ಬಿಜೆಪಿಯಿಂದ ಅಭಿನಂದನಾ ಕಾರ್ಯಕ್ರಮ

ಹೊನ್ನಾಳಿ:

      ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನನ್ನ್ನ ಪ್ರತಿಸ್ಪರ್ಧಿಯಾಗಿ ಕಾಂಗ್ರೇಸ್ ಪಕ್ಷದಿಂದ ಹೊನ್ನಾಳಿ ಕ್ಷೇತ್ರದ ಅಭ್ಯರ್ಥಿಯೇ ಇದ್ದುದ್ದರಿಂದ ಸ್ಥಳೀಯ ಬಿಜೆಪಿಯವರಿಗೆ ಒಂದು ರೀತಿಯ ಸ್ವಾಭೀಮಾನದ ಪ್ರಶ್ನೆಯಾಗಿತ್ತು ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಮುಂದಾಳತ್ವದಲ್ಲಿ ಈ ತಾಲೂಕು ತನಗೆ ಹೆಚ್ಚಿನ ಬಹುಮತ ದೊರಕಿಸಿಕೊಟ್ಟಿದ್ದು ಈ ತಾಲೂಕಿನ ಜನತೆಗೆ ಅಭಿನಂದಿಸುವುದಾಗಿ ಜಿ.ಎಂ. ಸಿದ್ದೇಶ್ವರ ಹೇಳಿದರು.

     ಅವರು ಶನಿವಾರ ಹಿರೇಕಲ್ಮಠದ ಸಮುದಾಯ ಭವನದಲ್ಲಿ ತಾಲೂಕು ಬಿಜೆಪಿವತಿಯಿಂದ ಆಯೋಜಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಹೊನ್ನಾಳಿ ತಾಲೂಕು ಈ ಹಿಂದೆ ಮೂರು ಬಾರಿ ಕೂಡ ತಮಗೆ ಬಹುಮತ ನೀಡುವ ಮೂಲಕ ಸದಾ ಬಿಜೆಪಿಗೆ ಬೆಂಬಲಿಸುತ್ತಾ ಬಂದಿದ್ದು ಈ ತಾನೂಕಿನ ಜನರ ಋಣ ತೀರಿಸುವ ಜವಾಬ್ದಾರಿ ತಮ್ಮ ಮೇಲಿದೆ ಎಂದು ಹೇಳಿದರು.

    ಕಳೆದ 2-3 ವರ್ಷಗಳಿಂದ ಈ ತಾಲೂಕಿನಲ್ಲಿ ಸಮರ್ಪಕ ಮಳೆಯಾಗಿಲ್ಲ ಕಾರಣ ರೈತರು ಸಾಕಷ್ಟು ಸಂಕಷ್ಟದಲ್ಲಿದ್ದು ಅವರ ಈ ಕಷ್ಟಕ್ಕೆ ತಾನು ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದ ಸಮಗ್ರ ನೀರಾವರಿ ಯೋಜನೆಯಡಿ ತಾಲೂಕಿನ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಮೂಲಕ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದರು.

     ಸಮಾರಂಭದಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ದೇಶದಲ್ಲಿ ನರೇಂದ್ರ ಮೋದಿಯವರು 2 ನೇ ಬಾರಿಗೆ ಪ್ರಧಾನಿಯಾಗಿದ್ದು ಇಡೀ ವಿಶ್ವವೇ ಗೌರವದಿಂದ ಭಾರತದೆಡೆ ನೋಡುವಂತೆ ಮಾಡಿದ್ದಾರೆ ಆದರೂ ಕೂಡ ವಿರೋಧ ಪಕ್ಷದವರು ಮೋದಿಯವರನ್ನು ಕೀಳು ಮಟ್ಟದ ಮಾತುಗಳ ಮೂಲಕ ಟೀಕಿಸಿದ್ದು ಇವರಿಗೆ ಈ ಬಾರಿಯ ಚುನಾವಣೆಯಲ್ಲಿ ರಾಜ್ಯದಲ್ಲಿ 25 ಹಾಗೂ ರಾಷ್ಟ್ರದಲ್ಲಿ ಬಿಜೆಪಿ 303 ಎನ್.ಡಿ.ಎ 353 ಸ್ಥಾನಗಳನ್ನು ಗಳಿಸಿಕೂಡುವ ಮೂಲಕ ಜನತೆ ಪ್ರತ್ಯುತ್ತರ ನೀಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಆಧ್ಯಕ್ಷ ಡಿ.ಜಿ.ರಾಜಪ್ಪವಹಿಸಿ ಮಾತನಾಡಿದರು ಜಿ.ಪಂ. ಅಧ್ಯಕ್ಷೆ ಶೈಲಜಾ ಬಸವರಾಜ್ ಸದಸ್ಯ ಎಂ.ಆರ್.ಮಹೇಶ್, ದೀಪಜಗದೀಶ್, ಮಾಜಿ ಸದಸ್ಯ ಕೆ.ಎಚ್. ಗುರುಮೂರ್ತಿ, ಮುಖಂಡರಾದ ಕುಬೇರಪ್ಪ ಮಾತನಾಡಿದರು. ಪ್ರಸ್ತಾವಿಕವಾಗಿ ಶಾಂತರಾಜ್ ಪಾಟೀಲ್ ಮಾತನಾಡಿದರು.

     ಈ ಸಂದರ್ಭದಲ್ಲಿ ಜಿ.ಪಂ. ಉಪಾಧ್ಯಕ್ಷ ಸುರೇಂದ್ರನಾಯ್ಕ, ಸದಸ್ಯ ವೀರಶೇಖರಪ್ಪ, ಉಮಾರಮೇಶ್, ತಾ.ಪಂ. ಅಧ್ಯಕ್ಷೆ ಚಂದ್ರಮ್ಮಹಾಲೇಶಪ್ಪ, ಮಾಜಿ ಅಧ್ಯಕ್ಷೆ ಸುಲೋಚನಮ್ಮಪಾಲಾಕ್ಷಪ್ಪ, ಕೆ.ವಿ.ಚನ್ನಪ್ಪ, ತಿಮ್ಮೇನಹಳ್ಳಿಚಂದಪ್ಪ, ಅರಕೆರೆ ನಾಗರಾಜ್, ವೀರಪ್ಪನಾಯ್ಕ, ಬಿಜೆಪಿ ಜಿಲ್ಲಾ ಮಹಿಳಾ ಅಧ್ಯಕ್ಷೆ ಜಯಮ್ಮ, ಗಾಯಿತ್ರಿಸಿದ್ದೇಶ್ವ ಜಿ.ಪಂ. ತಾ.ಪಂ. ಹಾಗೂ ಪ.ಪಂ. ಸದಸ್ಯರುಗಳು, ಮುಖಂಡರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link