ಮತ್ತೆ ಆಪರೇಷನ್ ಕಮಲಕ್ಕೆ ಮುಂದಾದ ಬಿಜೆಪಿ : ದಿನೇಶ್ ಗುಂಡೂರಾವ್

ಬೆಂಗಳೂರು

    ಉಪಚುನಾವಣೆಯಲ್ಲಿ ಒಂದು ಸೀಟು ಗೆಲ್ಲಲೂ ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ಬಿಜೆಪಿ ಮತ್ತೆ ಆಪರೇಷನ್ ಕಮಲ ಕಾರ್ಯಾಚರಣೆಗೆ ಮುಂದಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,ಡಿಸೆಂಬರ್ ಐದರಂದು ನಡೆಯಲಿರುವ ಉಪಚುನಾವಣೆಯಲ್ಲಿ ಸರ್ಕಾರದ ಬಹುಮತಕ್ಕೆ ಅಗತ್ಯವಾದಷ್ಟು ಕ್ಷೇತ್ರಗಳಲ್ಲಿ ಗೆಲ್ಲುವ ನಂಬಿಕೆ ಇದ್ದರೆ ಬಿಜೆಪಿ ಆಪರೇಷನ್ ಕಮಲ ಕಾರ್ಯಾಚರಣೆಗೆ ಮತ್ತೆ ಕೈ ಹಾಕುವ ಅಗತ್ಯವೇ ಇರಲಿಲ್ಲ ಎಂದು ವ್ಯಂಗ್ಯ ಆಡಿದರು.

   ಕಾಂಗ್ರೆಸ್ ಪಕ್ಷದ ಹದಿಮೂರು ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ ಎಂದು ಬಿಜೆಪಿಗೆ ಹೋಗಿರುವ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.ಆದರೆ ಗೆದ್ದರೂ ಅವರು ಬಿಜೆಪಿಯಲ್ಲಿ ಉಳಿಯುವುದಿಲ್ಲ ಎಂದರು.

   ರಮೇಶ್ ಜಾರಕಿಹೊಳಿ ಅವರಿಗೆ ಬಿಜೆಪಿಯ ನಡವಳಿಕೆ ಇಷ್ಟವಾಗುವುದಿಲ್ಲ.ಹೀಗಾಗಿ ಗೆದ್ದರೂ ಒಂದು ವಾರ ಕೂಡಾ ಆ ಪಕ್ಷದಲ್ಲಿ ಅವರು ಉಳಿಯುವುದಿಲ್ಲ.ಹೀಗಾಗಿ ಅಲ್ಲಿಂದ ಹೊರಬರುತ್ತಾರೆ ಎಂದು ಹೇಳಿದರು.

    ಆದರೆ ಕಾಂಗ್ರೆಸ್ ಪಕ್ಷಕ್ಕೆ ಮರಳಿ ಬರಲು ಅವರಿಗೆ ಸಾಧ್ಯವಿಲ್ಲ.ಯಾಕೆಂದರೆ ಈಗಾಗಲೇ ರಮೇಶ್ ಜಾರಕಿಹೊಳಿ ಅವರಿಗೆ ಕಾಂಗ್ರೆಸ್ ಪಕ್ಷದ ಬಾಗಿಲು ಬಂದ್ ಆಗಿದೆ.ಜೆಡಿಎಸ್ ಗೂ ಹೋಗಲು ಸಾಧ್ಯವಿಲ್ಲ.ಹೀಗಾಗಿ ಅವರು ಸ್ವಂತ ಪಕ್ಷ ಕಟ್ಟಿ ರಾಜಕಾರಣ ಮಾಡುವುದೊಂದೇ ಅವರಿಗೆ ಉಳಿಯಲಿರುವ ದಾರಿ ಎಂದರು.

   ರಮೇಶ್ ಜಾರಕಿಹೊಳಿ ಅವರನ್ನು ಹಿಡಿದುಕೊಂಡು ಬಿಜೆಪಿ ಆಪರೇಷನ್ ಕಮಲ ಕಾರ್ಯಾಚರಣೆ ಮಾಡುವ ಅಗತ್ಯವಾದರೂ ಏನಿತ್ತು?ಉಪಚುನಾವಣೆಯಲ್ಲಿ ಅರ್ಧದಷ್ಟು ಸೀಟುಗಳನ್ನು ಗೆದ್ದರೂ ಅವರ ಸರ್ಕಾರ ಉಳಿಯುತ್ತದಲ್ಲ?

    ಇಷ್ಟಾದರೂ ಅವರು ಮರಳಿ ಕಾಂಗ್ರೆಸ್ ಪಕ್ಷದ ಶಾಸಕರ ಮೇಲೆ ಕಣ್ಣು ಹಾಕಿದ್ದಾರೆಂದರೆ ಉಪಚುನಾವಣೆಯಲ್ಲಿ ಒಂದು ಸೀಟನ್ನೂ ಗೆಲ್ಲುವುದಿಲ್ಲ ಎಂಬ ಆತಂಕ ಅವರಿಗೆ ಶುರುವಾಗಿದೆ. ಹೀಗಾಗಿ ಸರ್ಕಾರ ಉಳಿಸಿಕೊಳ್ಳಲು ಮರಳಿ ಆಪರೇಷನ್ ಕಮಲ ಕಾರ್ಯಾಚರಣೆಗೆ ಕೈ ಹಾಕಿದ್ದಾರೆ ಎಂದು ಆರೋಪಿಸಿದರು.ಹೀಗೆ ಜನವಿರೋಧಿಯಾಗಿ ಕಂಡ ಕಂಡ ಪಕ್ಷಗಳ ಶಾಸಕರನ್ನು ಖರೀದಿಸಿ ಸರ್ಕಾರ ಉಳಿಸಿಕೊಳ್ಳಲು ಹೊರಟಿರುವ ಬಿಜೆಪಿಗೆ ಏನಾದರೂ ಮಾನ-ಮರ್ಯಾದೆ ಇದೆಯೇ?ಎಂದು ಅವರು ಪ್ರಶ್ನೆ ಮಾಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap