ಬಿಜೆಪಿಯಿಂದ ಸಿಬಿಐ ದುರ್ಬಳಕೆ – ಎಚ್.ಪಿ.ರಾಜೇಶ್

ಜಗಳೂರು:

    ಬಿಜೆಪಿ ಪಕ್ಷವು ದ್ವೇಶದ ರಾಜಕಾರಣದಿಂದ ಉಪಚುನಾವಣೆ ವೇಳೆ ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ಸಿಬಿಐ ಮತ್ತೊಮ್ಮೆ ಸಿಬಿಐ ದಾಳಿಮಾಡುವ ಮೂಲಕ ಸಿಬಿಐ ದುರ್ಬಳಕೆ ಮಾಡಿಕೊಂಡಿದೆ ಎಂದು ಮಾಜಿ ಶಾಸಕ ಎಚ್.ಪಿ.ರಾಜೇಶ್ ಆರೋಪಿಸಿದರು.

   ಪಟ್ಟಣದ ಮಹಾತ್ಮಗಾಂಧಿ ವೃತ್ತದ ಬಳಿ ನಡೆದ ಕಾಂಗ್ರೇಸ್ ನೇತೃತ್ವದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶದಲ್ಲಿ ಬಿಜೆಪಿ ಪಕ್ಷವು ಅಧಿಕಾರಕ್ಕೆ ಬಂದ ಮೆಲೆ ಹಿಂದುಳಿದ ವರ್ಗ ಸೇರಿದಂತೆ ಮಹಿಳೆಯರ ಮೇಲೆ ದೌರ್ಜನ್ಯ , ಅತ್ಯಾಚಾರಗಳು ನಡೆಯುತ್ತಿವೆ. ಸೂಕ್ತ ಕಾನೂನು ಭದ್ರತೆ ಇಲ್ಲ.ಕೋಮುವಾದ ತಾಂಡವಾಡುತ್ತಿದೆ.ತಾಲ್ಲೂಕು ಮಟ್ಟದಿಂದ ಕೇಂದ್ರದವರೆಗೂ ಆಡಳಿತ ನಡೆಸುವ ಬಿಜೆಪಿ ಪಕ್ಷ ಕೊರೋನಾ ನಿಯಂತ್ರಣ ಹೆಸರಿನಲ್ಲಿ ಭ್ರಷ್ಟಾಚಾರ ನಡೆಸಿರುವುದು.ಸಿಬಿಐಗೆ ಕಾಣುವುದಿಲ್ಲ.ತನ್ನ ವೈಪಲ್ಯ ಮುಚ್ಚಿಕೊಳ್ಳಲು, ಉಪ ಚುನಾಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷವನ್ನು ಮಣಿಸುವ ಹುನ್ನಾರ ಮೇಲ್ನೋಟಕ್ಕೆ ಕಾಣುತ್ತಿದೆ ಎಂದವರು ದೂರಿದರು.ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಕೊರೋನಾ ನಿಯಂತ್ರಣಕ್ಕೆ ಆರೋಗ್ಯ ಹಸ್ತ ಕಾರ್ಯಕ್ರಮ ಅಭಿಯಾನದ ಮೂಲಕ ಜನರ ಮದ್ಯೆ ಕೆಲಸ ಮಾಡುತ್ತಿದೆ ಎಂದವರು ಹೇಳಿದರು.

     ಈ ಸಂದರ್ಭದಲ್ಲಿ ಬಾಕ್ ಉಸ್ತುವಾರಿ ಕಲ್ಲೇಶ್ ರಾಜ್‍ಪಟೇಲ್, ಬ್ಲಾಕ್ ಕಾಂಗೈ ಅಧ್ಯಕ್ಷ ಷಂಷ್ಮೀರ್ ಅಹಮ್ಮದ್, ಮುಖಂಡರಾದ ತಿಪ್ಪೇಸ್ವಾಮಿಗೌಡ, ಶಂಭುಲಿಂಗಪ್ಪ,ಅಜಾಮುಲ್ಲಾ, ಪಲ್ಲಾಗಟ್ಟೆ ಶೇಖರಪ್ಪ, ರಮೇಶ್‍ಯಾದವ್,ವೆಂಕಟೇಶ್,ಶೇಖರಪ್ಪ, ಮಾಜಿ ಜಿ.ಪಂ.ಅಧ್ಯಕ್ಷೆ ನಾಗರತ್ನಮ್ಮ, ಕೆಂಚಮ್ಮ ಧನ್ಯಕುಮಾರ್,ಪಟ್ಟಣ ಪಂಚಾಯಿತಿ ಸದಸ್ಯರಾದ ಷಕೀಲ್‍ಅಹಮ್ಮದ್ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link