ಶಿರಾ ಕ್ಷೇತ್ರದ ಮತದಾರ ಕಾಂಗ್ರೆಸ್-ಜೆಡಿಎಸ್ ತಿರಸ್ಕರಿಸಿ ಬಿಜೆಪಿ ಬೆಂಬಲಿಸುವುದು ಖಚಿತ

ಶಿರಾ

    ಸುದೀರ್ಘವಾಗಿ ಕಳೆದ 56 ವರ್ಷಗಳಿಂದಲೂ ಶಿರಾ ಕ್ಷೇತ್ರದ ಜನತೆ ಕಾಂಗ್ರೆಸ್ ಹಾಗೂ ಜೆ.ಡಿ.ಎಸ್. ಪಕ್ಷಕ್ಕೆ ಮಣೆ ಹಾಕಿ ಈ ಎರಡೂ ಪಕ್ಷಗಳ ಹಣೆ ಬರಹವನ್ನು ಕಟ್ಟಿ ಹಾಕಿದ್ದು, ಪ್ರಸ್ತುತ ಉಪ ಚುನಾವಣೆಯಲ್ಲಿ ಬಿ.ಜೆ.ಪಿ. ಪಕ್ಷದ ಕೇಸರಿ ಬಾವುಟ ಹಾರುವ ಮೂಲಕ ಪಕ್ಷದ ಅಭ್ಯರ್ಥಿ ಡಾ.ಸಿ.ಎಂ.ರಾಜೇಶ್‍ಗೌಡ ಅವರ ಗೆಲುವು ಖಚಿತ ಎಂದು ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಹೇಳಿದರು.ಶಿರಾ ಉಪ ಚುನಾವಣೆಯ ಸಂಬಂಧ ಶುಕ್ರವಾರ ಬಿ.ಜೆ.ಪಿ. ಪಕ್ಷದಿಂದ ಅಧಿಕೃತವಾಗಿ ಡಾ.ಸಿ.ಎಂ.ರಾಜೇಶ್‍ಗೌಡ ಅವರು ಉಮೇದುವಾರಿಕೆ ಸಲ್ಲಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

    ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದ ಸರ್ಕಾರ ಕೋವಿಡ್‍ನಂತಹ ಕ್ಲಷ್ಠಕರ ಸಂದರ್ಬದಲ್ಲೂ ಎದೆಗುಂದದೆ ಕ್ಷಗಳನ್ನು ನಿಬಾಯಿಸುತ್ತಿದೆ. ಎಲ್ಲೂ ಕೂಡಾ ಕ್ಷೇತ್ರದ ಅಭಿವೃದ್ಧಿಯೂ ಕುಂಠಿತಗೊಂಡಿಲ್ಲ. ಶಿರಾ ಕ್ಷೇತ್ರದ ಯಾವುದೇ ಚುನಾವಣೆಗಳಲ್ಲಿ ಬಿ.ಜೆ.ಪಿ. ಅಭ್ಯರ್ಥಿ ಗೆಲುವು ಸಾಧಿಸಿಲ್ಲ. ಈ ಉಪ ಚುನಾವಣೆಯು ಇತಿಹಾಸವನ್ನು ಮೆರೆಯುತ್ತದೆ ಎಂದರು.

    ಈಗಾಗಲೇ ಶಿರಾ ಕ್ಷೇತ್ರದ ಎಲ್ಲಾ ಸಮೀಕ್ಷೆಗಳನ್ನು ಅವಲೋಕಿಸಿದ್ದೇನೆ. ಈ ಬಾರಿ ಇಲ್ಲಿಯ ಜನ ಯುವಕನಿಗೆ ಆದ್ಯತೆ ನೀಡಲು ಮುಂದಾಗಿದ್ದಾರೆ. ಪ್ರಜ್ಞಾವಂತರು ಮಾತ್ರಾ ಇಂತಹ ಬರದ ನೆಲದ ಸಮಸ್ಯೆಯನ್ನು ನೀಗಿಸಲು ಸಾದ್ಯ. ಬಿ.ಜೆ.ಪಿ. ಅಭ್ಯರ್ಥಿಯ ಉಮೇದುವಾರಿಕೆಯ ಸಂದರ್ಬದಲ್ಲಿ ಆಗಮಿಸಿರುವ ಕ್ಷೇತ್ರದ ಕಾರ್ಯಕರ್ತರನ್ನು ಕಂಡರೆ ಅವರ ಈ ಹುರುಪು ಚುನಾವಣೆಯವರೆಗೂ ಇರಲಿದೆ ಎಂಬ ವಿಶ್ವಾಸ ನಮ್ಮಲ್ಲಿದೆ ಎಂದು ಅಶ್ವಥ್‍ನಾರಾಯಣ ಹೇಳಿದರು.

    ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿ ಕೇಂದ್ರ ಸರ್ಕಾರದ ಮೋದಿಯವರ ಅಭಿವೃದ್ಧಿಪರ ಯೋಜನೆಗಳು ಈ ಉಪ ಚುನಾವಣೆಯ ಗೆಲುವಿಗೆ ಕಾರಣವಾಗಲಿವೆ. ಶಿರಾ ಕ್ಷೇತ್ರದ ಜನ ಎಲ್ಲಾ ಪಕ್ಷಗಳ ಹಣೆ ಬರಹವನ್ನೂ ನೋಡಿದ್ದಾರೆ. ಈ ಬಾರಿ ಬಿ.ಜೆ.ಪಿ. ಅಭ್ಯರ್ಥಿ ಡಾ.ರಾಜೇಶ್‍ಗೌಡ ಅವರನ್ನು ಆಯ್ಕೆ ಮಾಡಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ಕಾರಣವಾಗುವುದರಲ್ಲಿ ಎರಡು ಮಾತಿಲ್ಲ ಎಂದರು.
ಉತ್ತರ ಕರ್ನಾಟಕದಲ್ಲಿ ಅದರಲ್ಲೂ ತಮ್ಮ ಸ್ವೇಕ್ಷೇತ್ರದಲ್ಲಿ ಪ್ರವಾಹ ಬಂದು ಜನತೆ ತ್ತರಿಸಿ ಹೋಗುತ್ತಿದ್ದಾರೆ. ಈವರೆಗೂ ತಾವು ಕ್ಷೇತ್ರಕ್ಕೆ ಭೇಟಿ ನೀಡಿ ತಮ್ಮ ಜನರ ಸಮಸ್ಯೆ ಆಲಿಸಿಲ್ಲವೇಕೆ? ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಕಾರಜೋಳ ಅವರು ಪಕ್ಷವು ನನಗೆ ಶಿರಾ ಕ್ಷೇತ್ರದ ಚುನಾವಣೆಯ ಉಸ್ತುವಾರಿ ನೀಡಿದೆ. ಹಾಗಂತ ನಾನು ಸುಮ್ಮನೇ ಕುಳಿತಿಲ್ಲ ಅಲ್ಲಿನ ಎಲ್ಲಾ ಸಮಸ್ಯೆಗಳನ್ನು ಆಲಿಸಿದ್ದು ಜಿಲ್ಲಾಧಿಕಾರಿಗಳ ಸಂಪರ್ಕದಲ್ಲಿದ್ದೇನೆ ಎಂದ ಅವರು ನಾಳೆ ಉತ್ತರ ಕರ್ನಾಟಕದ ಪ್ರವಾಸ ಕೈಗೊಳ್ಳಲಿದ್ದೇನೆ ಎಂದರು.

      ವಿಜಯೇಂದ್ರ ಮಾತನಾಡಿ ಶಿರಾ ಕ್ಷೇತ್ರದ ಚುನಾವಣೆಯನ್ನು ನಮ್ಮ ಪಕ್ಷ ಸವಾಲಾಗಿ ಸ್ವೀಕರಿಸಿದೆ. ಕಾಂಗ್ರೆಸ್ ಹಾಗೂ ಜೆ.ಡಿ.ಎಸ್. ಪಕ್ಷದ ವರಿಷ್ಠರಿಗೆ ಉತ್ತರ ನೀಡಬೇಕಂತಲೇ ನಿರಂತರವಾಗಿ ಕ್ಷೇತ್ರದಲ್ಲಿ ಓಡಾಡುತ್ತಿದ್ದು ಪ್ರಸಕ್ತ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಡಾ.ಸಿ.ಎಂ.ರಾಜೇಶ್‍ಗೌಡ ಅವರ ಗೆಲುವು ಖಚಿತ ಎಂದರು.

     ದೇಶದಲ್ಲಿ ಬಿ.ಜೆ.ಪಿ. ಪಕ್ಷ ಎಂದೂ ಕೂಡಾ ಜಾತಿ ಆಧಾರದ ಮೇಲೆ ರಾಜಕಾರಣ ಮಾಡಿಕೊಂಡು ಬಂದಿಲ್ಲ. ಹಾಗಂತ ವಿರೋಧ ಪಕ್ಷಗಳು ಟೀಕಿಸಬಹುದು. ಅಂತಹ ಟೀಕೆಗಳಿಗೆ ನಾವು ಕುಗ್ಗುವುದಿಲ್ಲ. ಜಾತ್ಯಾತೀತವಾಗಿ ಶಿರಾ ಕ್ಷೇತ್ರದ ಅಭ್ಯರ್ಥಿ ಗೆಲ್ಲುವ ಎಲ್ಲಾ ಸೂಚನೆಗಳೂ ಇವೆ ಎಂದು ವಿಜಯೇಂದ್ರ ತಿಳಿಸಿದರು.

     ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ಜ್ಯೋತಿ ಗಣೇಶ್, ಮಾಜಿ ಶಾಸಕ ಕಿರಣ್‍ಕುಮಾರ್, ಜಿಲ್ಲಾ ಎಸ್.ಸಿ.ಮೋರ್ಚಾ ಅಧ್ಯಕ್ಷ ಎನ್.ಹುಚ್ಚಯ್ಯ, ಜಿಲ್ಲಾ ಬಿ.ಜೆ.ಪಿ. ಪ್ರ. ಕಾರ್ಯದರ್ಶಿ ಬಿ.ಕೆ.ಮಂಜುನಾಥ್, ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಎಸ್.ಆರ್.ಗೌಡ, ನಗರ ಘಟಕದ ಅಧ್ಯಕ್ಷ ವಿಜಯರಾಜ್, ಗ್ರಾ. ಅಧ್ಯಕ್ಷ ರಂಗಸ್ವಾಮಿ, ಲಕ್ಷ್ಮೀನಾರಾಯಣ್, ನಿಡಗಟ್ಟೆ ಚಂದ್ರಶೇಖರ್, ಯಲಿಯೂರು ಮಂಜುನಾಥ್, ಮದಲೂರು ನರಸಿಂಹಮೂರ್ತಿ, ಶ್ರೀರಂಗಪ್ಪ ಯಾದವ್, ಸುಧಾಕರಗೌಡ, ಶಿರಾ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಈರಣ್ಣ, ಮದನ್‍ಕುಮಾರ್, ಕೃಷ್ಣಮೂರ್ತಿ, ತರೂರು ಬಸವರಾಜು, ರಮೇಶ್ ಮುಂತಾದವರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link