ಬೆಂಗಳೂರು
ನೆಲಮಂಗಲದ ಟಿ.ಬೇಗೂರಿನ ಕೆರೆಯ ಸ್ಮಶಾನದಲ್ಲಿಒಂದು ತಿಂಗಳ ಹಿಂದೆ ಸಾವನ್ನಪ್ಪಿದ್ದ ವ್ಯಕ್ತಿಯ ಅಂತ್ಯ ಸಂಸ್ಕಾರ ನಡೆಸಿ ಹೊತಿದ್ದ ಮೃತದೇಹದ ತಲೆಯನ್ನು ಹೊರತೆಗೆದು ಮಾಟ ಮಂತ್ರ ಮಾಡಿದ್ದು ಆತಂಕ ಸೃಷ್ಠಿಯಾಗಿದೆ.ಬೇಗೂರಿನ ಅರಸಯ್ಯ ಎಂಬವರ ದೇಹದ ತಲೆ ಭಾಗವನ್ನು ದುಷ್ಕರ್ಮಿಗಳು ಮಂಗಳವಾರ ರಾತ್ರಿ ವೇಳೆ ಪೂಜೆಯ ನೆಪದಲ್ಲಿ ಮಾಟಮಂತ್ರ ಮಾಡಿ ಹೊರ ತೆಗೆದಿದ್ದಾರೆ.
ತಿಂಗಳ ತಿಥಿ ಕಾರ್ಯವನ್ನು ಕುಟುಂಬದವರು ನಡೆಸಿದ ನಂತರ ಈ ಕೃತ್ಯ ನಡೆದಿದೆ ಎಂದು ಅರಸಯ್ಯನವರ ಕುಟುಂಬದವರು ಹೇಳುತ್ತಿದ್ದಾರೆ.ಶತಮಾನದ ಹಳೆಯದಾದ ಸ್ಮಶಾನದಲ್ಲಿ ಈ ರೀತಿಯ ಘಟನೆ ಈ ಹಿಂದೆ ಎಂದೂ ಕೂಡ ನಡೆದಿರಲಿಲ್ಲ, ಈಗ ಕೃತ್ಯ ನಡೆದಿರುವುದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ ಎಂದು ಇಲ್ಲಿನ ಸ್ಥಳೀಯರು ಹೇಳುತ್ತಿದ್ದಾರೆ .ನೆಲಮಂಗಲ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








