ಸುಪ್ರೀಂ ಕೋರ್ಟ್ ತೀರ್ಮಾನದ ನಂತರ ಬಿಜೆಪಿ ಅಭ್ಯರ್ಥಿಗಳ ಆಯ್ಕೆ

ಬೆಂಗಳೂರು

      ಅನರ್ಹ ಶಾಸಕರ ತೀರ್ಪು ನಾಳೆ ಸುಪ್ರೀಂ ಕೋರ್ಟ್ ತೀರ್ಮಾನದ ನಂತರ ಅಭ್ಯರ್ಥಿಗಳನ್ನು ನಿರ್ಧರಿಸಲಾಗುತ್ತದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್ ತಿಳಿಸಿದ್ದಾರೆ.

     ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರಿಷ್ಠರು ಎಲ್ಲವನ್ನೂ ತೀರ್ಮಾನ ಮಾಡುತ್ತಾರೆ. ನಮ್ಮಲ್ಲಿ ಯಾವುದೇ ಗೊಂದಗಳಿಲ್ಲ. ಸಣ್ಣಪುಟ್ಟ ಗೊಂದಲಗಳಿರುವುದು ಸಹಜ, ಆದರೆ ಎಲ್ಲವೂ ಸರಿ ಹೋಗುತ್ತದೆ. ಹೊಸಕೋಟೆ ಕ್ಷೇತ್ರ ಹೊರತುಪಡಿಸಿ ಉಳಿ ದೆಲ್ಲೂ ಗೊಂದಲಗಳಿಲ್ಲ.ಒಂದು ಕ್ಷೇತ್ರವನ್ನು ಬಿಟ್ಟುಕೊಡಬೇಕಾದರೆ ನೋವಾಗುತ್ತದೆ. ಕಾರ್ಯಕರ್ತರು,ಬೆಂಬಲಿಗರ ಅಭಿಪ್ರಾಯ ಪಡೆದುಕೊಳ್ಳಬೇಕಾಗುತ್ತದೆ.ಅದನ್ಮ ನಮ್ಮ ವರಿಷ್ಠರು ಸರಿಪಡಿಸುತ್ತಾರೆ. ನಮ್ಮಲ್ಲಿ ಅಭ್ಯರ್ಥಿಗಳು ಜಾಸ್ತಿ ಇದ್ದಾರೆ,ಅದಕ್ಕಾಗಿ ಗೊಂದಲ ಗಳು ಹೆಚ್ಚಾಗಿವೆ ಎಂದರು.

      ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗ ಸವಕಲು ನಾಣ್ಯವಾಗಿದ್ದಾರೆ. ಹೀಗಾಗಿ ಏನೋ ಒಂದು ಹೇಳುತ್ತಾರೆ. ಬಿಜೆಪಿ ಯಾವ ಪಕ್ಷದ ಜೊತೆಗೂ ಹೊಂದಾಣಿಕೆ ಮಾಡಿಕೊಂಡಿಲ್ಲ. ಜೊತೆಯಲ್ಲಿ ಸರ್ಕಾರ ಮಾಡಿ ಈ ರೀತಿ ಹೇಳುವುದು ಹಾಸ್ಯಾಸ್ಪದವಾಗಿದೆ. ಇತ್ತೀಚೆಗೆ ಸಿದ್ದರಾಮಯ್ಯ ಅವರು ಹಿಟ್ ಅಂಡ್ ರನ್ ಹೇಳಿಕೆ ಕೊಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಸವಕಲು ನಾಣ್ಯ ಆಗಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಎರಡೂ ಕಡೆಯ ಶಾಸಕರು ರಾಜೀನಾಮೆ ಕೊಟ್ಟಿರುವುದು ಹೊಂದಾಣಿಕೆ ಮಾಡಿಕೊಳ್ಳುವುದಿದ್ದರೆ ರಾಜೀನಾಮೆ ಏಕೆ ನೀಡಬೇಕಿತ್ತು ಎಂದು ಅವರು ಪ್ರಶ್ನಿಸಿದರು.

      ಸಿಸಿಬಿಯಲ್ಲಿ ನೋಂದಣಿ ಸಾಫ್ಟ್ವೇರ್ ಕಾವೇರಿಯನ್ನು ತಿರುಚಿ ಸಾಕಷ್ಟು ಮೋಸ ನಡೆಸಲಾಗಿದೆ. ನಿವೇಶನ ಖರೀದಿದಾರರಿಗೆ ಮೋಸ ಮಾಡಿ ಅಕ್ಷಮ್ಯ ಅಪರಾಧ ಎಸಗಿದ್ದಾರೆ. ಈ ಹಿಂದೆ ಕೂಡ ಇದೇ ರೀತಿ ಪ್ರಕರಣಗಳು ನಡೆದಿತ್ತು. ಆಗ ಉಪ ನೊಂದಾಣಾಧಿಕಾರಿಗಳನ್ನು ಅಮಾನತ್ತು ಮಾಡಿದರು. ಅಕ್ರಮ ಬಡಾವಣೆ, ನಿವೇಶನಗಳಿಗೆ ನಕಲಿ ದಾಖಲೆ ಸೃಷ್ಟಿಸಿ ದ್ರೋಹ ಮಾಡಿದ್ದಾರೆ. ದಾಖಲಾತಿ ಇಲ್ಲದೇ ಆಗದೇ ನೋಂದಣಿ ಮಾಡಿಕೊಟ್ಟಿದ್ದಾರೆ ಎಂದು ಅವರು ಹೇಳಿದರು.

     ಈ ಪ್ರಕರಣ ಸಂಬಂಧ ಸಿಸಿಬಿಗೆ ಕೂಡ ದೂರು ಸಲ್ಲಿಸಲಾಗಿತ್ತು.ಆದರೆ,ಸಿಸಿಬಿಗೆ ಇಲಾಖೆಯ ವರು ದಾಖಲೆಗಳನ್ನು ಕೊಡುತ್ತಿರಲಿಲ್ಲ.ಹೀಗಾಗಿ ನಾನೇ ಸಿಸಿಬಿಗೆ ಹೆಚ್ಚುವರಿ ತನಿಖೆ ನಡೆಸ ಬೇಕು ಅಂತ ಡಿಜಿಪಿ ಅವರಿಗೆ ದೂರು ಕೊಟ್ಟಿದ್ದೇನೆ.ತನಿಖೆಗೆ ಸಹಕಾರ ನೀಡಿಲ್ಲ ಅಂದರೆ ಪೆÇಲೀಸರು ಕ್ರಮ ಹೇಗೆ ತೆಗೆದು ಕೊಳ್ಳುತ್ತಾರೆ.

    ಒಂದೊಂದು ನೋಂದಣಿಗೂ 20-30 ಸಾವಿರ ಹಣ ಪಡೆದುಕೊಳ್ಳುತ್ತಾರೆ.ಇದರಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ಆಗಿದೆ. ಕಂದಾಯ ಸಚಿವರು ಕೂಡ ನನ್ನ ಬಳಿ ಚರ್ಚೆ ಮಾಡಿ ದ್ದಾರೆ. ಸ್ಮಶಾನ,ಕೆರೆ ಜಾಗ,ಸರ್ಕಾರಿ ಜಮೀನನ್ನೂ ಸ್ವಾಹ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.ಕೆಹೆಚ್ ಬಿ ಯಲ್ಲಿಯೂ ಸಿಎ ನಿವೇಶನಗಳನ್ನು ಖಾಸಗಿಯವರಿಗೆ ಪರಬಾರೆ ಮಾಡಿರುವ ಸುಮಾರು 44 ಪ್ರಕರಣಗಳು ಗಮನಕ್ಕೆ ಬಂದಿವೆ.ಇದರ ಬಗ್ಗೆಯೂ ತನಿಖೆ ನಡೆಸುವಂತೆ ಮನವಿ ಮಾಡಿದ್ದೇವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap