ಬೆಂಗಳೂರು
ರಾಜರಾಜೇಶ್ವರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಈಗಷ್ಟೇ ರಾಜಕೀಯದಲ್ಲಿ ಕಣ್ಣುಬಿಡುತ್ತಿದ್ದು, ನಾಮಪತ್ರ ಸಲ್ಲಿಕೆಗೆ ಬಂದ ಹೆಣ್ಣುಮಗಳ ಮೇಲೆ ಬಿಜೆಪಿ ವಿನಾಕಾರಣ ಪ್ರಕರಣ ದಾಖಲಿಸಿ ತನ್ನ ನೀಚ ಹಾಗೂ ಸಣ್ಣತನವನ್ನು ಮೆರೆದಿದೆ.ಬಿಜೆಪಿಯದ್ದು ಹೇಡಿತನದ ರಾಜಕಾರಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯ ದುರುದ್ದೇಶದ ದೂರು ವಿರೋಧಿಸಿ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಶಿವಕುಮಾರ್ ಹೇಳಿದ್ದಾರೆ .ಸದಾಶಿವನಗರದ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವಕುಮಾರ್, ಕ್ಷೇತ್ರದಲ್ಲಿ ಬಿಜೆಪಿಯ ಮೇಲೆ 1200 ಪ್ರಕರಣಗಳು ದಾಖಲಾಗಿವೆ. ಇದಕ್ಕಾಗಿ ಬಿಜೆಪಿ ನಾಯಕರು ಆಕ್ರೋಶಗೊಂಡು ಈ ರೀತಿ ಕುಸುಮಾ ಮೇಲೆ ದೂರು ದಾಖಲಿಸಿ ತಮ್ಮ ಸಣ್ಣತನ ಮೆರೆದಿದ್ದಾರೆ. ಈ ಹಿಂದೆ ಮೂವರು ಬಿಬಿಎಂಪಿ ಮಹಿಳಾ ಸದಸ್ಯರು ಆಗಿನ ಶಾಸಕರ ವಿರುದ್ಧ ದೂರು ದಾಖಲಿಸಿದ್ದರೂ ನಾನು ಅಸಹಾಯಕನಾಗಿದ್ದೆ.
ಇಂತಹ ಕುತಂತ್ರದ ಅಭ್ಯರ್ಥಿಯನ್ನು ನಾವೇ ಬೆಳೆಸಿದ್ದೇವೆ. ನಾವು ತಪ್ಪು ಮಾಡಿದ್ದೇವೆ ನಿಜ, ಅದಕ್ಕೆ ನೋವಿದೆ.ನಮಗೆ ಮಾತ್ರವಲ್ಲ, ಜೆಡಿಎಸ್ ಬಿಜೆಪಿಯವರಿಗೂ ನೋವಿದೆ. ಬಿಜೆಪಿ ಕಾರ್ಯಕರ್ತರೇ ಫೋನ್ ಮಾಡಿ ಮುನಿರತ್ನ ಬಗ್ಗೆ ತಮ್ಮ ಬಳಿ ಅಳಲು ತೋಡಿಕೊಂಡಿದ್ದಾರೆ.ಎಂದು ಮುನಿರತ್ನ ವಿರುದ್ಧ ಬೇಸರವ್ಯಕ್ತಪಡಿಸಿದರು.
ಈಗ ಬಿಬಿಎಂಪಿ ಅಧಿಕಾರಿಗಳು ಹಾಗೂ ಪೊಲೀಸರನ್ನು ಬಿಜೆಪಿ ನಾಯಕರು ತಮ್ಮ ವಶದಲ್ಲಿಟ್ಟುಕೊಂಡು ಕುಸುಮಾ ಮೇಲೆ ಹೆದರಿಸಿ ಬೆದರಿಸಿ ದೂರು ದಾಖಲಿಸಿದ್ದಾರೆ. ಚುನಾವಣೆಯಲ್ಲಿ ಪ್ರಚಾರ ಮಾಡಬಾರದು, ಹೆದರಿಕೊಂಡು ಮನೆಯಲ್ಲಿಯೇ ಕೂರಬೇಕೆಂಬ ದುರುದ್ದೇಶದಿಂದ ಈ ರೀತಿ ಮಾಡಿದ್ದಾರೆ.ಇದಕ್ಕೆ ಕಾಂಗ್ರೆಸ್ ಹೆದರಿ ಜಾಮೀನು ಪಡೆದುಕೊಳ್ಳುತ್ತದೆ ಎಂದರೆ ಅದು ಬಿಜೆಪಿಯ ಮೂರ್ಖತನ ಎಂದರು.
ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ ಹೆಣ್ಣುಮಗಳ ಮೇಲೆ ಪ್ರಕರಣ ದಾಖಲಿಸಿದ ನೀಚ ರಾಜಕಾರಣವನ್ನು ನನ್ನ ರಾಜಕೀಯ ಬದುಕಿನಲ್ಲಿ ಕಂಡಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಷ್ಟು ಹೊಲಸು ರಾಜಕೀಯವನ್ನು ಎಲ್ಲೂ ನೋಡಿಲ್ಲ. ಮುಗ್ಧ, ಅಮಾಯಕ, ನೊಂದ-ಬೆಂದ ಹೆಣ್ಣುಮಗಳ ಮೇಲೆ ದಬ್ಬಾಳಿಕೆ ತೊ1ೀರಿಸುವ ಕಾರ್ಯವನ್ನು ರಾಜ್ಯ ಸರ್ಕಾರ ಮಾಡಿದೆ.
ನಾವು ನಾಮಪತ್ರ ಸಲ್ಲಿಸಲು ಬೆಳಗ್ಗೆ 11.30 ರಿಂದ 12.30 ನಡುವೆ ಕಾಲಾವಕಾಶ ಪಡೆದಿದ್ದೆವು.ನಮ್ಮ ಪಕ್ಷದ ಅಭ್ಯರ್ಥಿ ಜತೆಗೆ ನಾನು ಹಾಗೂ ನಮ್ಮ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬೇರೆ ಬೇರೆ ಮಾರ್ಗಗಳಿಂದ ಬಿಬಿಎಂಪಿ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದ್ದೆವು.ಆದರೆ, ನಿನ್ನೆ ಬಿಬಿಎಂಪಿ ಕಚೇರಿಯ ಆವರಣದಲ್ಲಿ 100 ಮೀಟರ್ ದೂರದಲ್ಲಿ ಹಾಕಿದ್ದ ಬ್ಯಾರಿಕೇಡ್ ಅನ್ನು ತಳ್ಳಿ ಪೆÇಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ಆರೋಪಿಸಿ ಕುಸುಮಾ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.ನಿನ್ನೆ ನಾಮಪತ್ರ ಸಲ್ಲಿಕೆ ವೇಳೆ ಕುಸುಮಾ ಅವರ ಜತೆ ನಾನೂ ಇದ್ದೆ, ಸಿದ್ದರಾಮಯ್ಯನವರೂ ಇದ್ದರು.
ನಮ್ಮ ಮೇಲೆ ಏಕೆ ಪ್ರಕರಣ ದಾಖಲಿಸಿಲ್ಲ. ಬಿಜೆಪಿ ಹಾಗೂ ಜನತಾದಳ ನಾಯಕರು ಕಾರ್ಯಕರ್ತರುಗಳು ಮೆರವಣಿಗೆ ಮಾಡಿಕೊಂಡು ಬ್ಯಾರಿಕೇಡ್ ದಾಟಿ ಒಳಗೆ ಬಂದಿಲ್ಲವೇ? ನಿಯಮ ಮೀರಿ ಮಂತ್ರಿಗಳು, ಉಪಮುಖ್ಯಮಂತ್ರಿಗಳು ತಮ್ಮ ಬೆಂಬಲಿಗರೊಂದಿಗೆ ಎಲ್ಲಿಯವರೆಗೆ ಬಂದಿದ್ದರು ಎಂಬುದಕ್ಕೆ ಅಲ್ಲೇ ಇದ್ದ ಮಾಧ್ಯಮಗಳು ಸಾಕ್ಷಿಯಾಗಿವೆ. ಅವರೆಲ್ಲರ ವಿರುದ್ಧ ಪ್ರಕರಣ ದಾಖಲಿಸದೆ ಕೇವಲ ಕುಸುಮಾ ಅವರ ವಿರುದ್ಧ ಮಾತ್ರ ನಿಯಮ ಉಲ್ಲಂಘನೆ ಆರೋಪ ಹೊರಿಸಿ ಪ್ರಕರಣ ದಾಖಲಿಸಲಾಗಿದೆ. ಇದು ದುರುದ್ದೇಶಪೂರ್ವಕವಾಗಿ ಕೈಗೊಂಡ ಕೃತ್ಯ ಎನ್ನುವುದರಲ್ಲಿ ಸಂಶಯವಿಲ್ಲ. ಈಗಾಗಲೇ ಬಿಜೆಪಿ ಕಾರ್ಯಕರ್ತರ ಮೇಲೆ 1100 ಕೇಸು ದಾಖಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರ ಮೇಲೆ 400, ಜೆಡಿಎಸ್ ಕಾರ್ಯಕರ್ತರ ಮೇಲೂ 200 ಕೇಸು ಹಾಕಿದ್ದಾರೆ. ಮುನಿರತ್ನ ನಮ್ಮ ಶಾಸಕರಾಗಿದ್ದಾಗಲೇ ಕೇಸು ಹಾಕಿಸಿದ್ದಾರೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ