ಬಿಜೆಪಿಯ ವಾಮ ಮಾರ್ಗದ ರಾಜಕಾರಣ ಅಂತ್ಯ :ಆಂಜನೇಯ

ಚಿತ್ರದುರ್ಗ;

      ಜಾತಿ ಜಾತಿಗಳ ನಡುವೆ, ಮನುಷ್ಯ ಮನುಷ್ಯರ ನಡುವೆ ಕಂದಕ ಸೃಷ್ಟಿಸುವುದು ಬಿಜೆಪಿಯವರ ಮೂಲ ಉದ್ದೇಶ ಎಂದು ಮಾಜಿ ಸಚಿವ ಹೆಚ್.ಆಂಜನೇಯ ಟೀಕಿಸಿದ್ದಾರೆ

      ಹೊಳಲ್ಕೆರೆ ತಾಲ್ಲೂಕಿನ ಹೆಚ್.ಡಿ.ಪುರ ಮತ್ತು ರಾಮಗಿರಿಯಲ್ಲಿ ಗುರುವಾರ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಅವರ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

      ಬಿಜೆಪಿಯ ನಾಯಕರು ರಾಜಮಾರ್ಗದ ರಾಜಕಾರಣ ಮಾಡುತ್ತಿಲ್ಲ. ಬದಲಾಗಿ ವಾಮ ಮಾರ್ಗದ ಮೇಲೆ ಹೆಚ್ಚು ನಂಬಿಕೆಯಿಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಇದು ಕೇವಲ ಕರ್ನಾಟಕ ಮಾತ್ರವಲ್ಲ ಇಡೀ ದೇಶದಲ್ಲಿಯೇ ಇಂತಹ ಕೆಟ್ಟ ರಾಜಕಾರಣವನ್ನು ನಾವು ನೋಡುವಂತಾಗಿದೆ ಎಂದರು

      ದೇಶದ ಜನರಲ್ಲಿ ಭ್ರಮೆ ಹುಟ್ಟಿಸಿ, ಸುಳ್ಳು ಭರವಸೆ ನೀಡಿ ಅಧಿಕಾರ ಹಿಡಿದಿರುವ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಕಳೆದ ಐದು ವರ್ಷದಲ್ಲಿ ಹೇಳಿಕೊಳ್ಳುವಂತಹ ಯಾವುದೇ ಕಾರ್ಯಕ್ರಮಗಳನ್ನು ಜಾರಿಗೆ ತಂದಿಲ್ಲ. ಹಿಂದಿನ ಕಾಂಗ್ರೆಸ್ ಸರ್ಕಾರ ರೂಪಿಸಿರುವ ಕಾರ್ಯಕ್ರಮಗಳು ಮತ್ತು ಜಾರಿಗೊಳಿಸಿದ ಬಹುತೇಕ ಯೋಜನೆಗಳನ್ನು ನಾವೇ ಜಾರಿಗೆ ತಂದಿರುವುದಾಗಿ ಜನರನ್ನು ವಂಚಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು

     ಮೋದಿ ಅವರು ಸುಳ್ಳು ಹೇಳುವ ಕೆಲೆಯನ್ನು ರೂಢಿಸಿಕೊಂಡಿದ್ದಾರೆ. ತನ್ನ ಐದು ವರ್ಷದ ಸಾಧನೆಯನ್ನು ಯಾವ ಸಮಾವೇಶದಲ್ಲಿಯೂ ಹೇಳಿಲ್ಲ. ಬರೀ ಮಾತು, ಜನರನ್ನು ಮೋಡಿ ಮಾಡುವ ತಂತ್ರಗಾರಿಕೆಯನ್ನು ಅನುಸರಿಸುತ್ತಲೇ ಬಂದಿದ್ದಾರೆಂದು ಆರೋಪಿಸಿದರು
ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಬಡವರು, ದಲಿತರು, ಕೂಲಿಕಾರ್ಮಿಕರು, ರೈತರು ಹೀಗೆ ಎಲ್ಲಾ ವರ್ಗದ ಜನರ ಶ್ರೇಯಸ್ಸಿಗೆ ಹತ್ತಾರು ಕಾರ್ಯಕ್ರಮನ್ನು ರೂಪಿಸಿದೆ. ಈ ದೇಶದ ಅಭಿವೃದ್ದಿಯ ಬಗ್ಗೆ ಕಾಂಗ್ರೆಸ್‍ಗೆ ಬದ್ದತೆ ಇದೆ. ಕಾಳಜಿಯೂ ಇದೆ ಎಂದು ಆಂಜನೇಯ ಹೇಳಿದರು

      ಈ ಬಾರಿಯ ಚುನಾವಣೆಯಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಕಳೆದ ವರ್ಷ ನಡೆದ ಕೆಲವು ರಾಜ್ಯಗಳ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಗೆ ಜನರು ಪಾಠ ಕಲಿಸಿದ್ದಾರೆ. ಜನರನ್ನು ಭ್ರಮೆಯಲ್ಲಿ ತೇಲಿಬಿಟ್ಟ ನರೇಂದ್ರ ಮೋದಿ ಯಾವ ಕಾರಣಕ್ಕೂ ಮತ್ತೆ ಪ್ರಧಾನಿಯಾಗಿ ಮುನ್ನಡೆಯಲು ಸಾಧ್ಯವೇ ಇಲ್ಲವೆಂದರು

      ಹಾಲಿ ಲೋಕಸಭಾ ಸದಸ್ಯರಾಗಿವ ಬಿ.ಎನ್.ಚಂದ್ರಪ್ಪ ಒಬ್ಬ ಸಜ್ಜನ ರಾಜಕಾರಣಿ. ಅವರಲ್ಲಿ ವಿನಯತೆ, ಮಾನವೀಯತೆಯ ಗುಣವಿದೆ. ಎಲ್ಲರನ್ನೂ ಪ್ರೀತಿಯಿಂದ ಕಾಣುವ ವಿಶೇಷ ಗುಣವಿದೆ. ಇಂತಹ ಒಬ್ಬ ದಕ್ಷ ಮತ್ತು ಅಭಿವೃದ್ದಿಯ ಬಗ್ಗೆ ಕಾಳಜಿ ಇರುವ ವ್ಯಕ್ತಿಯನ್ನು ಕ್ಷೇತ್ರದ ಜನರು ಮತ್ತೆ ಆಯ್ಕೆ ಮಾಡಬೇಕು ಎಂದು ಅವರು ಮತದಾರರಲ್ಲಿ ಮನವಿ ಮಾಡಿದರು

      ಕಳೆದ ಐದು ವರ್ಷದಲ್ಲಿ ಚಂದ್ರಪ್ಪ ಅವರು ಎಲ್ಲಿಯೂ ಆರೋಪಗಳಿಲ್ಲದಂತೆ ಉತ್ತಮವಾಗಿ ಕೆಲಸ ಮಾಡಿದ್ದಾರೆ. ತಮಗೆ ಬಂದಿರುವ ಅನುದಾನವನ್ನು ಸಮಾನವಾಗಿ ಹಂಚಿಕೆ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರದ ಮೇಲೆ ಹೆಚ್ಚಿನ ಒತ್ತಡ ತಂದು ವಿಧಾನಸಬಾ ಕ್ಷೇತ್ರಗಳಿಗೆ ಅನುದಾನ ಕೊಡಿಸಿ ಆ ಮೂಲಕ ಪ್ರಗತಿಗೆ ಸಹಕಾರ ನೀಡಿದ್ದಾರೆಂದು ಆಂಜನೇಯ ನುಡಿದರು

      ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಮಾತನಾಡಿ, ಈ ಬಾರಿಯ ಚುನಾವಣೆ ಕೇವಲ ಕಾಂಗ್ರೆಸ್ ಮತ್ತು ಬಿಜೆಪಿಯ ನಡುವಿನ ಹೋರಾಟವಲ್ಲ, ಇದು ದೇಶದ ಹಿತ ಮತ್ತು ಪ್ರಜಾಪ್ರಭುತ್ವದ ವಿಚಾರದ ಮೇಲೆ ನಡೆಯುತ್ತಿರುವ ಚುನಾವಣೆಯಾಗಿದೆ. ಸಂವಿಧಾನವನ್ನು ಬದಲಿಸಲು ಹೋರಟಿರುವವರಿಗೆ ಯಾವ ಕಾರಣಕ್ಕೂ ಬೆಂಬಲಿಸಕೂಡದು ಎಂದು ವಿನಂತಿಸಿದರು

       ಈ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಂವಿಧಾನ ಉಳಿಯಬೇಕೆಂದರೆ ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬೇಕು. ಅದಕ್ಕಾಗಿ ಎಲ್ಲಾ ಶೋಷಿತ ವರ್ಗಗಳು, ರೈತರು, ಯುವಕರು ಚಿಂತನೆ ಮಾಡಬೇಕು. ಸಾಮಾಜಿಕ ನ್ಯಾಯ ಮತ್ತು ಅಬಿವೃದ್ದಿ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಬೇಕು ಎಂದರು

       ಮಾಜಿ ಶಾಸಕ ಎ.ವಿ.ಉಮಾಪತಿ ಮಾತನಾಡಿ, ಇಂದು ದೇಶದಲ್ಲಿ ಕಾಂಗ್ರೆಸ್ ಪರವಾದ ವಾತಾವರಣ ನಿರ್ಮಾಣವಾಗುತ್ತಿದೆ. ರಾಹುಲ್ ಗಾಂಧಿ ಅವರ ನಾಯಕತ್ವದಲ್ಲಿ ನಾವು ಮತ್ತೆ ಅಧಿಕಾರಕ್ಕೆ ಬರಬೇಕಾದರೆ ಕಾರ್ಯಕರ್ತರು ಮತ್ತು ಮುಖಂಡರುಗಳು ನಮ್ಮ ಅಭ್ಯರ್ಥಿಯಾಗಿರುವ ಚಂದ್ರಪ್ಪ ಅವರನ್ನು ಬಹುಮತಗಳಿಂದ ಆಯ್ಕೆ ಮಾಡಬೇಕು ಎಂದು ಹೇಳಿದರು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬಿ.ಗಂಗಾಧರ್, ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ಕೆ.ಶಿವಮೂರ್ತಿ ಇನ್ನಿತರರು ಹಾಜರಿದ್ದರು

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap