ತುರುವೇಕೆರೆ:
ತಾಲೂಕಿನ ಗಂಗನಹಳ್ಳಿ, ಮಾವಿನಹಳ್ಳಿ, ಕೋಳಗಟ್ಟ ಭಾಗದ ಜನರ ಬಹು ವರ್ಷದ ಬೇಡಿಕೆಯ ಡಾಂಬರ್ ರಸ್ತೆಯ ಕನಸು ಈಡೇರಿದಂತಾಗಿದೆ ಎಂದು ಶಾಸಕ ಮಸಾಲಜಯರಾಮ್ ತಿಳಿಸಿದರು.
ತಾಲೂಕಿನ ಗಂಗನಹಳ್ಳಿ ಗ್ರಾಮದಲ್ಲಿ ಶುಕ್ರವಾರ 93 ಲಕ್ಷ ರೂ ವೆಚ್ಚದಲ್ಲಿ ಮಾವಿನಹಳ್ಳಿ, ಕೋಳಗಟ್ಟ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದದ ಅವರು ಈ ರಸ್ತೆಯಲ್ಲಿ ನಾನು ಚುನಾವಣಾ ಪ್ರಚಾರಕ್ಕೆಂದು ಬಂದಿದ್ದ ಸಂಧರ್ಭದಲ್ಲಿ ರಸ್ತೆಯಲ್ಲಿ ಬಿದ್ದಿದ್ದ ಗುಂಡಿಗಳು ನನ್ನ ಅನುಭವಕ್ಕೆ ಬಂದಿತ್ತು, ಈ ಹಳ್ಳಿಗಳಿಗೆ ಶಾಶ್ವತ ರಸ್ತೆ ನಿರ್ಮಿಸಿಕೊಡಬೇಕೆಂದು ತೀರ್ಮಾನಿಸಲಾಗಿತ್ತು ಭಾಗದ ಜನರ ಬಹುದಿನದ ಬೇಡಿಕೆಯನ್ನು ಈಡೇರಿಸಲಾಗಿದೆ. ಮುಂದಿನ ವರ್ಷದಲ್ಲಿ ಇದೇ ಭಾಗದಲ್ಲಿ ಸುಮಾರು ಹತ್ತಾರು ಕಾಂಕ್ರಿಟ್ ರಸ್ತೆ ನಿರ್ಮಿಸುವ ಗುರಿ ಹೊಂದಿದ್ದೇನೆ ಎಂದು ತಿಳಿಸಿದರು.
ಈಗಾಗಲೇ ಕುಡಿಯುವ ನೀರಿನ ಸಮಸ್ಯೆಗೆ ಸಂಭಂದಿಸಿದಂತೆ ಇಂಜಿನಿಯರ್‍ಗಳ ಸಭೆ ಕರೆದು ತಾಲೂಕಿನ ಯಾವ ಭಾಗಗಳಿಗೆ ಅಗತ್ಯ ನೀರಿನ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ತಿಳಿಸಿದ್ದು ನಿಮ್ಮ ಹಳ್ಳಿಗಳಲ್ಲಿಯೂ ಕುಡಿಯುವ ನೀರಿನ ಸಮಸ್ಯೆಗಳಿದ್ದರೆ ಕೂಡಲೇ ನನ್ನ ಗಮನಕ್ಕೆ ತನ್ನಿ ಒಂದು ವಾರದೊಳಗೆ ನಿಮ್ಮ ಹಳ್ಳಿಯ ಕುಡಿಯುವ ನೀರಿನ ಸಮಸ್ಯೆಯನ್ನು ಬಗಹರಿಸುತ್ತೇನೆಂದು ತಾಲೂಕಿನ ಜನಕ್ಕೆ ಭರವಸೆ ನೀಡಿದರು.
ಈ ಸಂಧರ್ಭದಲ್ಲಿ ತಾ.ಪಂ.ಉಪಾಧ್ಯಕ್ಷೆ ಹೇಮಾವತಿಶಿವಾನಂದ್, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ದುಂಡಾರೇಣುಕಪ್ಪ, ಎ.ಪಿ.ಎಂ.ಸಿ.ಮಾಜಿ ಅಧ್ಯಕ್ಷ ಕೊಂಡಜ್ಜಿ ವಿಶ್ವನಾಥ್, ಹೇಮಾವತಿ ನಿಗಮದ ಎ.ಇ.ಇ.ದೇವರಾಜ್, ಮುಖಂಡರುಗಳಾದ ಬಿ.ಎಮ್.ಎಸ್.ಉಮೇಶ್, ಚಿದಾನಂದ್, ಮಿಥುನ್‍ಹನುಮಂತೇಗೌಡ, ವೀರೇಂದ್ರಪಾಟೀಲ್, ಕೆಂಪರಾಜು, ಶಿವಕುಮಾರ್, ಕಂಚೀಪತಿ, ಕುಮಾರಸ್ವಾಮಿ, ಸೇರಿದಂತೆ ಗ್ರಾಮದ ಮುಖಂಡರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ