ಬಿಜೆಪಿಯವರು ಮೂರೂ ಬಿಟ್ಟವರು : ದಿನೇಶ್ ಗುಂಡೂರಾವ್

ಬೆಂಗಳೂರು

        ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು ರಾಜಕಾರಣ ಮಾಡುವ ಬಿಜೆಪಿ ನಾಯಕರು ಮೂರೂ ಬಿಟ್ಟವರು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಇಂದಿಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

       ಮೊಳಕಾಲ್ಮೂರು ಕ್ಷೇತ್ರದ ಮಾಜಿ ಶಾಸಕ ತಿಪ್ಪೇಸ್ವಾಮಿ ಬಿಜೆಪಿ ತೊರೆದು ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದು, ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಅವರು, ಸೇನಾ ಕಾರ್ಯಾಚರಣೆ ಸೇರಿದಂತೆ ಪ್ರತಿಯೊಂದನ್ನೂ ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳುವ ಬಿಜೆಪಿ ನಾಯಕರು ಎಲ್ಲವನ್ನೂ ಬಿಟ್ಟ ಲಜ್ಜೆಗೆಟ್ಟವರು ಎಂದು ಟೀಕಿಸಿದರು‌.

      ಬಿಜೆಪಿಯವರು ದೇಶದ ಹಿತ ರಕ್ಷಿಸುವ ಒಂದೇ ಒಂದು ಕೆಲಸ ಮಾಡಿಲ್ಲ. ಆದರೆ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರ ವಿಚಾರವನ್ನು ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ರಾಜಕೀಯಕ್ಕೆ ಬಳಸಿಕೊಂಡಿದ್ದು ಅಕ್ಷಮ್ಯ ಅಪರಾಧ. ಇದನ್ನು ಆ ಪಕ್ಷದ ನಾಯಕರು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

     “ತಿಪ್ಪೇಸ್ವಾಮಿ ಅವರಿಗೆ ಮೊಳಕಾಲ್ಮೂರು ಕ್ಷೇತ್ರದಲ್ಲಿ ತಳಮಟ್ಟದಿಂದ ಜನಸಂಪರ್ಕವಿದೆ. ತಮ್ಮ ಸಮಾಜಮುಖಿ ಕಾರ್ಯಗಳಿಂದ ಅವರು ಹೆಸರಾಗಿದ್ದಾರೆ. ಇದೇ ಕಾರಣಕ್ಕೆ ತಿಪ್ಪೇಸ್ವಾಮಿಯವರ ಆಗಮನ ಮುಂಬರುವ ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲವಾಗಲಿದೆ” ಎಂದು ದಿನೇಶ್ ಗುಂಡೂರಾವ್ ಹೇಳಿದರು.ದಿನೇಶ್ ಗುಂಡೂರಾವ್ ಪಕ್ಷದ ಧ್ವಜವನ್ನು ತಿಪ್ಪೇಸ್ವಾಮಿ ಅವರಿಗೆ ಹಸ್ತಾಂತರಿಸಿ ಅವರನ್ನು ಕೈ ಪಕ್ಷಕ್ಕೆ ಬರಮಾಡಿಕೊಂಡರು.

       ಕಾಂಗ್ರೆಸ್ ಸೇರಿದ ತಿಪ್ಪೇಸ್ವಾಮಿ ಮಾತನಾಡಿ “ಕಳೆದ ಚುನಾವಣೆ ವ್ವೇಳೆ ಶ್ರೀರಾಮುಲು ಅವರು ಅವರ ಮನೆದೇವರಾಣೆಗೂ ಮೊಳಕಾಲ್ಮೂರಿನಲ್ಲಿ ತಿಪ್ಪೇಸ್ವಾಮಿಗೇ ಬಿಜೆಪಿ ಟಿಕೆಟ್ ಎಂದಿದ್ದರು. ಆದರೆ ನಾಮಪತ್ರ ಸಲ್ಲಿಕೆ ಹಿಂದಿನ ದಿನ ತಾವೇ ಅಭ್ಯರ್ಥಿ ಎಂದು ಘೋಷಿಸಿದ್ದರು.

       ಇನ್ನು ಕೇಂದ್ರದ ನರೇಂದ್ರ ಮೋದಿ ಸರ್ಕಾರ ಕಪ್ಪು ಹಣವನ್ನು ವಾಪಾಸು ತರುವುದಾಗಿ ಹೇಳಿತ್ತು. ಪ್ರತಿ ನಾಗರಿಕರ ಖಾತೆಗೆ 15 ಲಕ್ಷ ರು. ಹಾಕುವುದಾಗಿ ಸಹ ಹೇಳಿದ್ದರು. ಆದರೆ ಅದಾವುದೂ ನಿಜವಾಗಿಲ್ಲ. ನಾನು ಐದು ವರ್ಷಗಳ ಕಾಲ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿದ್ದೆ. ಆದರೆ ಕಡೆಗೆ ನನಗೇ ಕೈಕೊಟ್ತರು. ಬಿಜೆಪಿಯನ್ನು ನಂಬಬಾರದು ಎಂದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap