ಚಿತ್ರದುರ್ಗ
ಬಿಜೆಪಿ ಅಧಿಕಾರವನ್ನು ಹಿಡಿಯಲು ಮಾಮವಾರ್ಗವನ್ನು ಅನುಸರಿಸುತ್ತಿದೆ ಇದು ನಡೆಯುವುದಿಲ್ಲ ರಾಜ ಮಾರ್ಗದಲ್ಲಿ ಅಧಿಕಾರವನ್ನು ಹಿಡಿಯುವುದನ್ನು ಕಲಿಯಬೇಕು ಎಂದು ಮಾಜಿ ಸಚಿವ ಹೆಚ್. ಅಂಜನೇಯ ವಿರೋಧ ಪಕ್ಷಕ್ಕೆ ಟಾಂಗ್ ನೀಡಿದ್ದಾರೆ.
ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಚುನಾವಣೆಯ ನಂತರ ಸುದ್ದಿಗಾರರೊಂದಿಗೆ ಜಿ.ಪ. ಆವರಣದಲ್ಲಿ ಮಾತನಾಡಿದ ಅವರು, ಜಿಲ್ಲಾ ಪಂಚಾಯಿತಿಯಲ್ಲಿ ಬಿಜೆಪಿ ಕಡಿಮೆ ಸ್ಥಾನ ಇದ್ದರು ಸಹಾ ನಮ್ಮ ಪಕ್ಷದವರನ್ನು ಎತ್ತು ಹಾಕಿ ಕೊಂಡಿ ಹೋಗಿ ಅವರನ್ನು ಬಂಧನದಲ್ಲಿ ಇರಿಸಲಾಗಿತ್ತು ಸುದ್ದಿ ತಿಳಿದು ಅವರನ್ನು ನಮ್ಮವರು ಹೋಗಿ ಬಿಡಿಸಿಕೊಂಡು ಬಂದಿದ್ದಾರೆ. ಅಧ್ಯಕ್ಷರಾಗಲು ಬೇಕಾದ ಸ್ಥಾನ ಇಲ್ಲದಿರುವಾಗ ಸಮ್ಮನೆ ಇರಬೇಕು ಆದರೆ ವಾಮಮಾರ್ಗದಲ್ಲಿ ಅಧಿಕಾರವನ್ನು ಹಿಡಿಯುವ ಕಾರ್ಯ ಸರಿಯಾದುದ್ದಲ್ಲ ಎಂದು ತಿಳಿಸಿದರು.
ಮುಂದಿನ ದಿನದಲ್ಲಿ ಲೋಕಸಭಾ ಚುನಾವಣೆ ಬಂದಿದೆ, ಮತದಾರರ ಎಲ್ಲವನ್ನು ಸಹಾ ನೋಡುತ್ತಿದ್ದಾನೆ, ಯಾರು ಪವಿತ್ರ ಯಾರು ಅಪವಿತ್ರ ಎಂದು ಮತದಾನ ಸಮಯದಲ್ಲಿ ತಕ್ಕ ಉತ್ತರವನ್ನು ನೀಡಲಿದ್ದಾನೆ. ರಾಜ್ಯದ ಅಧಿಕಾರವನ್ನು ಹಿಡಿಯುವಾಗಲೂ ಸಹಾ ಇದೇ ಸಂಖ್ಯಾ ಬಲ ಇಲ್ಲದಿದ್ದರು ಸಹಾ ವಾಮಮಾರ್ಗದಲ್ಲಿ ಅಧಿಕಾರವನ್ನು ಹಿಡಿಯುವ ಸಲುವಾಗಿ ವಿವಿಧ ರೀತಿಯ ಆಟವನ್ನು ಆಡಿದ್ಧಾರೆ, ನಮ್ಮ ಮತ್ತು ಜೆಡಿಎಸ್ ನ ಶಾಸಕರಿಗೆ ಅಧಿಕಾರ ಮತ್ತು ಹಣದ ಆಸೆಯನ್ನು ತೋರಿಸುವುದರ ಮೂಲಕ ಆವರನ್ನು ಸೆಳೆಯುವ ಕಾರ್ಯವನ್ನು ಮಾಡಿದ್ದಾರೆ ಆದರೆ ಅದು ನಡೆಯಲಿಲ್ಲ ಎಂದು ಅಂಜನೇಯ ಹೇಳೀದರು.
ಸಾಮಾಜಿಕ ನ್ಯಾಯ.
ಕಾಂಗ್ರೇಸ್ ಪಕ್ಷ ಮುಂಚಿನಿಂದಲೂ ಸಹಾ ಸಾಮಾಜಿಕ ನ್ಯಾಯದ ಪರವಾಗಿ ಇದೆ, ಈ ಹಿಂದೆ ಮಾತು ಕೊಟ್ಟಂತೆ ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಅಧ್ಯಕ್ಷರನ್ನಾಗಿ ಉಪ್ಪಾರ ಜನಾಂಗದ ಶ್ರೀಮತಿ ವಿಶಾಲಾಕ್ಷಿ ನಟರಾಜ್ ರವರನ್ನು ಆಭ್ಯರ್ಥಿ ಎಂದು ಆಯ್ಕೆ ಮಾಡಿದ್ದಲ್ಲದೆ ಆವರು ಆಧ್ಯಕ್ಷರಾಗಿ ಆಯ್ಕೆಯಾಗಲು ಸಹಾ ಸಹಾಯ ಮಾಡಲಾಗಿದೆ. ಈ ಹಿಂದೆ ಶ್ರೀಮತಿ ಸೌಭಾಗ್ಯರವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು ಮಾತಿನಂತೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡದಿದ್ದರಿಂದ ಅವಿಶ್ವಾಸವನ್ನು ತರುವುದರ ಮೂಲಕ ಇಳಿಸಲಾಯಿತು ಎಂದರು.
ಮತ್ತೋಮ್ಮೆ ಆಯ್ಕೆ :
ಈಗಾಗಲೇ ಜಿಲ್ಲೆಯ ಸಂಸದರಾಗಿ ಆಯ್ಕೆಯಾಗಿ ಕಳೆದ 5 ವರ್ಷಗಳಿಂದ ಉತಮವಾದ ಕಾರ್ಯಗಳನ್ನು ಮಾಡುತ್ತಾ ಮನೆಯ ಮಗನೆಂದು ಹೆಸರಾಗಿರುವ ಸಂಸದ ಚಂದ್ರಪ್ಪರವರ ಗುಣ ನಡೆತೆಯನ್ನು ನೋಡಿ ಪಕ್ಷದ ಹೈಕಮಾಂಡ್ ಇವರಿಗೆ ಮತ್ತೊಮ್ಮೆ ಸ್ಪರ್ಧೇ ಮಾಡಲು ಅವಕಾಶ ನೀಡಿದೆ ಎಂದು ಆಂಜನೇಯ ಹೇಳಿದರು
ಈ ಭಾರಿ ಅವರನ್ನು ಕಳೇದ ಬಾರಿಗಿಂತ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಬೇಕಿದೆ. ಕಳೆದ ಬಾರಿ ಎದುರಾಳಿಯಾಗಿದ್ದ ಜೆಡಿಎಸ್ ಈ ಬಾರಿ ಮೈತ್ರಿ ಸರ್ಕಾರವಾಗಿದ್ದರಿಂದ ನಮ್ಮ ಬೆಂಬಲಕ್ಕೆ ನಿಂತಿದೆ, ಆದ್ದರಿಂದ ಈ ಭಾರಿ ಗೆಲುವು ರಾಜ್ಯದಲ್ಲಿಯೆ ಅಧಿಕ ಮತಗಳ ಅಂತರದಿಂದ ಆಗಬೇಕಿದೆ ಎಂದು ಮಾಜಿ ಸಚಿವ ಅಂಜನೇಯ ತಿಳಿಸಿದರು.
ಸಂಸದ ಚಂದ್ರಪ್ಪ ಜಿ.ಪಂ.ನೂತನ ಅಧ್ಯಕ್ಷೆ ಶ್ರೀಮತಿ ವಿಶಾಲಾಕ್ಷಿ ನಟರಾಜ್,ಕಾಂಗ್ರೇಸ್ ಅಧ್ಯಕ್ಷ ಫಾತ್ಯರಾಜನ್, ಮುಖಂಡರಾದ ಹನುಮಲಿ ಷಣ್ಮೂಖಪ್ಪ, ಮೈಲಾರಪ್ಪ, ಮಹಡಿ ಶಿವಮೂರ್ತಿ ಸೇರಿದಂತೆ ಜಿಲ್ಲಾ ಪಂಚಾಯಿತಿಯ ಸದಸ್ಯರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
