ಬಾಗಲಕೋಟೆ:
ಟಿಪ್ಪು ಜಯಂತಿ ನಿಷೇಧಕ್ಕೆ ಮುಂದಾಗಿರುವ ಸರ್ಕಾರದ ನಿರ್ಧಾರಕ್ಕೆ ತೀವ್ರ ಆಕ್ಷೇಪ ವ್ಯಕ್ತ ಪಡಿಸಿರುವ ಸಿದ್ದರಾಮಯ್ಯ ಬ್ರಿಟಿಷರ ವಿರುದ್ಧ ಟಿಪ್ಪು ಸುಲ್ತಾನ್ ಹೋರಾಡಿದ್ದು ನಿಜಾನಾ ಅಥವಾ ಸುಳ್ಳಾ ನೀವು ಇತಿಹಾಸವನ್ನು ನಿಮ್ಮ ಮನಬಂದಂತೆ ತಿರುಚಲು ಪ್ರಯತ್ನಿಸಬಾರದು. ಟಿಪ್ಪುವನ್ನು ಮತಾಂಧ ಎನ್ನುವ ಬಿಜೆಪಿಯವರೇ ದೊಡ್ಡ ಮತಾಂಧರು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗುಡುಗಿದ್ದಾರೆ.
ಮೈಸೂರು ಹುಲಿ ಎಂದೇ ಕರೆಯಲಾಗುವ ಟಿಪ್ಪು ಸುಲ್ತಾನ್ ಅವರ ಜಯಂತಿ ಆಚರಣೆಯನ್ನು ರದ್ದುಗೊಳಿಸಿ ಸಿಎಂ ಬಿ.ಎಸ್ಯಡಿಯೂರಪ್ಪ ಸರ್ಕಾರ ಆದೇಶ ಹೊರಡಿಸಿತ್ತು. ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಿದ್ದ ಟಿಪ್ಪು ಜಯಂತಿ ಆಚರಣೆಯನ್ನು ಬಿಜೆಪಿ ಅಧಿಕಾರಕ್ಕೇರಿದ ಕೂಡಲೇ ರದ್ದುಗೊಳಿಸಿತ್ತು. ಈಗ ಶಾಲಾ ಪಠ್ಯ ಪುಸ್ತಕದಿಂದಲೂ ಟಿಪು ಸುಲ್ತಾನ್ ಅಧ್ಯಾಯ ಕೈ ಬಿಡುವುದಾಗಿ ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ.