ಬಿಜೆಪಿ ವೀಡಿಯೋ ಮುಗಿದು ಹೋಗಿರೋ ಕತೆ : ಡಿಕೆಶಿ

ಬೆಂಗಳೂರು:

ಬಿಜೆಪಿಯವರು ಹೇಳ್ತಿರೋ ವಿಡಿಯೋ ವಿಚಾರ ಬಹಳ ಹಿಂದೆ ಜೆಡಿಎಸ್ ಪಾರ್ಟಿ ಒಳಗೆ ಚರ್ಚೆ ಆಗಿದೆ. ಕುಮಾರಸ್ವಾಮಿ ಅವರೆ ಅಧಿವೇಶನದಲ್ಲೆ ಪ್ರಸ್ತಾಪ ಮಾಡಿದ್ದಾರೆ. ಅದರಲ್ಲಿ ಹೊಸದೇನೂ ಇಲ್ಲ ಎಂದು ಜಲ ಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಸಿಎಂ ಆಡಿಯೋ ಬಿಡುಗಡೆಯಿಂದ ಬಿಜೆಪಿಯವರು ಹತಾಶರಾಗಿದ್ದಾರೆ. ಅವರು ಅದನ್ನು ಬೋಗಸ್ ಅಂತಾದರೂ ಹೇಳಲಿ, ಫಿಲ್ಮ್ ಅಂತಾದರೂ ಹೇಳಲಿ. ಯಾರು ಏನು ಬೇಕಾದರೂ ವಾದ ಮಾಡಲಿ, ಸತ್ಯ ಮುಚ್ಚಿಡೊದಿಕ್ಕೆ ಆಗುವುದಿಲ್ಲ ಎಂದು ಮಾಧ್ಯಮದವರಿಗೆ ಭಾನುವಾರ ಪ್ರತಿಕ್ರಿಯೆ ವ್ಯಕ್ತಪಡಿಸಿದರು.

ಸ್ಪೀಕರ್ ಅವ್ರು ವಿಧಾನಸಭೆಯಲ್ಲಿ ನಾನೇ ವಿಷಯ ಪ್ರಸ್ತಾಪ ಮಾಡ್ತೀನಿ ಅಂತ ಹೇಳಿದ್ದಾರೆ. ಯಾವ ರೀತಿ ತನಿಖೆ ಆಗಬೇಕು ಅಂತ ಸ್ಪೀಕರ್ ಅವ್ರೇ ನಾಳೆ ಚರ್ಚೆ ಮಾಡಿ, ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.

ರಾಜ್ಯದ ಜನತೆ ಇದೆಲ್ಲವನ್ನು ಗಮನಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ವಾದ-ಪ್ರತಿವಾದ, ಕೌಂಟರ್ ಎಲ್ಲ ಬೇಕಾದಷ್ಟು ಆಗುತ್ತೆ.
ನಾನು ಮತ್ತು ನೀವು ಗಾಬರಿ ಪಡುವ ಅಗತ್ಯವಿಲ್ಲ. ನೀವು ದಿನಾ ಸಿನಿಮಾ ನೋಡ್ತಿದ್ದೀರಾ ಮತ್ತು ತೋರಿಸ್ತಾ ಇದ್ದೀರಾ. ವಾಸ್ತವಾಂಶ ಯಾರು ಮುಚ್ಚಿಡೋದಿಕ್ಕೆ ಆಗೋದಿಲ್ಲ. ಯಾರೂ ಯಾವುದನ್ನು ಡಬ್ ಮಾಡೋದಕ್ಕೆ ಆಗೋದಿಲ್ಲ. ಬೇಕಾದಷ್ಟು ಸಂಸ್ಥೆಗಳು ಇದ್ದಾವೆ ತನಿಖೆ ಮಾಡೋಕೆ ಎಂದು ಹೇಳಿದರು.

ದೇಶದಲ್ಲಿ ವಿದ್ಯಾವಂತರು, ಬುದ್ದಿವಂತರು ಇದ್ದರಷ್ಟೇ ಸಾಲದು. ಜತೆಗೆ ಪ್ರಜ್ಞಾವಂತಿಕೆಯೂ ಇರಬೇಕು. ನನ್ನ ಧ್ವನಿ, ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ, ಧ್ವನಿಯನ್ನ ಯಾರಾದರೂ ಬದಲಾವಣೆ ಮಾಡೋಕೆ ಆಗುತ್ತಾ ಎಂದು ಪ್ರಶ್ನಿಸಿದರು. ಯಾರು ಮಿಮಿಕ್ರಿ ಮಾಡೋದಕ್ಕೆ ಆಗೋದಕ್ಕೆ ಆಗೊಲ್ಲ. ವಾಸ್ತವಾಂಶವನ್ನು ನಾವು ಒಪ್ಪಿಕೊಳ್ಳಬೇಕು. ಏಕೆಂದರೆ ಈಗ್ಯಾವುದೂ ಮುಚ್ಚುಮರೆಯಿಂದ ನಡೆಯುತ್ತಿಲ್ಲ. ಎಲ್ಲಾ ಬಹಿರಂಗವಾಗಿ ನಡೆಯುತ್ತಿದೆ ಎಂದರು.

ಯಡಿಯೂರಪ್ಪನವರು ಶರಣಗೌಡರ ಜತೆ ಮಾತಾಡಿರುವುದನ್ನು ಒಪ್ಪಿಕೊಂಡಿರುವ ಬಗ್ಗೆ ಪ್ರಸ್ತಾಪಿಸಿದಾಗ, ಅವರು ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಒಪ್ಪಿಕೊಂಡಿದ್ದಾರೆ. ಹೀಗಾಗಿ ಮಿಮಿಕ್ರಿ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಕೆಮ್ಮು, ಸುಕ್ಕು, ಕಳ್ಳತನ ಮತ್ತಿತರರ ವಿಚಾರಗಳನ್ನ ಮುಚ್ಚಿಡಲು ಆಗೊಲ್ಲ ಎಂದರು.

ಯಡಿಯೂರಪ್ಪನವರ ಆತ್ಮಸಾಕ್ಷಿಯನ್ನು ಮೆಚ್ಚುತ್ತೇನೆ. ನಾಳೆ ಏನು ಮಾಡಬೇಕು ಅನ್ನೋದು ಸ್ಪೀಕರ್‍ಗೆ ಬಿಡೋಣ. ಯಡಿಯೂರಪ್ಪಗೆ ದೇವರು ಒಳ್ಳೆಯದು ಮಾಡಲಿ ಎಂದರು.

ಬಿ.ಸಿ. ಪಾಟೀಲ್, ಹೆಬ್ಬಾರ್ ಪತ್ನಿ ವಾಯ್ಸ್ ಕೇಳಿದ್ದೀರಲ್ವಾ? ಒಮ್ಮೆ ನಾನು ಇರುವಾಗಲೇ ಒಬ್ಬ ಶಾಸಕರಿಗೆ ಜನಾರ್ಧನ ರೆಡ್ಡಿ ಕರೆ ಮಾಡಿದ್ರು. ಅವರು ಕರೆ ಮಾಡಿದ್ದು ಹೊಸ ಶಾಸಕನಿಗೆ. ಆಗ ನಾನೇ ವಾಪಸ್ಸು ಕರೆ ಮಾಡಿ ನನ್ನ ಮುಖ್ಯಮಂತ್ರಿ ಮಾಡ್ರಯ್ಯ. ಹೊಸಬರನ್ನು ಯಾಕೆ ಗೋಳು ಹೊಯ್ಕೊತೀರಿ ಅಂದಿದ್ದೆ ಎಂದು ತಿಳಿಸಿದರು.

ಹುಬ್ಬಳ್ಳಿ ಕಾರ್ಯಕ್ರಮಕ್ಕೆ ಕೇಂದ್ರ ಸರಕಾರ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಆಹ್ವಾನ ನೀಡದಿರುವುದು ರಾಜ್ಯಕ್ಕೆ ಮಾಡಿದ ಅಪಮಾನ ಎಂದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link