ಸಾವರ್ಕರ್‍ಗೆ ಭಾರತ ರತ್ನ : ಚುನಾವಣೆ ಗೆಲ್ಲಲು ಬಿಜೆಪಿ ಗಿಮಿಕ್ : ಬಿ.ಟಿ.ಜಗದೀಶ್

ಚಿತ್ರದುರ್ಗ;
     ಬಿಜೆಪಿಯ ನಾಯಕರು ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವು ಉದ್ದೇಶದಿಂದ ವೀರ ಸಾವರ್ಕರ್‍ಗೆ ಭಾರತ ರತ್ನ ನೀಡುವ ವಿಚಾರ ಪ್ರಸ್ತಾಪ ಮಾಡುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಟಿ.ಜಗದೀಶ್ ಟೀಕಿಸಿದ್ದಾರೆ
   
    ವೀರ ಸಾವರ್ಕರ್ ರವರಿಗೆ ಭಾರತ ರತ್ನ ನೀಡುವ ವಿಚಾರದಲ್ಲಿ  ಎದ್ದಿರುವ ವಿವಾದದ ಕುರಿತಾಗಿ ಕೆಲವು ನಾಯಕರು ಕೆಲವು ರೀತಿ ಪರ ವಿರೋಧ ಹೇಳಿಕೆಗಳು ನೀಡುತ್ತಿದ್ದಾರೆ. ಈ ವಿಚಾರದ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯರವರ ಹೇಳಿಕೆಗೆ ನಮ್ಮ ಬೆಂಬಲವಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
    ಈಗ ನಡೆಯುತ್ತಿರುವ ವಿದ್ಯಮಾನಗಳನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಭಾರತೀಯ ಜನತಾ ಪಕ್ಷವು ರಾಷ್ಟ್ರ ಮತ್ತು ರಾಜ್ಯಗಳಲ್ಲಿ ಚುನಾವಣೆಗಳು ಎದುರಾದ ಸಂದರ್ಭದಲ್ಲಿ ಈ ರೀತಿಯಾಗಿ ಮತೀಯ ಭಾವನೆಗಳನ್ನು ಕೆರಳಿಸುವ, ಧಾರ್ಮಿಕ ವಿವಾದಗಳನ್ನು ಹುಟ್ಟಿ ಹಾಕುವ, ಧಾರ್ಮಿಕ ವ್ಯಕ್ತಿಗಳ ಹಾಗೂ ಚಾರಿತ್ರ್ಯಿಕ ವ್ಯಕ್ತಿಗಳ ದುರ್ಬಳಕೆಯಂತಹ ಕಾರ್ಯಕ್ಕೆ ಕೈ ಹಾಕಿ ಅಧಿಕಾರ ಹಿಡಿಯುವ ಹುನ್ನಾರ ನಡೆಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ
    ಅದರಂತೆ ಈಗ ವೀರ ಸಾವರ್ಕರ್ ವಿಚಾರವು ಸಹ ಇದೇ ರೀತಿ ಅನುಮಾನಗಳನ್ನು ಹುಟ್ಟಿ ಹಾಕುತ್ತಿದೆ. ನಮಗೆ ಸ್ವಾತಂತ್ರ್ಯೋಕ್ಕೋಸ್ಕರ ಹೋರಾಟ ಮಾಡಿರುವ ಎಲ್ಲಾ ಹಿರಿಯರ ಬಗ್ಗೆ ಅಪಾರ ಗೌರವವಿದೆ. ವೀರ ಸಾವರ್ಕರ್ ಸಹ ಅದೇ ರೀತಿ ದಿಟ್ಟ ಹೋರಾಟವನ್ನು ನಡೆಸಿ ಕಠಿಣ ಶಿಕ್ಷೆಗಳನ್ನು ಅನುಭವಿಸಿದ್ದರ ಬಗ್ಗೆ ನಮಗೂ ಸಹ ಅವರ ಬಗ್ಗೆ ವಿಶೇಷವಾದ ಗೌರವವಿದೆ. ಆದರೆ ಅವರಂತೆ ದಿಟ್ಟ ಹೋರಾಟ ನಡೆಸಿದವರಲ್ಲಿ ಸುಭಾಷ್‍ಚಂದ್ರಬೋಸ್, ಜಾನ್ಸಿರಾಣಿ ಲಕ್ಷ್ಮೀಬಾಯಿ, ಲಾಲಲಜ್‍ಪತ್‍ರಾಯ್, ಬಾಲಗಂಗಾಧರ್ ತಿಲಕ್, ಭಗತ್‍ಸಿಂಗ್, ಚಂದ್ರಶೇಖರ್, ಆಜಾದ್ ಇನ್ನು ಸಾಕಷ್ಟು ಜನ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣಾರ್ಪಣೆ ಮಾಡಿದ ಘಟಾನುಘಟಿ ನಾಯಕರಿದ್ದಾರೆ. 
   ಪ್ರಸ್ತುತ ಮಹಾರಾಷ್ಟ್ರ, ಹರಿಯಾಣ ಇತರೆ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಿಂದ ವೀರಸಾವರ್ಕರಿಗೆ ಭಾರತರತ್ನ ನೀಡಬೇಕು ಎಂದು ಕೇಳುವುದಾದರೆ ಇಷ್ಟು ವರ್ಷಗಳ ಕಾಲ ವಿಳಂಭ ಮಾಡಿದ್ದಾದರೂ ಏಕೆ? ಇದು ರಾಜಕಾರಣದ ಗಿಮಿಕ್ ಹೊರೆತು ಬೇರೇನೂ ಅಲ್ಲ. ಈ ರೀತಿ ವೀರಸಾವರ್ಕರ್‍ರವರಿಗೆ ಭಾರತರತ್ನ ಬೇಡಿಕೆ ಇಟ್ಟಿರುವುದು ರಾಜಕೀಯ ಪ್ರೇರಿತವೇ ಹೊರೆತು ಅವರ ಮೇಲಿನ ಅಭಿಮಾನದಿಂದಲ್ಲ ಎಂದು ಬಿ.ಟಿ.ಜಗದೀಶ್ ಹೇಳಿದ್ದಾರೆ
    ಈ ವಿಚಾರದಲ್ಲಿ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆ ಸಮರ್ಥನೀಯವಾಗಿದೆ. ಸಿದ್ಧರಾಮಯ್ಯನವರ ಹೇಳಿಕೆಯನ್ನೇ ಏನೋ ಅಪರಾಧ ಮಾಡಿದಂತೆ ಭಾರತೀಯ ಜನತಾ ಪಕ್ಷದ ನಾಯಕರುಗಳು ವಿವಿಧ ರೀತಿಯಾಗಿ ಮಾತನಾಡುತ್ತಿರುವುದು, ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರಶ್ನೆ ಮಾಡುವುದು ಸರಿಯಲ್ಲ.
   ಈ ರೀತಿಯ ಕ್ಷುಲ್ಲಕ ರಾಜಕಾರಣವನ್ನು ಬಿಟ್ಟು ಅಭಿವೃದ್ಧಿ ವಿಚಾರವಾಗಿ ಚರ್ಚೆಯಾಗಬೇಕು. ಸರ್ಕಾರದ ತಪ್ಪು ನಿರ್ಣಯಗಳಿಂದ  ಭಾರತದ ಆರ್ಥಿಕ ವ್ಯವಸ್ಥೆ 25 ವರ್ಷಗಳ ಹಿಂದಕ್ಕೆ ಹೋಗಿದೆ. ಇದನ್ನು ಮರೆಮಾಚಲು ಈ ರೀತಿಯ ವಿಚಾರಗಳನ್ನು ಎತ್ತಿ ರಾಷ್ಟ್ರದ ಜನತೆಯನ್ನು ದಿಕ್ಕುತಪ್ಪಿಸುವ ಕೆಲಸ ಕೈ ಬಿಡಬೇಕು ಎಂದು ಬಿ.ಟಿ.ಜಗದೀಶ್ ಹೇಳಿದ್ದಾರೆ.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link