ಬಿಜೆಪಿಗೆ ಜೆಡಿಯು ಬೆಂಬಲ

ತುಮಕೂರು:

       ಜೆಡಿಯು ರಾಷ್ಟ್ರಾಧ್ಯಕ್ಷ ನಿತೀಶ್‍ಕುಮಾರ್ ರಾಜಕೀಯ ರಂಗದ ಪ್ರಬುದ್ಧ ನಾಯಕ ಎಂದು ಜಿಲ್ಲಾ ಜೆಡಿಯು ಅಧ್ಯಕ್ಷ ಕೆ.ಜಿ.ಎಲ್. ರವಿ ಹೇಳಿದ್ದಾರೆ. ಬಿಹಾರದಲ್ಲಿ ಎನ್‍ಡಿಎ ಪರ ವಾತಾವರಣವಿದ್ದು, ಉತ್ತಮ ಅಭಿವೃದ್ಧಿ ಕಾರ್ಯಕ್ರಮಗಳನ್ನು ನೀಡುವಲ್ಲಿ ಯಶಸ್ವಿ ನಾಯಕ ಎನಿಸಿದ್ದಾರೆ. ನಮ್ಮ ನಾಯಕ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು. ಇವರು ರಾಷ್ಟ್ರದ ಅಭ್ಯುದಯಕ್ಕೆ ಹೊಸ ನಾಂದಿ ಹಾಡಿದ್ದಾರೆ ಎಂದರು.

       ಪ್ರಧಾನಿ ನರೇಂದ್ರ ಮೋದಿಯವರು ಜಾರಿ ಮಾಡಿದ ಕಾರ್ಯಕ್ರಮಗಳು, ಅವರ ವರ್ಚಸ್ಸು, ಇತ್ಯಾದಿ ಅಂಶಗಳು ಈ ಚುನಾವಣೆಯಲ್ಲಿ ಮಹತ್ವದ ಪಡೆದುಕೊಂಡಿವೆ. ಯೋಧರು ಹುತಾತ್ಮರಾದ ಬಳಿಕ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳು ಎಲ್ಲರಿಗೂ ತೃಪ್ತಿ ತಂದಿದೆ. ಹೀಗಾಗಿ ದೇಶದ ಜನತೆ ಮೋದಿ ಪರವಾಗಿದ್ದಾರೆ ಎಂದು ಹೇಳಿದ್ದಾರೆ.

       ಬಿಹಾರದಲ್ಲಿ ಆರ್‍ಜೆಡಿ ಮತ್ತು ಕಾಂಗ್ರೆಸ್ ಮಹಾಮೈತ್ರಿ ಕೂಟ ಮಾಡಿಕೊಂಡಿರುವುದಾಗಿ ಹೇಳಿಕೊಳ್ಳುತ್ತಿವೆ. ಆದರೆ ಅದು ಎಲ್ಲಿದೆ ಎಂದು ಕೇಳಬೇಕಾಗುತ್ತದೆ ಅವರದ್ದು ಕೇವಲ ಮೈತ್ರಿಕೂಟ. ಮಹಾಮೈತ್ರಿಕೂಟ ಅಲ್ಲ. ಅವರ ಬಾಂಧವ್ಯ ಯಾವ ಬಗೆಯದ್ದು ಎಂದು ಜನತೆ ಯೋಚಿಸುತ್ತಿದ್ದಾರೆ ಎಂದಿದ್ದಾರೆ.

    ನಿತೀಶ್‍ಕುಮಾರ್ ಅವರ ಮಾತು ಉತ್ತಮ ಮಾರ್ಗದರ್ಶನವಾಗಿದೆ. ಹೀಗಾಗಿ ನಾವು ತುಮಕೂರು ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುತ್ತೇವೆ. 10 ತಾಲ್ಲೂಕು ಸಮಿತಿ ಈ ಮಾತಿಗೆ ಬದ್ಧವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link