ವಿಜಯಪುರ
ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರು ಮನಮೋಹನ ಸಿಂಗ್ ರಂತಹ ಮೇಧಾವಿಗಳು ಜಾಗತೀಕರಣ ಸಂದರ್ಭದಲ್ಲಿ ಹಾಕಿದ ಭಾರತದ ಆರ್ಥಿಕತೆ ಬದ್ರ ಬುನಾದಿಯನ್ನು ಪ್ರಧಾನಿ ನರೇಂದ್ರ ಮೋದಿ ಯವರು ಅಲಗಾಡುವಂತೆ ಮಾಡಿದ್ದಾರೆಂದು ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಆರೋಪಿಸಿದ್ದಾರೆ.
ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಕಾಂಗ್ರೆಸ್-ಎನ್.ಸಿ.ಪಿ ಮೈತ್ರಿಕೂಟ ಅಭ್ಯರ್ಥಿ ಗಳ ಪರ ಪ್ರಚಾರ ಸಭೆಗಳನ್ನು ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ದ ಅವರು, ಯುಪಿಎ ಸರ್ಕಾರದ 10 ವರ್ಷಗಳ ಕಾಲದಲ್ಲಿ ಭಾರತದ ಆರ್ಥಿಕತೆ ಚೆನ್ನಾಗಿದ್ದು,ಅಮೇರಿಕಾ, ಯೂರೋಪಗಳಲ್ಲಿ ಅರ್ಥಿಕ ಹಿಂಜರಿತ ಉಂಟಾದರೂ, ಭಾರತಕ್ಕೆ ಯಾವುದೇ ಹಾನಿಯಾಗಿರಲಿಲ್ಲ.ಅಂತಹ ಆರ್ಥಿಕ ಹಿಂಜರಿತ ಗಳನ್ನು ತಡೆದುಕೊಳ್ಳುವ ಶಕ್ತಿ ಭಾರತ ದೇಶಕ್ಕೆ ಆ ಸಂದರ್ಭದಲ್ಲಿ ಇತ್ತು.ಪ್ರಧಾನಿ ನರೇಂದ್ರ ಮೋದಿಯವರು ಭಾರತ ದೇಶದ ಜನತೆ,ಸಂಸತ್ತು ತಮ್ಮದೇ ಸಚಿವ ಸಂಪುಟ, ರಿಸರ್ವ್ ಬ್ಯಾಂಕ್ ಸೇರಿದಂತೆ ಆರ್ಥಿಕ ಸಂಸ್ಥೆ ಸಂಸ್ಥೆಗಳನ್ನೂ ಕತ್ತಲಲ್ಲಿಟ್ಟು, ನೋಟು ಅಮಾನ್ಯೀಕರಣದಂತಹ ಏಕಪಕ್ಷೀಯ ಕ್ರಮ ಜರುಗಿಸಿದರ ಫಲವಾಗಿ ಇಂದಿಗೂ ನಾವು ಹಾನಿಯನ್ನು ಅನುಭವಿಸುತ್ತಿದ್ದೇವೆ ಎಂದು ಅವರು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಆದಾಯ ತೆರಿಗೆ ಇಲಾಖೆ ಮತ್ತು ಜಾರಿನಿರ್ದೇಶನಾಲಯಗಳನ್ನು ವಿರೋಧ ಪಕ್ಷ ಗಳನ್ನು ದಮನಕ್ಕಾಗಿ ಬಳಸಿಕೊಳ್ಳಲಾಗುತ್ತಿದ್ದು, 5 ವರ್ಷಗಳ ಕಾಲ ಸುಮ್ಮನಿದ್ದು, ಇವರು ಮಹಾರಾಷ್ಟ್ರದಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ,ಮಹಾರಾಷ್ಟ್ರ ದಲ್ಲಿ ಶರದ್ ಪವಾರ ಅಂತಹ ರಾಷ್ಟ್ರೀಯವಾದಿ ನಾಯಕರಿಗೆ ಇವರು ಕಪ್ಪು ಚುಕ್ಕೆ ತರಲು ಸಾಧ್ಯವಿಲ್ಲ.ಕರ್ನಾಟಕದಲ್ಲಿ ಡಿ.ಕೆ.ಶಿವಕುಮಾರ, ಜಿ.ಪರಮೇಶ್ವರ ಅವರನ್ನು ರಾಜಕೀಯ ಕಾರಣಗಳಿಗಾಗಿಯೇ ತೊಂದರೆ ನೀಡಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಆಡಳಿತ ಶಾಸಕರನ್ನು ಖರೀದಿಸಿ ಸರ್ಕಾರ ರಚಿಸಿದ್ದ ಬಿಜೆಪಿಯವರು ಇದೀಗ ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ ಯವರಿಗೂ ಬೆದರಿಕೆ ಹಾಕಿದ್ದಾರೆ. ಪುಲ್ವಮಾ, ಬಾಲಾಕೋಟ್ ನಂತಹ ವಿಷಯ ಗಳನ್ನು ಮುಂದೆ ಮಾಡಿ ಕಳೆದ ಲೋಕಸಭಾ ಚುನಾವಣೆ ಗೆದ್ದ ಇವರು ದೇಶದಲ್ಲಿ ಇಷ್ಟು ಪ್ರಮಾಣ ಆರ್.ಡಿಎಕ್ಸ್ ಹಾಗೂ ಉಗ್ರಗಾಮಿಗಳು ಹೇಗೆ ಒಳತಂದರು ? ಎಂಬುದನ್ನು ಪತ್ತೆ ಹಚ್ಚಲಿಲ್ಲ. ಇದು ಕೇಂದ್ರದ ವೈಫಲ್ಯ ಎಂದು ಮಾಧ್ಯಮ ದವರು ಪ್ರಶ್ನಿಸಲಿಲ್ಲ ಎಂದರು.
ಮೋದಿ ಅವರಿಗಿಂತ 136 ಹೆಚ್ಚಿನ ಲೋಕಸಭಾ ಸದಸ್ಯರನ್ನು ಹೊಂದಿದ ರಾಜೀವ ಗಾಂಧಿಯವರೇ ಮುಂದಿನ ಚುನಾವಣೆಯಲ್ಲಿ ನಮ್ಮ ಸರ್ಕಾರ ಕಳೆದುಕೊಳ್ಳ ಬೇಕಾಯಿತು.ಕಾಲ ಚಕ್ರ ತಿರುಗಲಿದೆ. ದೇಶದಲ್ಲಿ ಏಕಚಕ್ರಾಧಿಪಾಥ್ಯ ಸ್ಥಾಪಿಸಲು ಹೊರಟಿರುವ ಮೋದಿ ಮತ್ತು ತಂಡವೇ ಅವರಿಗೆ ಅವರ ವೈಫಲ್ಯವೇ ತಿರುಗು ಬಾಣ ಆಗಲಿದೆ ಎಂದರು.
ಈ ಭೂಮಿ ನಮ್ಮ ಆಸೆಗಳನ್ನು ತಡೆದುಕೊಳ್ಳಬಹುದೇ ಹೊರತು ದುರಾಸೆಗಳ ನಲ್ಲ.ನಿಸರ್ಗಿದ ವಿರುದ್ಧವಾಗಿ ನಡೆದುಕೊಂಡವರು ಎಷ್ಟೇ ದೊಡ್ಡವರಾದರೂ ಕೂಡ ಬೆಲೆ ತೆರಲೇಬೇಕಾಗುತ್ತದೆ. ಮೋದಿಯವರು ಭಾರತದ ಶ್ರೇಷ್ಠ ಪ್ರಜಾಪ್ರಬು ತ್ವ ಸಂವಿಧಾನದ ಆಸೆಯಗಳಿಗೆ ವಿರುದ್ಧವಾಗಿ ನಡೆದಿದ್ದು, ಇದಕ್ಕೆ ಉತ್ತರ ಕಾದಿದೆ ಎಂದರು.ಅಜೀರ್ಣ ಎಣಿಸುವಷ್ಟು ಬಹುಮತ ಪಡೆದಿರುವ ಇವರು, ಅದು ಜೀರ್ಣ ವಾಗದೇ ಅವರ ಅಂತ್ಯಕ್ಕೆ ಆರಂಭವಾಗಲಿದೆ ಎಂದು ಮುನ್ಸೂಚನೆ ನೀಡಿದರು.
ಕಾಂಗ್ರೆಸ್ ಆಡಳಿತ ಅಂತ್ಯವಾಗಲು 70 ವರ್ಷ ಬೇಕಾಯಿತು. ಹಾಗಿದ್ದರೆ ಮೋದಿ ಯವರ ಅಂತ್ಯ ಯಾವಾಗ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಎಂ.ಬಿ. ಪಾಟೀಲ್ರು ಬಿಜೆಪಿ ಪಕ್ಷದ ಸುಬ್ರಮಣ್ಯಂ ಸ್ವಾಮಿಯವರೇ ಮೋದಿಯನ್ನು ಟೀಕಿ ಸಿದ್ದಾರೆ. ಇವರ ಎಲ್ಲ ಭರವಸೆಗಳು ಪೊಳ್ಳು ಎಂದು ಇದೀಗ ಜನರಿಗೆ ಗೊತ್ತಾಗ ಲಿದ್ದು, ಇನ್ನೂ 2ವರ್ಷಗಳಲ್ಲಿ ಇವರ ಪತನ ಆರಂಭವಾಗಲಿದೆ ಎಂದು ಭವಿಷ್ಯ ನುಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ