ಚಿತ್ರದುರ್ಗ
ರೈತರ ಸಂಕಷ್ಟಗಳನ್ನು ತಿಳಿಸುವ ಸಲುವಾಗಿ ಈ ಮಾಹೆ 30ರೊಳಗಾಗಿ ತಮ್ಮ ಅಧ್ಯಕ್ಷತೆಯಲ್ಲಿ ಸಭೆಯನ್ನು ಕರೆಯುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ಜಿಲ್ಲಾಡಳಿತವನ್ನು ಆಗ್ರಹಿಸಿದೆ.
ನಗರದದಲ್ಲಿ ಇಂದು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಈ ಬಗ್ಗೆ ಪ್ರತಿಭಟನೆಯನ್ನು ನಡೆಸಿದ ರೈತ ಸಂಘದ ಪದಾಧಿಕಾರಿಗಳು ರೈತರ ಸಮಸ್ಯೆಗಳಿಗೆ ಜಿಲ್ಲಾಡಳಿತ ಸ್ಪಂದಿಸಬೇಕು, ನಮ್ಮ ಬೇಡಿಕೆಗಳಿಗೆ ಮನ್ನಣೆ ನೀಡಬೇಕು ಎಂದು ಆಗ್ರಹಿಸಿದರು
ಈ ವರ್ಷ ಮುಂಗಾರು ಪ್ರಾರಂಭವಾಗಿ ಬಿತ್ತನೆ ರೈತರು ಭೂಮಿಯನ್ನು ಹದ ಮಾಡಿಕೊಳ್ಳುವ ಸಮಯಯಾಗಿದೆ, ಕಳೆದ ಸಾಲಿನಲ್ಲಿ ಸೇಂಗಾವನ್ನು ಯಾವ ರೈತರು ಬೆಳೆಯದೇ ಸಂಪೂರ್ಣವಾಗಿ ಬೆಳೆ ನಷ್ಠವನ್ನು ಹೊಂದಿದ್ದಾರೆ. ಈ ವರ್ಷ ಮುಂಗಾರು ಬಿತ್ತನೆಗೆ ಬಿತ್ತನೆಗೆ ಬೀಜ ಮತ್ತು ಗೊಬ್ಬರವನ್ನು ಸರ್ಕಾರ ಉಚಿತವಾಗಿ ವಿತರಣೆ ಮಾಡಬೇಕು, ರೈತರಿಗೆ ಬ್ಯಾಂಕ್‍ಗಳಿಂದ ಬಡ್ಡಿ ರಹಿತವಾಗಿ 2 ಲಕ್ಷ ರೂ ಸಾಲವನ್ನು ವಿತರಣೆ ಮಾಡಲು ಬ್ಯಾಂಕ್ ಗಳಿಗೆ ಸೂಚನೆ ನೀಡಬೇಕೆಂದು ಆಗ್ರಹಿಸಲಾಯಿತು.
ಕಳೆದ ವರ್ಷ ಬೆಳೆ ನಷ್ಠದ ಇನ್ ಪುಟ್ ಸಹಾಯಧನ ಮತ್ತು ಬೆಳೆ ವಿನ ಕಂಪನಿಯಿಂದ ರೈತರ ಖಾತೆಗೆ ಜಮಾ ಆಗಿಲ್ಲ, ಮತ್ತು ಗ್ರಾಮಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿಗಳನ್ನು ಪ್ರಾರಂಭ ಮಾಡಿಲ್ಲ, ಇದರೊಂದಿಗೆ ಜಿಲ್ಲೆಯ ಎಲ್ಲಾ ಕೆರೆಗಳನ್ನು ಅಭೀವೃದ್ದಿಪಡಿಸಿ ಹೊಳೆತ್ತಿಸುವ ಕೆಲಸವನ್ನು ಮಾಡಿದರೆ ಅಂರ್ತಜಲ ಹೆಚ್ಚಾಗಲಿದೆ ಇದರಿಂದ ಎಲ್ಲಾ ಇಲಾಖೆಯ ಅಧಿಕಾರಿಗಳ ಸಭೆಯನ್ನು ಏ.30 ರೊಳಗಾಗಿ ಕರೆಯುವಂತೆ ಜಿಲ್ಲಾಧ್ಯಕ್ಷ ನುಲೇನೂರು ಶಂಕರಪ್ಪ, ದಯಾನಂದ ಮೂರ್ತಿ, ತಿಪ್ಪೇಸ್ವಾಮಿ. ಹಂಪಣ್ಣ, ಭೂತಯ್ಯ, ಮಂಜುನಾಥ್ ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
