ಬೆಂಗಳೂರು:
ರಾಜ್ಯ ರಾಜಕಾರಣದ ಪಡಸಾಲೆಯಲ್ಲಿ ಈಗ ಚಟುವಟಿಕೆಗಳು ಚುರುಕುಗೊಂಡಿವೆ . ಈ ಮಕರ ಸಂಕ್ರಾಂತಿ ವೇಳೆಗೆ ಬಿಜೆಪಿ ರಾಜ್ಯದ ಮೈತ್ರಿ ಸರ್ಕಾರಕ್ಕೆ ದೊಡ್ಡ ಮಟ್ಟದ ಹೊಡೆತ ನೀಡುವ ಎಲ್ಲಾ ಸೂಚನೆಗಳು ಕಾಣುತ್ತಿವೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಪಾದರಸದಂತೆ ಹರಿದಾಡುತ್ತಿದ್ದು ಇದಕ್ಕೆ ಇಂಬು ಕೊಡುವಂತೆ ಕೆಲ ಕಾಂಗ್ರೆಸ್ ಶಾಸಕರು ಮೈತ್ರಿ ನಾಯಕರ ಕೈಗೆ ಸಿಗದೆ ಓಡಾಡುತ್ತಿರುವುದು ಸರ್ಕಾರದಲ್ಲಿ ನಡುಕ ಹುಟ್ಟಿಸಿರುವುದಂತು ಸುಳ್ಳಲ್ಲ.
ಕಾಂಗ್ರೆಸ್ ನ ಕೆಲ ಅತೃಪ್ತ ಶಾಸಕರು ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂಬ ಗುಮಾನಿ ಹಬ್ಬಿದೆ. ಇನ್ನು ಕೆಲ ಶಾಸಕರು ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು ಕೆಲವರು ಬಹಿರಂಗವಾಗಿ ಕಾಂಗ್ರೆಸ್ ನ ವಿರುದ್ಧ ಮಾತನಾಡುತ್ತಿ ರುವುದು ಇತ್ತೀಚೆಗೆ ಸರ್ವೆಸಾಮಾನ್ಯ ವಾಗಿ ಬಿಟ್ಟಿದೆ. ಒಟ್ಟಿನಲ್ಲಿ ಮೈತ್ರಿ ಪಕ್ಷಗಳಲ್ಲಿ ದೊಡ್ಡ ಮಟ್ಟದಲ್ಲಿ ಬಂಡಾಯ ಏಳುವ ಸಾಧ್ಯತೆ ಇದೆ ಎಂಬುದು ಗೋಚರಿಸುತ್ತಿದೆ, ಮತ್ತು ಇತ್ತ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ ಇದರಿಂದ ಸರ್ಕಾರಕ್ಕೆ ಬಿಜೆಪಿ ಮಗ್ಗುಲ ಮುಳ್ಳಾಗಿ ಪರಿಣಿಸಿದೆ ಎಂದು ರಾಜಕೀಯ ವಿಷ್ಲೇಶಕರು ತಿಳಿಸಿದ್ದಾರೆ.