ಚಿತ್ರದುರ್ಗ
ಬಿಜೆಪಿಯ ನಾಯಕರು ದೇಶದಲ್ಲಿ ಅಧಿಕಾರ ಸ್ಥಾಪನೆನೆಗಾಗಿ ವಾಮ ಮಾರ್ಗ ಅನುಸರಿಸುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಮೆಹಬೂಬ್ ಪಾಟ ಟೀಕಿಸಿದ್ದಾರೆ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿಲ್ಲ. ಅಧಿಕಾರ ಹಿಡಿಯುವುದು ಅವರ ಮೂಲ ಉದ್ದೇಶ ಎಂದು ಹೇಳಿದರು
ಕಾಂಗ್ರೇಸ್ ಮುಕ್ತ ದೇಶವನ್ನಾಗಿ ಮಾಡಬೇಕೆಂಬ ದುರಾಸೆಯಿಂದ ಬಿಜೆಪಿ ವಾಮ ಮಾರ್ಗದ ರಾಜಕಾರಣ ಮಾಡುತ್ತಿದೆ. ಶಾಸಕರನ್ನು ಖರೀದಿ ಮಾಡಿ, ಸರ್ಕಾರ ರಚನೆಗೆ ಮುಂದಾಗಿದ್ದು, ಕರ್ನಾಟಕದಲ್ಲಿ ಉಪ ಚುನಾವಣೆ ನಡೆಯುವುದು ಅನುಮಾನ ಎಂದು ಹೇಳಿದರು
ದೇಶದ ಬಹುತೇಕ ರಾಜ್ಯಗಳಲ್ಲಿ ಅಧಿಕಾರಕ್ಕಾಗಿ ಬೇರೆ ಪಕ್ಷಗಳ ಶಾಸಕರನ್ನು ತಮ್ಮತ್ತ ಸೆಳೆದುಕೊಳ್ಳುತ್ತಿದ್ದಾರೆ. ಕರ್ನಾಟಕದಲ್ಲಿ 17 ಕ್ಷೇತ್ರದಲ್ಲಿ ಶಾಸಕರು ಇಲ್ಲ ಅಲ್ಲಿನ ಮತದಾರರ ಕಷ್ಟಗಳನ್ನು ಕೇಳುವವರಿಲ್ಲದೆ ಜನತೆ ಈ ಸರ್ಕಾರಕ್ಕೆ ಶಾಪವನ್ನು ಹಾಕುತ್ತಿದ್ದಾರೆ. ಬಿಜೆಪಿಯ ಇಂತಹ ಕೆಟ್ಟ ರಾಜಕಾರಣಕ್ಕೆ ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಜನರು ಸ್ಪಷ್ಟ ಉತ್ತರ ನೀಡಿದ್ದಾರೆ ಎಂದರು
ಪ್ರಧಾನ ಮಂತ್ರಿಯಾದವರಿಗೆ ಎಷ್ಟು ಜನರ ಬೆಂಬಲ ಇದ್ದರೆ ಸರ್ಕಾರ ರಚನೆ ಮಾಡಬಹುದೆಂಬ ಸಾಮಾನ್ಯ ಜ್ಞಾನ ಇಲ್ಲ .ಹರಿಯಾಣ ವಿಧಾನ ಸಭೆಯಲ್ಲಿ 90 ಸ್ಥಾನ ಇದ್ದು ಬಿಜೆಪಿ 40 ಸ್ಥಾನಗಳನ್ನು ಗಳಿಸಿದೆ ಇದನ್ನು ಜನತೆಯೆ ಆರ್ಶೀವಾದ ಎಂದು ತಿಳಿದ ಪ್ರಧಾನ ಮಂತ್ರಿಗಳು ಜನತೆ ನಮಗೆ ಆರ್ಶೀವಾದ ಮಾಡಿದ್ದಾರೆ ನಾವು ಅಧಿಕಾರವನ್ನು ಹಿಡಿಯುತ್ತೇವೆ ಎನ್ನುತ್ತಿದ್ದಾರೆ ಎಂದು ಟೀಕಿಸಿದರು
ಬಿಜೆಪಿ ಅಧಿಕಾರವನ್ನು ಹಿಡಿಯಬೇಕು ಎಂಬ ದುರಾಸೆಯಿಂದ ಅದಕ್ಕೆ ಬೇಕಾದ ವಿವಿಧ ರೀತಿಯ ಮಾರ್ಗವನ್ನು ಅನುಸರಿಸುತ್ತಿದೆ, ರಾಜ್ಯದಲ್ಲಿ ಅಧಿಕಾರ ಮಾಡುವಷ್ಟು ಸಂಖ್ಯಾ ಬಲ ಇಲ್ಲದಿದ್ದರು ಸಹಾ ಕಾಂಗ್ರೇಸ್ ಪಕ್ಷದವರಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ, ಅಲ್ಲಿ ಉಪ ಚುನಾವಣೆ ಮಾಡಲು ಸರ್ಕಾರ ತಿರ್ಮಾನ ಮಾಡಿತ್ತು. ಆದರೀಗ ಸೋಲಿನ ಭೀತಿಯಿಂದ ಉಪ ಚುನಾವಣೆಯನ್ನು ಮುಂದಕ್ಕೆ ಹಾಕಿದ್ದಾರೆ, ರಾಜ್ಯದಲ್ಲಿ ಉಪ ಚುನಾವಣೆ ಮಾಡುತ್ತಾರೆ ಎಂಬ ನಂಬಿಕೆ ಇಲ್ಲ, ಮಾಡಿದರು ಸಹಾ 17 ರಲ್ಲಿ 13 ರಿಂದ 14 ಸ್ಥಾನಗಳನ್ನು ಕಾಂಗ್ರೇಸ್ ಗೆಲ್ಲಲಿದೆ ಎಂದು ಹೇಳಿದರು.
ಕಾಂಗ್ರೆಸ್ ನಾಯಕರಿಗೆ ವಿನಾ ಕಾರಣ ಕಿರುಕುಳ ನೀಡಲಾಗುತ್ತಿದೆ. ಸರ್ಕಾರ ಅಧಿಕಾರ ದುರಪಯೋಗ ಮಾಡಿಕೊಂಡು ಚಿದಂಬರಂ, ಡಾ.ಜಿ.ಪರಮೆಶ್ವರ್ ಹಾಗೂ ಡಿ.ಕೆ.ಶಿವಕುಮಾರ್ ಅವರ ಮೇಲೆ ದಾಳಿ ನಡೆಸಲಾಗುತ್ತಿದೆ. ಇದನ್ನು ರಾಜ್ಯದ ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಮೆಹಬೂಬ್ ಪಾಷ ಹೇಳಿದರು
ಪತ್ರಿಕಾ ಗೋಷ್ಟಿಯಲ್ಲಿ ಜಿಲ್ಲಾ ಕಾಂಗ್ರೇಸ್ ಸಮಿತಿಯ ನೂತನ ಕಾರ್ಯಧ್ಯಕ್ಷರಾದ ಶಿವುಯಾದವ್, ಪ್ರಚಾರ ಸಮಿತಿ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಮುಖಂಡರಾದ ಮಹಡಿ ಶಿವಮೂರ್ತಿ, ಗೋ ತಿಪ್ಪೇಶ್, ಎನ್,ಡಿ.ಕುಮಾರ್, ನಂಜುಂಡಪ್ಪ ಸೈಯದ್ ವಲೀ ಖಾದ್ರಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
