ಬಿಜೆಪಿ ಸಂಘಟನೆಗೆ ವಿಭಿನ್ನ ಕಾರ್ಯಕ್ರಮ ರೂಪಿಸಿ : ಸುನೀಲ್‍ಕುಮಾರ್

ಚಿತ್ರದುರ್ಗ:

    ಸುಸಜ್ಜಿತ ಸಾಮಾಜಿಕ ಜಾಲತಾಣ ತಂಡ ರಚಿಸುವ ಮೂಲಕ ಸಂಘಟನಾ ಪರ್ವ ಸದಸ್ಯತ್ವ ಅಭಿಯಾನ ಕೈಗೊಳ್ಳುವಂತೆ ಕಾರ್ಕಳ ಶಾಸಕ ಹಾಗೂ ವಿಧಾನಸಭೆ ಮುಖ್ಯ ಸಚೇತಕ ಸುನೀಲ್‍ಕುಮಾರ್ ಕಾರ್ಯಕರ್ತರಿಗೆ ಹಾಗೂ ಮುಖಂಡರುಗಳಿಗೆ ಸೂಚಿಸಿದರು.

     ಬಿಜೆಪಿ.ಕಾರ್ಯಾಲಯದಲ್ಲಿ ಇತ್ತೀಚೆಗೆ ನಡೆದ ಸಂಘಟನಾ ಪರ್ವ ಸದಸ್ಯತ್ವ ಅಭಿಯಾನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ಪಂಚಾಯಿತಿಕಟ್ಟೆ ಹರಟೆಕಟ್ಟೆ ಹಾಗೂ ಸಮುದಾಯ ಭವನಗಳಲ್ಲಿ ಗುಂಪು ಸಭೆ ನಡೆಸಬೇಕು. ಬೀದಿನಾಟಕ, ಸಾರ್ವಜನಿಕ ಸ್ಥಳಗಳಲ್ಲಿ ಸಭೆ, ಪ್ರಮುಖರು ಹಾಗೂ ತಾರಾ ವ್ಯಕ್ತಿಗಳ ಸೇರ್ಪಡೆ ಕಾರ್ಯಕ್ರಮ, ಸಾಮಾಜಿಕ ಗುಂಪುಗಳು ಹಾಗೂ ಎನ್.ಜಿ.ಓ.ಗಳು ಪಕ್ಷಕ್ಕೆ ಸೇರ್ಪಡೆಯಾಗುವಂತೆ ಪ್ರೇರೇಪಿಸುವುದು, ಪ್ರಬಂಧ ರಚನೆ ಮತ್ತು ಬ್ಲಾಗ್ ಬರಹಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಸಂಘಟನಾ ಪರ್ವ ಸದಸ್ಯತ್ವ ಅಭಿಯಾನವನ್ನು ಶಕ್ತಿಯುತವಾಗಿಸಬೇಕೆಂದು ಮನವಿ ಮಾಡಿದರು.

     ಕಾಲೇಜುಗಳಲ್ಲಿ ಕವನ ರಚನೆ, ವಿಚಾರ ಸಂಕಿರಣ, ಸಾಂದರ್ಭಿಕ ವಿಷಯಗಳ ಬಗ್ಗೆ ಚರ್ಚೆ ಏರ್ಪಡಿಸುವುದರಿಂದ ಪರೋಕ್ಷವಾಗಿ ಸದಸ್ಯತ್ವ ಅಭಿಯಾನಕ್ಕೆ ಒತ್ತು ನೀಡಬೇಕು ಎಂದರು.ದೇಶದಲ್ಲಿ ಈ ಹಿಂದೆ 2013-14 ರ ಸಾಲಿನಲ್ಲಿ ಹನ್ನೊಂದು ಕೋಟಿ ಸದಸ್ಯತ್ವ ನೊಂದಾಯಿಸಿ ಇಡೀ ವಿಶ್ವದಲ್ಲಿಯೇ ಅತಿ ದೊಡ್ಡ ಪಕ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈ ಬಾರಿಯೂ ಸಹ ಅತಿ ಹೆಚ್ಚು ಯುವ ಸಮುದಾಯ ಹಾಗೂ ಇತರೆ ಎಲ್ಲಾ ಸಮುದಾಯದವರನ್ನೊಳಗೊಂಡು ಯುವ ಹಾಗೂ ಎಲ್ಲಾ ವಯೋಮಾನದವರನ್ನು ಸದಸ್ಯರನ್ನಾಗಿಸಿ ಪಕ್ಷವನ್ನು ಬಲಪಡಿಸಬೇಕು ಎಂದು ತಿಳಿಸಿದರು.

       ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ.303 ಸ್ಥಾನಗಳನ್ನು ಗಳಿಸಿ ಪ್ರಚಂಡ ಜಯಬೇರಿ ಭಾರಿಸಲು ಬಿಜೆಪಿ.ಯ ಸದಸ್ಯತ್ವ ಅಭಿಯಾನವೇ ಪ್ರಮುಖ ಕಾರಣ ಎಂದರು.

       ಬಿಜೆಪಿ.ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್ ಮಾತನಾಡಿ ಜು.6 ರಿಂದ ಆ.11 ರವರೆಗೆ ಜಿಲ್ಲೆಯಲ್ಲಿ ಸಂಘಟನಾ ಪರ್ವ ಸದಸ್ಯತ್ವ ಅಭಿಯಾನ ಕೈಗೊಂಡಿದ್ದು, ನವೀಕರಣ ಹಾಗೂ ಹೊಸದಾಗಿ ಸದಸ್ಯತ್ವ ನೊಂದಾಯಿಸಲಾಗುವುದು. ಐದು ಬೂತ್‍ಗೆ ಒಬ್ಬರು ಅಭಿಯಾನದ ವಿಸ್ತಾರಕರನ್ನು ನೇಮಕ ಮಾಡಲಾಗುವುದು. ಇದಕ್ಕಾಗಿ ನಾಲ್ಕೂ ನೂರು ಕಾರ್ಯಕರ್ತರು ಶ್ರಮಿಸಲಿದ್ದಾರೆ. ಜಿಲ್ಲೆಯಲ್ಲಿ ಒಂದು ಬೂತ್‍ಗೆ ಇನ್ನೂರು ಸದಸ್ಯರನ್ನು ನೇಮಕ ಮಾಡುವುದು ಅಭಿಯಾನದ ಗುರಿ ಎಂದು ಹೇಳಿದರು.

       ಎಲ್ಲಾ ವರ್ಗದ ಯುವ ಮತದಾರರು, ಮಹಿಳೆಯರು, ಸರ್ವವ್ಯಾಪಿ, ಸರ್ವಸ್ಪರ್ಶಿಯಾಗಿ 2.70 ಲಕ್ಷ ಸದಸ್ಯರನ್ನು ನೊಂದಾಯಿಸಲಾಗುವುದು. ಜ.2, 3, 4 ರಂದು ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯಾಗಾರ ನಡೆಸಲಾಗುವುದು. ಈಗಾಗಲೆ ಮಂಡಲ ಸಂಚಾಲಕರುಗಳನ್ನು ನೇಮಕ ಮಾಡಲಾಗಿದೆ ಎಂದು ಸಂಘಟನಾ ಪರ್ವ ಸದಸ್ಯತ್ವ ಅಭಿಯಾನದ ಮಾಹಿತಿ ನೀಡಿದರು.

      ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ, ಜಿ.ಎಂ.ಸುರೇಶ್, ಸಿದ್ದೇಶ್‍ಯಾದವ್, ಮಲ್ಲಿಕಾರ್ಜುನ್, ಮುರಳಿ, ರತ್ನಮ್ಮ, ವಕ್ತಾರ ನಾಗರಾಜ್‍ಬೇದ್ರೆ, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ಸುರೇಶ್‍ಸಿದ್ದಾಪುರ, ವೆಂಕಟೇಶ್‍ಯಾದವ್, ಸಂಪತ್, ಶ್ಯಾಮಲಶಿವಪ್ರಕಾಶ್ ಇನ್ನು ಮುಂತಾದವರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link