ಬಿಜೆಪಿ ಈಗಾಗಲೆ ಸೋಲೊಪ್ಪಿಕೊಂಡಿದೆ : ಉಗ್ರಪ್ಪ

ಬೆಂಗಳೂರು

     ಕೇಂದ್ರ ಸಚಿವ ಸದಾನಂದಗೌಡ ಹಾಗೂ ಸಚಿವ ಕೆ.ಎಸ್.ಈಶ್ವರಪ್ಪ ಅನರ್ಹ ಶಾಸಕರನ್ನು ಅಳಿಯ ಹಾಗೂ ಸೊಸೆಗೆ ಹೋಲಿಕೆ ಮಾಡಿ, ಎಲ್ಲ ಸೊಸೆಯಂದಿರಿಗೂ ಹಾಗೂ ಅಳಿಯಂದಿರಿಗೂ ಅವಮಾನ ಮಾಡಿದ್ದು ಇಬ್ಬರೂ ನಾಯಕರು ಅಳಿಯಂದಿರು ಹಾಗೂ ಸೊಸೆಯಂದಿರ ಕ್ಷಮೆ ಕೋರಬೇಕು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಗ್ರಹಿಸಿದ್ದಾರೆ.

     ಕೆಪಿಸಿಸಿ ಕಚೆರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವರಾದ ಈಶ್ವರಪ್ಪ ಅನರ್ಹರನ್ನು ಬಿಜೆಪಿ ಮನೆಗೆ ಬಂದಿರುವ ಅಳಿಯಂದಿರು ಎಂದಿದ್ದಾರೆ. ಯಾವ ಅಳಿಯಂದಿರುವ ತಮ್ಮ ಮನೆ ಹಾಗೂ ಮಾವನ ಮನೆ ಹಾಳು ಮಾಡಬೇಕೆಂದು ಬಯಸುವುದಿಲ್ಲ. ಅದೇ ರೀತಿ ಕೇಂದ್ರ ಸಚಿವ ಸದಾನಂದಗೌಡ ಸೊಸೆಯಂದಿರು ಎಂದಿದ್ದಾರೆ. ಈ ಮೂಲಕ ಹೆಣ್ಣು ಕುಲಕ್ಕೆ ಅವಮಾನ ಮಾಡಿದ್ದಾರೆ. ಯಾವ ಹೆಣ್ಣು ಮಗಳೂ ಅತ್ತೆ ಮನೆಗೆ ಯಾವತ್ತು ದ್ರೋಹ ಮಾಡುವುದಿಲ್ಲ. ಎರಡೂ ಮನೆ ಚೆನ್ನಾಗಿರಲಿ ಅಂತ ಬಯಸುತ್ತಾರೆ. ಹೀಗಾಗಿ ಇಬ್ಬರೂ ನಾಯಕರು ಅಳಿಯಂದಿರು ಹಾಗೂ ಸೊಸೆಯಂದಿರ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.

      ಬಿಜೆಪಿಯವರು ಈ ಚುನಾವಣೆಯಲ್ಲಿ ಈಗಾಗಲೇ ಸೋಲು ಒಪ್ಪಿಕೊಂಡಿದ್ದಾರೆ. ಹೀಗಾಗಿ ಅಕ್ರಮ ಮಾರ್ಗದಲ್ಲಿ ಚುನಾವಣೆ ಗೆಲ್ಲಲು ಪ್ರಯತ್ನ ನಡೆಸಿದ್ದಾರೆ. ಹುಣಸೂರಿನಲ್ಲಿ ಸೀರೆ ಹಂಚಲು ತಂದಿರುವುದು. ಅನರ್ಹರಿಗೆ ಮಂತ್ರಿ ಮಾಡುತ್ತೇವೆ ಎಂದು ಹೇಳಿರುವುದು. ಆರ್. ಶಂಕರ್ಗೆ ಎಂ ಎಲï ಸಿ ಮಾಡಿ ಮಂತ್ರಿ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರ್ಪ ಹೇಳಿz?ದÁರೆ. ಯಡಿಯೂರಪ್ಪ ಅವರು ಮೂರು ಬಿಟ್ಟವರು ಊರಿಗೆ ದೊಡ್ಡವರು ಅನ್ನುವಂತೆ ನಡೆದುಕೊಳ್ಳುತ್ತಿದ್ದಾರೆ. ಚುನಾವಣಾ ಆಯೋಗ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

      ಚುನಾವಣೆಯಲ್ಲಿ ಮತದಾರರ ತೀರ್ಪು ಅಂತಿಮವಾಗುತ್ತದೆ. ಇದರಲ್ಲಿ ಯಾವುದೇ ಪವಾಡ ನಡೆಸಲು ಆಗುವುದಿಲ್ಲ. ಏನಾದರೂ ಪವಾಡ ಮಾಡಬೇಕೆಂದರೆ ಇವಿಎಂ ಹ್ಯಾಕ್ ಮಾಡಬಹುದು. ಪ್ರಧಾನಿ ಮೋದಿಯವರು ಈಗಲೂ ಇವಿಎಂ ಬಿಟ್ಟು ಬ್ಯಾಲೆಟï ಪೇಪರ್ ಮೇಲೆ ಚುನಾವಣೆ ಗೆದ್ದು ಬರಲಿ ಅವರಿಗೆ ನಾನು ಶರಣಾಗುತ್ತೇನೆ ಎಂದು ಉಗ್ರಪ್ಪ ಸವಾಲು ಹಾಕಿದರು.ಬಿಜೆಪಿಗೆ ದೇಶದ ಎಲ್ಲ ಜನರೂ ಮತ ಹಾಕಿದ್ದರೆ ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಛತ್ತೀಸ್‍ಗಢ, ಹರಿಯಾಣದಲ್ಲಿ ಯಾಕೆ ಬಿಜೆಪಿಗೆ ಬಹುಮತ ಬರಲಿಲ್ಲ ಎಂದು ಪ್ರಶ್ನಿಸಿದರು.

      ಇದೇ ವೇಳೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್‍ನವರು ಹಿಂದೂ ವಿರೊಧಿಗಳಲ್ಲ. ಸರ್ವೇ ಜನ ಸುಖಿನೋ ಭವಂತು ಎನ್ನುವ ತತ್ವದಲ್ಲಿ ನಾವು ನಂಬಿಕೆ ಇಟ್ಟಿದ್ದೇವೆ. ಬಿಜೆಪಿಯವರದ್ದು ಹಿಂದುತ್ವ ಅಲ್ಲ. ಮತೀಯವಾದ.

      ಮಹಾರಾಷ್ಟ್ರದಲ್ಲಿ ಶಿವಸೇನೆಯವರು ಬಿಜೆಪಿಯ ಮತೀಯವಾದ ಹಾಗೂ ವಿತಂಡವಾದನ್ನು ವಿರೋಧಿಸಿ ಹೊರಗೆ ಬಂದಿದ್ದಾರೆ ಮಹಾರಾಷ್ಟ್ರದಲ್ಲಿ ಸಾಮಾನ್ಯ ಕನಿಷ್ಟ ಕಾರ್ಯಕ್ರಮದ ಅಡಿಯಲ್ಲಿ ಸರ್ಕಾರ ರಚನೆಗೆ ಮುಂದಾದರೆ, ಅದನ್ನು ಬಿಜೆಪಿಯವರು ವಿರೋಧಿಸುತ್ತಾರೆ. ಕಾಶ್ಮೀರದಲ್ಲಿ ಪಿಡಿಪಿ ಜೊತೆ ಬಿಜೆಪಿ ಮೈತ್ರಿ ಮಾಡಿಕೊಳ್ಳಬಹುದು ಆದರೆ ನಾವು ಶಿವಸೇನೆ ಜೊತೆ ಏಕೆ ಮಾಡಿಕೊಳ್ಳಬಾರದು ಎಂದು ಪ್ರಶ್ನಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link