ಬೆಂಗಳೂರು
ರಾಜಧಾನಿ ಬೆಂಗಳೂರಿನ ಎರಡು ಕಡೆಗಳಲ್ಲಿ ನೆತ್ತರು ಹರಿದಿದೆ.ಸಿಟಿ ಮಾರುಕಟ್ಟೆಯ ಬಳಿ ನಿಂಬೆಹಣ್ಣು ವ್ಯಾಪಾರಿಯನ್ನು ಹಾಗೂ ದೇವರಜೀವನಹಳ್ಳಿಯ ರೋಷನ್ ನಗರದಲ್ಲಿ ಮೀನು ವ್ಯಾಪಾರಿ ಸೇರಿ ಇಬ್ಬರನ್ನು ಭೀಕರವಾಗಿ ಕೊಲೆಮಾಡಿರುವ ದುರ್ಘಟನೆ ನಡೆದಿದೆ.
ಮೀನು ವ್ಯಾಪಾರಿ ಕೊಲೆ
ಸಿಟಿ ಮಾರುಕಟ್ಟೆಯ ಕಾಂಪ್ಲೆಕ್ಸ್ ಬಳಿ ಮಂಗಳವಾರ ರಾತ್ರಿ ಕೊಲೆ ಬೆದರಿಕೆ ಹಾಕಿದ್ದ ನಿಂಬೆಹಣ್ಣು ವ್ಯಾಪಾರಿಯೊಬ್ಬನನ್ನು ಮಚ್ಚು-ಲಾಂಗ್‍ನಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿ ಐವರು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಹಳೆಗುಡ್ಡದ ಹಳ್ಳಿಯ ಭರತ್ (32)ಎಂದು ಕೊಲೆಯಾದ ವ್ಯಾಪಾರಿಯನ್ನು ಗುರುತಿಸಲಾಗಿದೆ.ನಾಲ್ಕೈದು ಮಂದಿ ಸಹಚರರ ಜತೆ ಸೇರಿ ಸಿಟಿ ಮಾರುಕಟ್ಟೆಯ ಕಾಂಪ್ಲೆಕ್ಸ್ ಬಳಿ ಮಂಗಳವಾರ ರಾತ್ರಿ ಕೊಲೆ ಮಾಡಿ ತರಕಾರಿ ವ್ಯಾಪಾರಿ ಶರವಣ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಳೆಗುಡ್ಡದ ಹಳ್ಳಿಯ ಅಕ್ಕ-ಪಕ್ಕದ ಮನೆಗಳಲ್ಲಿ ವಾಸಿಸುತ್ತಿದ್ದ ಭರತ್, ಸಿಟಿ ಮಾರುಕಟ್ಟೆಯ ಕಾಂಪ್ಲೆಕ್ಸ್ ಬಳಿ ನಿಂಬೆಹಣ್ಣು ವ್ಯಾಪಾರ ಮಾಡುತ್ತಿದ್ದರೆ, ಶರವಣ ನಿಂಬೆಹಣ್ಣಿನ ಜತೆಗೆ ತರಕಾರಿ ವ್ಯಾಪಾರ ಮಾಡುತ್ತಿದ್ದ.
ಬೆದರಿಸಿದ್ದಕ್ಕೆ ಕೊಲೆ
ಕಳೆದ ಒಂದು ತಿಂಗಳ ಹಿಂದೆ ಇವರಿಬ್ಬರ ನಡುವೆ ಕ್ಷುಲ್ಲಕ ವಿಚಾರಕ್ಕೆ ಜಗಳ ನಡೆದಿತ್ತು. ಜಗಳದಲ್ಲಿ ರೊಚ್ಚಿಗೆದ್ದ ಭರತ್ ಶರವಣನ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದ ಈ ಸಂಬಂಧ ಪ್ರಕರಣ ದಾಖಲಾಗಿ ಇಬ್ಬರು ಜೈಲಿಗೆ ಹೋಗಿ ಬಂದಿದ್ದರು.
ಭರತ್‍ನ್ನು ಕೊಲೆ ಮಾಡಬಹುದು ಎನ್ನುವ ಆತಂಕದಿಂದ ನಾಲ್ಕೈದು ಮಂದಿ ಸಹಚರರ ಜತೆ ರಾತ್ರಿ 9ರ ವೇಳೆ ಸಿಟಿ ಮಾರುಕಟ್ಟೆ ಕಾಂಪ್ಲೆಕ್ಸ್ ಬಳಿಗೆ ಬಂದ ಶರವಣ, ಭರತ್ ಮೇಲೆ ಏಕಾಏಕಿ ದಾಳಿ ನಡೆಸಿ ಮಚ್ಚು-ಲಾಂಗ್‍ಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.ಈ ಸಂಬಂಧ ಪ್ರಕರಣ ದಾಖಲಿಸಿರುವ ಸಿಟಿ ಮಾರುಕಟ್ಟೆ ಪೆÇಲೀಸರು ಕೊಲೆಗೈದು ಪರಾರಿಯಾಗಿರುವ ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ.
ಮೀನು ವ್ಯಾಪಾರಿ ಕಗ್ಗೊಲೆ
ದೇವರಜೀವನಹಳ್ಳಿಯಲ್ಲಿ ರೋಷನ್ ನಗರದ ತಂಗಿಯ ಮನೆಯಲ್ಲಿ ಮಲಗಿದ್ದ ಮೀನು ವ್ಯಾಪಾರಿಯೊಬ್ಬನನ್ನು ಬುಧವಾರ ನಸುಕಿನಲ್ಲಿ ಡ್ಯಾಗರ್‍ನಿಂದ ಇರಿದು ತಲ್ವಾರ್‍ನಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿರುವ ದುರ್ಘಟನೆ ನಿಡೆದಿದೆ.
ರೋಷನ್ ನಗರದ ಮೀನು ವ್ಯಾಪಾರಿ ಜರಾರ್ (30) ಕೊಲೆಗೈದ ಇಷಾಕ್ ಸೇರಿ ಮೂವರನ್ನು ದೇವರಜೀವನಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದೇವರಜೀವನಹಳ್ಳಿಯ ಮುಖ್ಯರಸ್ತೆಯಲ್ಲಿ ಹಿಂದೆ ಮೀನು ವ್ಯಾಪಾರ ಮಾಡುತ್ತಿದ್ದ ಜರಾರ್, ಕಳ್ಳತನ ಸೇರಿದಂತೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಬಂದಿದ್ದನು.
ಪರಿಚಯಸ್ಥನಾದ ಇಷಾಕ್‍ನನ್ನು ಆಗಾಗ್ಗೆ ನಿಂದಿಸಿ ಆತನ ಅಕ್ಕನನ್ನೂ ಚುಡಾಯಿಸಿ ಜರಾರ್ ಕಿರುಕುಳ ನೀಡುತ್ತಿದ್ದನು. ಹಲವು ಬಾರಿ ಬುದ್ಧಿ ಹೇಳಿದ್ದರೂ ಆತನ ವರ್ತನೆ ಸರಿಯಾಗಿರಲಿಲ್ಲ. ಇದರಿಂದ ಆಕ್ರೋಶಗೊಂಡಿದ್ದ ಇಷಾಕ್, ತನ್ನ 6 ಮಂದಿ ಸಹಚರರ ಜತೆ ಸೇರಿ ಜರಾರ್‍ನ ಕೊಲೆಗೆ ಸಂಚು ರೂಪಿಸಿದ್ದ.
ಅದರಂತೆ ರೋಷನ್ ನಗರದ ತಂಗಿಯ ಮನೆಯಲ್ಲಿ ಮುಂಜಾನೆ 4.30ರ ವೇಳೆ ಮಲಗಿದ್ದ ಜರಾರ್ ಮೇಲೆ ಇಷಾಕ್ ಸೇರಿ 6 ಮಂದಿ ದಾಳಿ ನಡೆಸಿ ಡ್ಯಾಗರ್‍ನಿಂದ ಇರಿದು ತಲ್ವಾರ್‍ನಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಭಾಮೈದನ ಮೇಲೆ ಹಲ್ಲೆ
ಕೃತ್ಯನಡೆಸುವ ವೇಳೆ ಜರಾರ್ ಜತೆಯಲ್ಲಿದ್ದ ತಂಗಿಯ ಪತಿ ಶಬ್ಬೀರ್ ಅಹಮದ್ ಮೇಲೆ ಆರೋಪಿಗಳು ಚಾಕುವಿನಿಂದ ಹಲ್ಲೆ ನಡೆಸಿದ್ದು ಅವರಿಂದ ತಪ್ಪಿಸಿಕೊಂಡು ಹೋಗಿ ಆತ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾನೆ.ಕೂಡಲೇ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಕೈಗೊಂಡ ಡಿಜೆ ಹಳ್ಳಿ ಪೊಲೀಸರು ಇಷಾಕ್ ಸೇರಿ ಮೂವರನ್ನು ಬಂಧಿಸಿ ಮುಂದಿನ ತನಿಖೆ ಗೊಂಡಿದ್ದಾರೆಂದು ಡಿಸಿಪಿ ರಾಹುಲ್ ಕುಮಾರ್ ಶಹಪುರ ವಾಡಾ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ