ಹೊಸದುರ್ಗ:
ಹಿಂದುಳಿದ ಸಮುದಾಯಗಳ ಅಭಿವೃದ್ದಿಗೆ ಹೆಚ್ಚು ಒತ್ತು ನೀಡಿರುವ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬುರುಡೇಕಟ್ಟೆ ರಾಜೇಶ್ ತಿಳಿಸಿದರು.ತಾಲ್ಲೂಕಿನ ಮಾಡದಕೆರೆ ಹೋಬಳಿಗಳಲ್ಲಿ ಮನೆ ಮನೆಗೆ ಪ್ರಚಾರದ ವೇಳೆಯಲ್ಲಿ ಮಾತನಾಡಿದರು.
ವಿಶ್ವದ ನಾಯಕನಾಗಿರುವ ನರೇಂದ್ರ ಮೋದಿ ಭಾರತೀಯ ಹೆಮ್ಮೆಯಾಗಿದ್ದಾರೆ. ಹೃದಯದ ಸ್ಟಂಟ್, ಜನೌಷದಿ ಹಾಗೂ ಅಯುಷ್‍ಮಾನ್ ಭಾರತ್ ಯೋಜನೆಯ ಮೂಲಕ ಮೋದಿ ಬಡವರ ಜೀವ ರಕ್ಷಣೆ ಮಾಡಿದ್ದಾರೆ ಎಂದರು.ಈ ವೇಳೆ ಬಿಜೆಪಿ ಮುಖಂಡರಾದ ರಂಗಸ್ವಾಮಿ, ಯುವ ಮೋರ್ಚ ಕಾರ್ಯದರ್ಶಿ ಸಂಜು ಹೋವಳೆ, ಹೆಬ್ಬಳ್ಳಿ ಮಲ್ಲಿಕಾರ್ಜುನ್, ಗೂಳಿಹಟ್ಟಿ ಜಗದೀಶ್, ಅರುಣ್, ಇನ್ನು ಮಂತಾದ ಉಪಸ್ಥಿತರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ