ಬಿ.ಜೆ.ಪಿ ಕಾರ್ಯಕರ್ತರ ಮೋಟಾರು RALLYಗೆ ಚಾಲನೆ

ಚಿಕ್ಕನಾಯಕನಹಳ್ಳಿ

        ಬಿ.ಜೆ.ಪಿ ಪಕ್ಷದ ಕಾರ್ಯಕರ್ತರು ಪ್ರಧಾನಮಂತ್ರಿ ನರೇಂದ್ರಮೋದಿಜಿಯವರ ಸಾಧನೆಗಳನ್ನು ಮನೆ ಮನೆಗಳಿಗೆ ತಲುಪಿಸಿ ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ಕಿವಿಮಾತು ಹೇಳಿದರು.

      ಪಟ್ಟಣದ ನವೋದಯ ಕಾಲೇಜು ಆವರಣದಲ್ಲಿ ತಾಲ್ಲೂಕು ಬಿ.ಜೆ.ಪಿ ಕಾರ್ಯಕರ್ತರ ಮೋಟಾರು ರ್ಯಾಲಿಗೆ ಚಾಲನೆ ನೀಡಿ ಮಾತನಾಡಿ ನರೇಂದ್ರ ಮೋದಿಯವರು ಪುನಃ ಪ್ರಧಾನಮಂತ್ರಿ ಮಾಡಬೇಕೆಂಬ ಛಲದಿಂದ ಹೋರಾಟ ಮಾಡಿ ಮೋದಿಯವರಿಗೆ ನಾಯಕತ್ವದ ಗುಣಗಳಿದ್ದು, ದೇಶವನ್ನು ಮುನ್ನೇಡೆಸುವ ಹಾಗೂ ಅಭಿವೃದ್ದಿ ಮಾಡುವ ಛಲ ಇದೆ ಎಂದ ಅವರು, ನರೇಂದ್ರಮೋದಿಯವರು ಅಧಿಕಾರಕ್ಕೆ ಬರುವ ಮುನ್ನ ದೇಶದ ಅಭಿವೃದ್ದಿ ಮಾಡುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದರು.

        ಈ ಮೌಲ್ಯಮಾಪನ ಮಾಡಲು ನಾವು ಏನೇನು ಅಭಿವೃದ್ದಿ ಕೆಲಸ ಮಾಡಿದ್ದೇವೆ ಎಂದು ಹೇಳುವುದು ಕಾರ್ಯಕರ್ತರ ಕರ್ತವ್ಯ ಎಂದ ಅವರು ಡಾ||ಮನಮೋಹನ್‍ಸಿಂಗ್ ಒಳ್ಳೆಯ ಅರ್ಥಶಾಸ್ತ್ರಜ್ಞ ಆದರೆ ನಾಯಕತ್ವದ ಗುಣಗಳಿರಲಿಲ್ಲ ಪ್ರಧಾನಮಂತ್ರಿ ನರೇಂದ್ರಮೋದಿಯವರು ಬಡವರ ಪರ ಅನೇಕ ಯೋಜನೆಗಳನ್ನು ಜಾರಿಗೆ ತಂದು, ಬಡವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಸಬ್ಸಿಡಿ ಹಣ ತಲುಪಿಸಿದರು.

        ಅಧಿಕಾರ ಬಂದಾಗ ಜನರ ಸೇವೆ ಮಾಡಿದರೆ ಕಾರ್ಯಕರ್ತರು ಶಕ್ತರಾಗಿ ಬೆಳೆಯಬಹುದು. ರಾಜ್ಯದಲ್ಲಿ ಬಿ.ಜೆ.ಪಿ 20 ರಿಂದ 22 ಸಂಸದರು ಪಾರ್ಲಿಮೆಂಟ್‍ಗೆ ಕಳುಹಿಸಿದರೆ ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗುವುದು ಯಾವುದೇ ಅನುಮಾನವಿಲ್ಲ ಎಂದರು.

        ಎ.ಬಿ.ವಿ.ಪಿ ರಾಷ್ಟ್ರೀಯ ಉಪಾಧ್ಯಕ್ಷ ವಿನಯ್ ಬಿದರೆ ಮಾತನಾಡಿ ಮುಂದೆ ಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿಯವರು ಪುನಃ ಪ್ರಧಾನಮಂತ್ರಿಯಾಗಬೇಕು ಎಂಬುದು ಜನತೆಯ ಆಸೆ ಆದ್ದರಿಂದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಮೈಮರೆತು ಕುಳಿತುಕೊಳ್ಳಬಾರದು ಜಗತ್ತು ಮುಂಬರುವ ಲೋಕಸಭಾ ಚುನಾವಣೆಯನ್ನು ನೋಡುತ್ತಿದೆ ಭಾರತ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ 90 ಕೋಟಿ ಮತದಾರರು ಈ ಚುನಾವಣೆಯಲ್ಲಿ ಮತದಾನ ಮಾಡುತ್ತಿದ್ದಾರೆ ಪ್ರಥಮ ಬಾರಿಗೆ ಚುನಾವಣೆಯಲ್ಲಿ ಭಾಗವಹಿಸುವ 10 ಕೋಟಿ ಯುವ ಮತದಾರರನ್ನು ಸಂಪರ್ಕಿಸಿ ಮೋದಿಯವರ ಸಾಧನೆಗಳನ್ನು ಯುವ ಮತದಾರರಿಗೆ ತಿಳಿಸುವಂತೆ ಸಲಹೆ ನೀಡಿದ ಅವರು ಯು.ಪಿ.ಎ ಸರ್ಕಾರದ ಅವಧಿಯಲ್ಲಿ 1 ಲಕ್ಷ 72 ಸಾವಿರ ಕೋಟಿ ರೂ ಲೂಟಿ ಮಾಡಿ ದೇಶದವರನ್ನು ಯಾವ ರೀತಿಯಲ್ಲಿ ಲೂಟಿ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ.

         ಫುಲ್ವಾಮದಲ್ಲಿ ನಡೆದ ದಾಳಿಯಲ್ಲಿ 44 ಯೋಧರ ಮಾರಣ ಹೋಮಕ್ಕೆ ಪ್ರತೀಕಾರವಾಗಿ ಪಾಕಿಸ್ತಾನದ ಒಳಗೆ ನುಗ್ಗಿ 300ರಿಂದ 350 ಜನ ಭಯೋತ್ಪದಕರನ್ನು ವಾಯುಸೇನೆ ಹೊಡೆದು ಉರುಳಿಸಿದೆ. ಇದರಿಂದ ಪ್ರಪಂಚದ ಬಲಿಷ್ಠ ರಾಷ್ಟ್ರಗಳು ನಮ್ಮ ಬೆಂಬಲಕ್ಕೆ ಬಂದಿವೆ ಎಂದರು.

        ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶಂಕರಲಿಂಗಪ್ಪ, ತಾ||ಬಿಜೆಪಿ ಅಧ್ಯಕ್ಷ ಹೆಚ್.ಆರ್ ಶಶಿಧರ್, ತಾ.ಪಂ ಸದಸ್ಯ ಕೇಶವಮೂರ್ತಿ, ಪ್ರಧಾನ ಕಾರ್ಯದರ್ಶಿ ನಿರಂಜನ್‍ಮೂರ್ತಿ, ಬೇವಿನಹಳ್ಳಿ ಚನ್ನಬಸವಯ್ಯ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಕೇಶ್, ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link