಸೋಲಾರ್ ಶಿಟುಗಳು ಬಿರುಗಾಳಿಗೆ ಸಿಕ್ಕಿ ಚೆಲ್ಲಾಪಿಲ್ಲಿಯಾದವು. ಸುಮಾರು ಅರ್ಧ ಗಂಟೆ ಕಾಲ ಬಿರುಗಾಳಿ ಬೀಸಿತು. ಮನೆ ಮೇಲಿದ್ದ ಸೋಲಾರ್ ಶೀಟುಗಳು ಕಿತ್ತಿಕೊಂಡು ತೂರಿಬಿದ್ದವು. ಈ ವೇಳೆ ಹೊರಗೆ ಯಾರೂ ಇಲ್ಲದ ಕಾರಣ ಯಾವುದೇ ಅನಾಹುತವಾಗಲಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
