ಚಿತ್ರದುರ್ಗ:
ಕನ್ನಡ ನಾಡು, ನುಡಿ, ನೆಲ, ಜಲ, ಭಾಷೆಯ ಸಂರಕ್ಷಣೆಗಾಗಿ ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ಪ್ರಮುಖ ಪಾತ್ರ ವಹಿಸಿಕೊಂಡು ಬರುತ್ತಿದೆ ಎಂದು ಮಾಜಿ ಸಚಿವ ಕೆ.ಶಿವಮೂರ್ತಿನಾಯ್ಕ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಕನ್ನಡ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು ಭಾಷಾವಾರು ಪ್ರಾಂತ್ಯಗಳ ಸಮಿತಿ ರಚನೆಯಲ್ಲಿ ಕಾಂಗ್ರೆಸ್ ಅಪಾರ ಕೊಡುಗೆ ನೀಡಿದೆ. ಮೈಸೂರು, ಹೈದರಾಬಾದ್, ಬೆಳಗಾವಿ, ಮದ್ರಾಸ್ ಪ್ರಾಂತ್ಯ ಹೀಗೆ ಅಲ್ಲಲ್ಲಿ ಹರಿದು ಹಂಚಿಹೋಗಿದ್ದ ಕನ್ನಡ ಭಾಷೆಯನ್ನು ಒಂದುಗೂಡಿಸಿ 1956 ರಲ್ಲಿ ಮೈಸೂರು ರಾಜ್ಯ ಎಂದು ನಾಮಕರಣ ಮಾಡಲಾಯಿತು. ಹುಯಿಲಗೋಳ ಶ್ರೀನಿವಾಸರಾಯರು ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಎಂದು ಪ್ರಥಮವಾಗಿ ರಚಿಸಿದರು.
ಎಲ್ಲಾ ಜಾತಿ, ಧರ್ಮ, ಪ್ರಾಂತ್ಯ, ಭಾಷೆಗಳು ಸೇರಿ ಅಖಂಡ ಭಾರತವಾಗಿದೆ ಎಂದರುಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಾಯಿ ಪಟೇಲ್‍ರನ್ನು ಕೋಮುವಾದಿ ಬಿಜೆಪಿ.ಪಕ್ಷದವರು ಬಳಸಿಕೊಂಡು ಮತಗಳಿಕೆಯ ರಾಜಕೀಯ ಆರಂಭಿಸಿದ್ದಾರೆ. ಇದರ ವಿರುದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮುಖಂಡರುಗಳು ಸದಾ ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದರು.
ಆಡಿ, ಹಟ್ಟಿ, ತಾಂಡ, ವಾಡಿ, ಕ್ಯಾಂಪ್ ಕಾಲೋನಿಗಳು ಇನ್ನು ಕಂದಾಯ ಗ್ರಾಮಗಳಾಗಿಲ್ಲ. ಅರಣ್ಯ ಕಾಯ್ದೆಗಿಂತ ಮೊದಲು ಬಂದಿದ್ದು, ಅರಣ್ಯ ವಾಸಿಗಳು. ಹತ್ತೊಂಬತ್ತು ಲಕ್ಷ ಅರಣ್ಯ ಗ್ರಾಮಗಳು ರಾಷ್ಟ್ರದಲ್ಲಿದೆ. ಗಣತಿ, ಸರ್ವೆ ಮಾಡುವ ಜವಾಬ್ದಾರಿ ಸರ್ಕಾರದ ಮೇಲಿದೆ. ಕೆಲವು ಗ್ರಾಮಗಳು ಇನ್ನು ಕಂದಾಯ ಗ್ರಾಮಗಳಾಗದೆ ಇರುವುದರಿಂದ ಅಲ್ಲಿನ ಹೆಣ್ಣು ಮಕ್ಕಳು ಸಾರಿಗೆ, ಮೂಲಭೂತ ಸೌಕರ್ಯಗಳಿಲ್ಲದೆ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇಂತಹ ಯಾವ ಸಮಸ್ಯೆಗಳ ಬಗ್ಗೆಯೂ ಬಿಜೆಪಿ.ಮಾತನಾಡುತ್ತಿಲ್ಲ. ಬರೀ ಜಾತಿ, ಧರ್ಮಗಳನ್ನು ಮುಂದಿಟ್ಟುಕೊಂಡು ದೇಶದಲ್ಲಿ ಅಶಾಂತಿಯುಂಟು ಮಾಡಲು ಹೊರಟಿರುವುದು ದೊಡ್ಡ ದುರಂತ ಎಂದು ಬೇಸರ ವ್ಯಕ್ತಪಡಿಸಿದರು.
ಗಣಿಗಾರಿಕೆಗಾಗಿ ಬಿಜೆಪಿ. ಅರಣ್ಯ ಭೂಮಿಗಳನ್ನು ಒತ್ತುವರಿ ಮಾಡುತ್ತಿದೆ. ಸಂಪತ್ತುಲೂಟಿ ಮಾಡಲು ಹೊರಟಿರುವುದರ ವಿರುದ್ದ ಕಾಂಗ್ರೆಸ್ ಹೋರಾಟ ಮಾಡಬೇಕಿದೆ. ಸುವರ್ಣ ಗ್ರಾಮ, ಮಾದರಿ ಗ್ರಾಮ, ಸ್ಮಾರ್ಟ್ ಸಿಟಿ ಇವುಗಳೆಲ್ಲಾ ಯಾಕೆ ಬೇಕು. ಸರ್ವೆ ಆಗದ ಗ್ರಾಮಗಳು ಪ್ಲಾನಿಂಗ್ ಕಮೀಷನ್ ಆಫ್ ಇಂಡಿಯಾ ಅಡಿ ಬರಬೇಕು ಎಂದು ಕೇಳಿದ್ದೇನೆ. ಅರಣ್ಯ ವಾಸಿ, ಹಟ್ಟಿ, ಆಡಿ, ತಾಂಡ, ಗೊಲ್ಲರಹಟ್ಟಿಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸಿ. ಉಳುವವನೆ ಭೂಮಿಯ ಒಡೆಯ ಎಂಬ ಕ್ರಾಂತಿಕಾರಿ ಯೋಜನೆಗಳನ್ನು ತಂದವರು ದಿವಂಗತ ಇಂದಿರಾಗಾಂಧಿ ಹಾಗೂ ಡಿ.ದೇವರಾಜ ಅರಸು ಇವರುಗಳನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಲೇಬೇಕು.
ಬಿಜಪಿ.ಯದು ಅಪಾಯಕಾರಿ ತತ್ವ. ಆದರೆ ಕಾಂಗ್ರೆಸ್ ದೇಶಕ್ಕೆ ಸ್ವಾತಂತ್ರ ಬಂದಾಗಿನಿಂದಲೂ ತ್ಯಾಗ ಮಾಡಿಕೊಂಡು ಬರುತ್ತಿದೆ. ಯುವ ಪೀಳಿಗೆಯ ಬ್ರೈನ್‍ವಾಷ್ ಮಾಡಲು ಹೊರಟಿರುವ ಬಿಜೆಪಿ. ದೇಶ ಹೊಡೆಯಲು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಡುವುದಿಲ್ಲ. ನ.3 ರಂದು ಮೂರು ಲೋಕಸಭಾ ಹಾಗೂ ಎರಡು ವಿಧಾನಸಭೆಗೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ನಮ್ಮ ಪಕ್ಷ ಗೆಲ್ಲುತ್ತದೆ. ಅದೇ ರೀತಿ 2019 ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಾಗಿರುವುದರಿಂದ ಕಾರ್ಯಕರ್ತರು ಮತ್ತು ಮುಖಂಡರುಗಳು ಈಗಿನಿಂದಲೇ ಪಕ್ಷವನ್ನು ಸಂಘಟಿಸಿ ಬಲಪಡಿಸಿ ಎಂದು ಕರೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಂ.ಕೆ.ತಾಜ್‍ಪೀರ್, ಪ್ರಧಾನ ಕಾರ್ಯದರ್ಶಿ ಕೆ.ಪಿ.ಸಂಪತ್‍ಕುಮಾರ್, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಟಿ.ಜಗದೀಶ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷೆ ನಜ್ಮತಾಜ್, ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯೆ ಮೋಕ್ಷರುದ್ರಸ್ವಾಮಿ, ಸೇವಾದಳದ ಜಿಲ್ಲಾ ಸಂಘಟಕ ಅಶ್ರಫ್‍ಆಲಿ, ಚಾಂದ್‍ಪೀರ್, ಚಂದ್ರಶೇಖರ್, ಭಾಗ್ಯಮ್ಮ, ಮಹಮದ್‍ಸಾಬ್, ಫೈಲ್ವಾನ್ ತಿಪ್ಪೇಸ್ವಾಮಿ, ಮುದಸೀರ್‍ನವಾಜ್, ಜಮೀರ್, ಖುದ್ದೂಸ್ ಇನ್ನು ಮುಂತಾದವರು ಕನ್ನಡ ರಾಜ್ಯೋತ್ಸವದಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ