ರಾಹುಲ್ ಗೆ ಸಿದ್ದು ಆಹ್ವಾನ : ಬಿಜೆಪಿ ವ್ಯಂಗ್ಯಾತ್ಮಕ ಟೀಕೆ…!!!

ಬೆಂಗಳೂರು:
     ಕರ್ನಾಟಕದಿಂದ ರಾಹುಲ್ ಗಾಂಧಿಯವರನ್ನು ಲೋಕಸಭೆ ಸ್ಪರ್ಧಿಸುವಂತೆ ಸಿದ್ದರಾಮಯ್ಯ ಆಹ್ವಾನಿಸಿರುದನ್ನು ರಾಜ್ಯ ಬಿಜೆಪಿ ವ್ಯಂಗ್ಯ ಮಾಡುವ ಮೂಲಕ ಕಿಚ್ಚಾಯಿಸಿದೆ . 

      ತನ್ನ ಸ್ವಂತ ಕ್ಷೇತ್ರದಲ್ಲಿಯೇ ಗೆಲ್ಲಲು ಸಾಧ್ಯವಾಗದವರು ಮತ್ತೊಬ್ಬರಿಗೆ ಕಾರ್ಪೆಟ್ ಹಾಕಿ ಸ್ವಾಗತಿಸುತ್ತಿದ್ದಾರೆ, ಇದು ಹೇಗಿದೆ ಎಂದರೆ  “ಕೋತಿ ತಾನು ಕೆಡೋದಲ್ದೆ……” ಎಂಬ ಗಾದೆಯನ್ನು ಉಲ್ಲೇಖ ಮಾಡುವ ಮೂಲಕ ಟ್ವೀಟ್ ಮಾಡಿ ಕಾಂಗ್ರೆಸ್ ಕಾಲೆಳೆದಿದೆ.

      ಈ ಸಲದ ಲೋಕಸಭೆ ಚುನಾವಣೆಗೆ ನಮ್ಮ ರಾಜ್ಯದಿಂದಲೇ ಸ್ಪರ್ಧಿಸುವಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಸಿದ್ದರಾಮಯ್ಯ ಅವರು ಆಹ್ವಾನ ನೀಡಿದ್ದಾರೆ.

        ಕರ್ನಾಟಕ ಯಾವಾಗಲೂ ಕಾಂಗ್ರೆಸ್ ನಾಯಕರನ್ನು ಬೆಂಬಲಿಸಿದೆ. ಇದು ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಅವರ ವಿಚಾರದಲ್ಲಿ ಸಾಬೀತಾಗಿದೆ. ಮುಂದಿನ ಸರದಿ ನಮ್ಮ  ಪ್ರಧಾನಿ ಅಭ್ಯರ್ಥಿಯಾದ ಶ್ರೀ ರಾಹುಲ್ ಗಾಂಧಿಅವರದ್ದು ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ