ತಿಪಟೂರು :

ಕೇಂದ್ರ ಸರ್ಕಾರದ ದುರಾಡಳಿತ ನೀತಿಯಿಂದ ಯುವಜನರಿಂದು ಉದ್ಯೋಗವಿಲ್ಲದೇ, ಬೆಲೆ ಏರಿಕೆಯಿಂದ ಬಿಸಿಯ ನಡುವೇ ಜೀವನವನ್ನೇ ಸಾಗಿಸುವುದು ಕಷ್ಟವಿರುವಾಗ ಈ ಪೌರತ್ವದ ಕಾಯಿದೆಯಿಂದ ಇನಷ್ಟು ಅರಾಜಕತೆಗೆ ತಳ್ಳುತ್ತಿದೆ ಎಂದು ತಾಲ್ಲೂಕು ಕಾಂಗ್ರೇಸ್ ಬ್ಲಾಕ್ ಅಧ್ಯಕ್ಷ ಕಾಂತರಾಜು ನೇರವಾಗಿ ಆರೋಪಿಸಿದರು.
ನಗರದ ಸಿಂಗ್ರಿ ನಂಜಪ್ಪ ವೃತ್ತದಲ್ಲಿ ಇಂದು ಬೆಳಗ್ಗೆ ಕಾಂಗ್ರೇಸ್ ಮತ್ತು ಮುಸ್ಲಿಂ ಮುಖಂಡರುಗಳು ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ರದ್ದುಗೊಳಿಸಬೇಕೆಂದು ಕರೆದಿದ್ದ ಶಾಂತಿಯುತ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅವರು ನಾನು, ಹಿಂದು, ಮುಸಲ್ಮಾನ, ಕ್ರೈಸ್ಥ, ಸಿಖ್, ಪಾರ್ಸಿ ಮುಂತಾದ ಜಾತಿಗಳನ್ನು ಹೇಳಿಕೊಳ್ಳುವ ಮೊದಲು ನಾವು ಭಾರತೀಯರೆಂದು ಭಾವಿಸದರೆ ನಮಗೆ ಯಾವುದೇ ಪೌರತ್ವದ ಅವಶ್ಯಕತೆಯೇ ಇಲ್ಲವೆನ್ನುವಾಗ ಈ ಪೌರತ್ವ ಕಾಯಿದೆಯ ಅವಶ್ಯಕತೆಏನು ಎಂದು ಪ್ರಶ್ನಿಸಿದರು.
ಎ.ಪಿ.ಎಂ.ಸಿ ಉಪಾಧ್ಯಕ್ಷ ಬಜಗೂರು ಮಂಜುನಾಥ್ ನಾವು ಭಾರತೀಯರು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೂ ಪೌರತ್ವ ಸಾಬೀತುಪಡಿಸಬೇಕು ಎನ್ನುವುದರಲ್ಲಿ ಅರ್ಥವಿಲ್ಲ. ಇದಕ್ಕೆ ನಮ್ಮ ವಿರೋಧವಿದೆ. ಇಂತಹ ಕಾಯ್ದೆ ಹೇರಿರುವುದು ದುರದೃಷ್ಟಕರ, ಜಾತ್ಯತೀತ ನಿಲುವಿನ ಈ ರಾಷ್ಟ್ರ್ರದಲ್ಲಿ ಮೋದಿ ಸರ್ಕಾರ ಸಿ.ಎ.ಎ ಎಂಬ ಕರಾಳ ಕಾನೂನನ್ನು ಜಾರಿಗೆ ತಂದಿದೆ ಕೇಂದ್ರ ಮೊದಲು ಈ ಕಾನೂನನ್ನು ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ತಾ.ಪಂ ಅಧ್ಯಕ್ಷ ಶಿವಸ್ವಾಮಿ, ತಾ.ಪಂ ಮಾಜಿ ಅಧ್ಯಕ್ಷ ಸುರೇಶ್, ಜನಸ್ಪಂದನ ಟ್ರಸ್ಟ್‍ನ ಸಿ.ಬಿ.ಶಶಿಧರ್, ಕಾಂಗ್ರೇಸ್ ಮುಖಂಡರಾದ ಅಣ್ಣಯ್ಯ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸೈಫುಲ್ಲಾ, ಸೌಹಾರ್ದ ತಿಪಟೂರು ಅಲಾಬಕಾಷ್, ತನ್ವೀರ್‍ವುಲ್ಲಾ ಷರೀಫ್ ಮತ್ತಿತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
