ಮಿಡಿಗೇಶಿ
ಮಿಡಿಗೇಶಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೆ. 8 ರಂದು ವಿಶೇಷ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು. ಉಪ ತಹಸೀಲ್ದಾರ್ ಡಾ. ಗೌತಮ್ ಸ್ವಇಚ್ಛೆಯಿಂದ ರಕ್ತದಾನ ಮಾಡಿದ್ದು ವಿಶೇಷವಾಗಿತ್ತು. ಶಿಬಿರದಲ್ಲಿ ಇಪ್ಪತ್ತೈದಕ್ಕೂ ಹೆಚ್ಚಿನ ಜನರು ರಕ್ತದಾನ ಮಾಡಿದರು.
ಕೊರೊನಾ ಸಂದರ್ಭದಲ್ಲಿ ರಕ್ತದಾನ ನೀಡಿರುವುದು ಅನೇಕ ರೋಗಿಳಿಗೆ ಜೀವದಾನ ನೀಡಿದಂತಾಗಿದೆ ಎಂದು ಜಿಲ್ಲಾ ಆಸ್ಪತ್ರೆಯ ರಕ್ತ ಶೇಖರಣಾ ನಿಧಿ ಅಧಿಕಾರಿ ಡಾ. ಶೇಖ್ ಅಹಮದ್ ಹಾಗೂ ಮಿಡಿಗೇಶಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅರವಿಂದರೆಡ್ಡಿ ಪ್ರಗತಿಗೆ ತಿಳಿಸಿದರು. ಒಬ್ಬ ವ್ಯಕ್ತಿಗಳಿಂದ ಅವರ ವಯಸ್ಸಿನ ಆಧಾರದ ಮೇಲೆ ತಲಾ 350 ಎಂ.ಎಲ್ ಯಿಂದ 450 ಎಂ.ಎಲ್ ವರೆಗೆ ರಕ್ತ ಸಂಗ್ರಹಣೆ ಮಾಡಲಾಗುವುದೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹೆಲ್ತ್ ಇನ್‍ಸ್ಪೆಕ್ಟರ್ ಆರ್. ಸುರೇಶ್ ಬಾಬು, ದಾದಾ ಪೀರ್ ಆರ್.ಕೆ., ಶುಶ್ರೂಷಕಿ ರಮಾದೇವಿ, ಕಿರಿಯ ಆರೋಗ್ಯ ಕಾರ್ಯಕರ್ತೆ ನಾಗಮಣಿ, ಕಮಲಮ್ಮ, ಡಿ ಗ್ರೂಪ್ ನೌಕರರಾದ ನರಸಿಂಹರಾಜು, ಕಮಲಮ್ಮ ಹಾಗೂ ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು. ಪ್ರತಿ ಬುಧವಾರ ನಿಮ್ಹಾನ್ಸ್ ವೈದ್ಯರ ಭೇಟಿ : ಇನ್ನೊಂದು ವಿಶೇಷವೆಂದರೆ ಇನ್ನು ಮುಂದೆ ಪ್ರತಿ ಎರಡನೆಯ ಬುಧವಾರದಂದು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯ ಮಾನಸಿಕ ರೋಗ ತಪಾಸಣಾ ವೈದ್ಯರು ಮಿಡಿಗೇಶಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರಲಿದ್ದಾರೆ. ಅಗತ್ಯವುಳ್ಳವರು ಈ ಅವಕಾಶವನ್ನು ಸದುಯೋಗ ಪಡಿಸಿಕೊಳ್ಳಬಹುದು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ