ಬೆಂಗಳೂರು
ಅಯೋಧ್ಯೆ ವಿವಾದವನ್ನು ಬಗೆಹರಿಸುವ ಇಚ್ಚಾಶಕ್ತಿ ಬಿಜೆಪಿಗಿಲ್ಲ ಎಂದು ಕಾಂಗ್ರೆಸ್ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಆರೋಪಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ರಾಮಮಂದಿರ ವಿಚಾರವನ್ನು ಇಟ್ಟುಕೊಂಡು ಬಿಜೆಪಿಯವರು ಮತ ಕೇಳುತ್ತಿದ್ದಾರೆ. ಬಿಜೆಪಿ ನಾಯಕರು ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದ ಮುಂದಿಟ್ಟುಕೊಂಡು ಈ ಹಿಂದೆ ಮತ ಕೇಳುತ್ತಿದ್ದರು. ಈಗಿನ ರಾಜಕೀಯ ಬಹಳ ಕೀಳುಮಟ್ಟ ತಲುಪಿದೆ ಎಂದರು.
ಗುಡಿ ಮತ್ತು ಮಸೀದಿ ಕಟ್ಟುವುದು ಧರ್ಮವಲ್ಲ. ರಾಮಮಂದಿರ ಕಟ್ಟುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಉತ್ತರ ಪ್ರದೇಶದಲ್ಲಿ ಬಿಜೆಪಿಯವರು ಗೋವು ಪೂಜೆ ಮಾಡುತ್ತಾರೆ. ಆದರೆ ಗೋವಾದಲ್ಲಿ ಗೋವುಗಳಿಗೆ ಏನು ಮಾಡುತ್ತಾರೆ ಎಂದು ವ್ಯಂಗ್ಯವಾಡಿದರಲ್ಲದೇ ಮೋದಿ ಅಧಿಕಾರಕ್ಕೆ ಬಂದ ಮೇಲೆ ಗೋಮಾಂಸ ರಪ್ತು ಹೆಚ್ಚಾಗಿದೆ ಎಂದರು.
ಗೋವುಗಳನ್ನು ಕತ್ತರಿಸುವ ಹಲವಾರು ಕಂಪನಿಗಳು ಬಿಜೆಪಿ ಮುಖಂಡರ ಹೆಸರಿನಲ್ಲಿವೆ. 2019ರ ಚುನಾವಣೆಯಲ್ಲಿ ದೇಶದ ಜನ ಬಿಜೆಪಿಗೆ ಸರಿಯಾಗಿ ಉತ್ತರ ಕೊಡುತ್ತಾರೆ. ರಾಜ್ಯದ 5 ಉಪಚುನಾವಣೆಯಲ್ಲಿ ಮೈತ್ರಿ ಪಕ್ಷಗಳು ಗೆಲುವು ಸಾಧಿಸಲಿವೆ ಎಂದು ಹೇಳಿದರು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷಗಳೇ ಗೆಲುವು ಸಾಧಿಸುತ್ತವೆ. ರಾಮನಗರದಲ್ಲಿ ಬಿಜೆಪಿ ಇಲ್ಲವೇ ಇಲ್ಲ. ಮೋದಿಗೆ ಸಾಬರ ಹೆಂಡತಿಯರ ಚಿಂತೆಯಿದೆ, ರಾಮಮಂದಿರದ ಚಿಂತೆಯಿಲ್ಲ. ಮೋದಿಯವರು ತಮ್ಮ ಹೆಂಡತಿಗೆ ಜೀವನಾಂಶ ಕೊಡುತ್ತಿದ್ದಾರೆಯೇ ಎಂದವರು ಪ್ರಶ್ನಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ