ಎಲ್ಲಕ್ಕಿಂತ ರಕ್ತದಾನಕ್ಕೆ ಹೆಚ್ಚು ಮಹತ್ವ;ವಸ್ತ್ರಮಠ್

ಚಿತ್ರದುರ್ಗ

     ವಿದ್ಯೆಯನ್ನು ದಾನ ಮಾಡಿದರೆ ಒಬ್ಬ ವ್ಯಕ್ತಿಗೆ ಮಾತ್ರವೇ ಉಪಯೋಗವಾಗುತ್ತದೆ ಆದರೆ ರಕ್ತವನ್ನು ದಾನ ಮಾಡುವುದರಿಂದ ನಾಲ್ಕು ಜನರಿಗೆ ಉಪಯೋಗವಾಗುತ್ತದೆ ಇದರಿಂದ ರಕ್ತವನ್ನು ದಾನ ಮಾಡುವ ಕಾರ್ಯಕ್ಕೆ ಮುಂದಾಗುವಂತೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ವಸ್ತ್ರಮಠ್ ಕರೆ ನೀಡಿದರು.

      ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾಡಳಿತ, ಜಿಲ್ಲಾ ಪೋಲಿಸ್ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ರೆಡ್ ಕ್ರಾಸ್ ಸಂಸ್ಥೆವತಿಯಿಂದ

      ನಗರದ ವಕೀಲರ ಭವನದಲ್ಲಿ ಶುಕ್ರವಾರ ಕನ್ನಡ ರಾಜ್ಯೋತ್ಸವ, ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ರಕ್ತದಾನ ಮತ್ತು ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

       ಸಮಾಜದಲ್ಲಿ ನಾವುಗಳು ಬದುಕನ್ನು ನಡೆಸುತ್ತಿರುವುದರಿಂದ ಅದರ ಪರವಾಗಿ ಕೆಲವೊಂದು ಕೆಲಸಗಳನ್ನು ಮಾಡಬೇಕಿದೆ, ಇದರಲ್ಲಿ ರಕ್ತದಾನವೂ ಒಂದಾಗಿದೆ, ರಕ್ತ ಎಲ್ಲರಿಗೂ ಅತಿ ಅವಶ್ಯಕವಾದ ವಸ್ತುವಾಗಿದೆ, ಇದನ್ನು ಕೃತಕವಾಗಿ ತಯಾರು ಮಾಡಲು ಸಾಧ್ಯವಿಲ್ಲದೆ ಆದೇ ರೀತಿ ಪರ್ಯಾಯವಾಗಿ ಬೇರೆ ಸಹಾ ಇಲ್ಲ, ಇದರಿಂದ ಬೇರೆಯವರಿಂದ ರಕ್ತವನ್ನು ದಾನವಾಗಿ ಪಡೆಯುವುದರ ಮೂಲಕ ಅವಶ್ಯಕವಾಗಿ ಇರುವವರಿಗೆ ನೀಡಬಹುದಾಗಿದೆ, ಇದರಿಂದ ನಾಲ್ಕು ಕುಟುಂಬಗಳಿಗೆ ಸಹಾಯವಾಗಲಿದೆ ಎಂದು ನ್ಯಾಯಾಧೀಶರು ಹೇಳಿದರು.

         ದಾನಗಳಲ್ಲಿ ವಿವಿಧ ರೀತಿಯ ದಾನ ಇದೆ, ವಿದ್ಯೆದಾನ ಅನ್ನದಾನ, ವಸ್ತ್ರದಾನ, ಭೂದಾನ, ಗೋದಾನ ಸೇರಿದಂತೆ ದಾನಗಳಿವೆ ಇದರಲ್ಲಿ ಮಹತ್ವವಾದ ದಾನ ರಕ್ತದಾನವಾಗಿದೆ ಮೇಲಿನ ದಾನಗಳು ಸಾಮಾನ್ಯವಾದರೆ ರಕ್ತದಾನ ಮಾತ್ರ ವಿಶೇóವಾದ ದಾನವಾಗಿದೆ, ಬೇರೆ ದಾನ ಅಲ್ಪ ಪ್ರಮಾಣದ ತೃಪ್ತಿಯನ್ನು ನೀಡಿದರೆ ರಕ್ತದಾನ ಮಾಡುವುದರಿಂದ ನಮ್ಮ ದೇಹದಲ್ಲಿ ಹೊಸದಾಗಿ ರಕ್ತ ಬರಲು ಸಹಾಯವಾಗುತ್ತದೆ ಎಂದ ನ್ಯಾಯಾಧೀಶರು ರೆಡ್ ಕ್ರಾಸ್ ಸಂಸ್ಥೆ ಇದಕ್ಕೆ ಪೂರ್ವಕವಾಗಿ ಕೆಲಸವನ್ನು ಮಾಡುವುದರ ಮೂಲಕ ಜನತೆಯಲ್ಲಿ ರಕ್ತದಾನದ ಬಗ್ಗೆ ಜಾಗೃತಿಯನ್ನು ಮೂಡಿಸಿ ಸ್ವಯಂ ಆಗಿ ದಾನ ಮಾಡಲು ಪ್ರೇರೇಪಣೆಯನ್ನು ನೀಡುತ್ತಿದ್ಧಾರೆ ಎಂದು ಕಾರ್ಯವನ್ನು ಶ್ಲಾಘೀಸಿದರು.

         ವಿದ್ಯಾವಂತರಾದ ಹಲವಾರು ಜನತೆ ಸಮಾಜಕ್ಕೆ ಏನಾದರೂ ಕೊಡುಗೆಯನ್ನು ನೀಡುವಲ್ಲಿ ಯೋಚಿಸುತ್ತಾರೆ ಆದರೆ ಅಕ್ಷರವನ್ನು ಕಲಿಯದ ಭೀಮಾರೆಡ್ಡಿಯವರು ತಮ್ಮ ಸ್ವಂತ ದುಡಿಮೆಯಲ್ಲಿ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ ರೋಗಿಗಳ ಅನುಕೂಲಕ್ಕಾಗಿ ಕೊಠಡಿಯನ್ನು ನಿರ್ಮಾಣ ಮಾಡಿದ್ದಾರೆ, ಇದೇ ರೀತಿ ನಿರಾಶ್ರಿತರನ್ನು ತಮ್ಮ ಸಹೋದರಂತೆ ನೋಡಿಕೊಳ್ಳುವುದರ ಮೂಲಕ ಅವರು ಸಹಾ ನಮ್ಮಂತೆ ಎಂಬ ಬಾವನೆಯಿಂದ ನೋಡುತ್ತಿರುವ ಗೋನೂರು ನಿರಾಶ್ರಿತರ ಕೇಂದ್ರದ ಅಧೀಕ್ಷಕರಾದ ಮಹಾದೇವಯ್ಯ ಕೇಂದ್ರವನ್ನು ತಮ್ಮ ಮನೆಯ ರೀತಿಯಲ್ಲಿ ಇಟ್ಟಿಕೊಂಡಿದ್ದ ಶಿಸ್ತು ಮತ್ತು ಸ್ವಚ್ಚತೆಗೆ ಆದ್ಯತೆ ನೀಡಲಾಗಿದೆ ಎಂದು ಇಬ್ಬರು ಸಹಾ ಸಮಾಜ ಮುಖಿ ಕೆಲಸವನ್ನು ಮಾಡುತ್ತಿದ್ದಾರೆ ಎಂದು ನ್ಯಾಯಾಧೀಶರಾದ ವಸ್ತ್ರಮಠ್ ಪ್ರಂಶಸಿದ್ದಾರೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ವಿಶ್ವನಾಥ್ ವಹಿಸಿದ್ದಲ್ಲದೆ ರಕ್ತವನ್ನು ದಾನ ಮಾಡಿದರು.

       ನ್ಯಾಯಾಧೀಶರುಗಳಾದ ಬಸವರಾಜ್ ಚೇಗರೆಡ್ಡಿ, ವಿರೂಪಾಕ್ಷಯ್ಯ, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿಂಡಲಕೂಪ್ಪ, ರೆಡ್ ಕ್ರಾಸ್ ಸಂಸ್ಥೆಯ ಸಬಾಪತಿ ಮಹೇಂದ್ರನಾಥ್ ಕಾರ್ಯದರ್ಶಿ ಮಜಹರ್ ಉಲ್ಲಾ, ವಾಸವಿ ರಕ್ತ ನಿಧಿ ಕೇಂದ್ರ ಬಸವರಾಜ್, ಡಾ ರೂಪ ವಕೀಲರ ಸಂಘದ ಪ್ರಧಾನ ಕಾರ್ಯದರ್ಶೀ ಶಿವುಯಾದವ್ ಭಾಗವಹಿಸಿದ್ದರು

       ಇದೇ ಸಂದರ್ಭದಲ್ಲಿ ರೆಡ್ ಕ್ರಾಸ್ ಸಂಸ್ಥೆವತಿಯಿಂದ ಸವೋದಯ ಸಂಸ್ಥೆಯ ಭೀಮಾರೆಡ್ಡಿ ಮತ್ತು ಗೋನೂರು ನಿರಾಶ್ರಿತರ ಕೇಂದ್ರದ ಅಧೀಕ್ಷಕರಾದ ಮಹಾದೇವಯ್ಯರನ್ನು ಸನ್ಮಾನಿಸಲಾಯಿತು. ನಂತರ ರಕ್ತದಾನ ಕಾರ್ಯಕ್ರಮ ನಡೆಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link