ಹುಳಿಯರು:
ಮುಂಗಾರು ಹಂಗಾಮಿಗಾಗಿ ರೈತರಿಗೆ ಕೃಷಿ ಇಲಾಖೆಯಿಂದ ರಾಗಿ ಮತ್ತು ದ್ವಿದಳ ಧಾನ್ಯ ಬಿತ್ತನೆ ಬೀಜಗಳ ವಿತರಣೆ ಕಾರ್ಯ ಆರಂಭವಾಗಿದೆ.
ಕೃಷಿ ಅಧಿಕಾರಿ ಕರಿಬಸವಯ್ಯ ಅವರು ಹುಳಿಯಾರಿನ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಿಸಿ ಮಾತನಾಡಿ ಸದ್ಯ ರಾಗಿ, ಅಲಸಂದೆ ಮತ್ತು ತೊಗರಿ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದೆ. 5 ಕೆ.ಜಿ ಚೀಲದಲ್ಲಿ ದೊರೆಯಲಿದ್ದು ಸಬ್ಸಿಡಿ ದರದಲ್ಲಿ ವಿತರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಬಿತ್ತನೆ ಬೀಜಗಳ ಅಗತ್ಯ ಇರುವ ರೈತರು ತಮ್ಮ ಜಮೀನಿನ ಅಸಲಿ ಪಹಣಿ ಪತ್ರ, ಬ್ಯಾಂಕ್ ಪಾಸ್ ಪುಸ್ತಕ, ಆಧಾರ್ ಚೀಟಿಗಳ ನಕಲು ಪ್ರತಿ ಹಾಗೂ ಒಂದು ಭಾವಚಿತ್ರವನ್ನು ನೀಡಬೇಕು ಎಂದು ಹೇಳಿದರು.
ಗೊಬ್ಬರವನ್ನೂ ಸಹ ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದ್ದು ಜಿಪ್ಸಮ್ 50 ಕೆಜಿಗೆ 96.25 ರೂ, ಜಿಂಕ್‍ಗೆ 5 ಕೆಜಿಗೆ 112.50 ರೂ. ಬೋರಾಕ್ಸ್‍ಗೆ 2 ಕೆಜಿಗೆ 80 ರೂನಂತೆ ವಿತರಿಸಲಾಗುತ್ತಿದೆ. ಅಗತ್ಯವಿರುವ ರೈತರು ಪಡೆಯುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಕೃಷಿ ಅಧಿಕಾರಿ ತಿಪ್ಪೇಸ್ವಾಮಿ, ರೈತ ಅನುವುಗಾರರಾದ ಬಸವರಾಜು, ಮಂಜುನಾಥ್, ಶಂಕರಪ್ಪ, ಜಯಣ್ಣ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
