ಶಿಷ್ಯ ವೇತನಕ್ಕಾಗಿ ಕಿರಿಯ ವೈದ್ಯರ ರಕ್ತದಾನ

ದಾವಣಗೆರೆ:

       ಬಾಕಿ ಇರುವ ಶಿಷ್ಯ ವೇತನ ಬಿಡುಗಡೆ ಆಗ್ರಹಿಸಿ, ಕಿರಿಯ ವೈದ್ಯರು ನಡೆಸುತ್ತಿರುವ ಅರ್ನಿಧಿಷ್ಠಾವಧಿ ಧರಣಿ ಸತ್ಯಾಗ್ರಹವು 8ನೇ ದಿನಕ್ಕೆ ಕಾಲಿರಿಸಿದ್ದು, ಸೋಮವಾರ ರಕ್ತದಾನ ಮಾಡವ ಮೂಲಕ ಪ್ರತಿಭಟನೆ ನಡೆಸಿದರು.

       ಧರಣಿ ನಡೆಯುತ್ತಿರುವ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ರಕ್ತ ಭಂಡಾರದಲ್ಲಿ ಸುಮಾರು 50ಕ್ಕೂ ಹೆಚ್ಚು ವೈದ್ಯರು ರಕ್ತದಾನ ಮಾಡುವ ಮೂಲಕ ಕಳೆದ 8 ತಿಂಗಳಿಂದ ಬಾಕಿ ಇರುವ ಶಿಷ್ಯವೇತನವನ್ನು ತಕ್ಷಣವೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.

        ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ಕಳೆದ ಒಂದು ವಾರದಿಂದ ಪ್ರತಿಭಟನೆ ನಡೆಸುತ್ತಿದ್ದರೂ, ನಮ್ಮ ಬೇಡಿಕೆಗೆ ಸರಕಾರ ಸ್ಪಂದಿಸಿಲ್ಲ. ಶಿಷ್ಯವೇತನ ನೀಡಲು ಎದುರಾಗಿರುವ ಸಮಸ್ಯೆಯನ್ನು ಸರ್ಕಾರ ಬಗೆಹರಿಸಿಕೊಳ್ಳಬೇಕೇ ವಿನಃ, ನಮ್ಮನ್ನು ಬಲಿಪಶು ಮಾಡಬಾರದೆಂದು ಮನವಿ ಮಾಡಿದರು.

         ಒಂದು ವಾರದಿಂದ ರೋಗಿಗಳ ಸೇವೆ ಇಲ್ಲದೆ ಪ್ರತಿಭಟನೆ ನಡೆದಿದೆ. ರೋಗಿಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಬಗ್ಗೆ ಸರಕಾರ ನಿರ್ಲಕ್ಷ್ಯ ತಾಳಿದ್ದರಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತಿದೆ. ಬಡ ರೋಗಿಗಳು ಮಾತ್ರವಲ್ಲ, ಆರ್ಥಿಕವಾಗಿ ತಾವು, ನಮ್ಮ ಕುಟುಂದವರೂ ತೀವ್ರ ಸಂಕಷ್ಟಕ್ಕೆ ಗುರಿಯಾಗುವಂತಾಗಿದೆ. ಬಾಕಿ ಇರುವ ಶಿಷ್ಯವೇತನ ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.

          ರಕ್ತದಾನ ಶಿಬಿರದಲ್ಲಿ ಡಾ.ಸಂಗಂ, ಡಾ.ಇಳಾ, ಡಾ.ಕೃಷ್ಣೇಗೌಡ ಪಾಟೀಲ್, ಡಾ.ಸಿಚಿನ್ ಸಿ.ಆರ್, ಡಾ.ಹೀಮಾಭಟ್, ಡಾ.ನವ್ಯ ಹೆಚ್.ಕೆ., ಡಾ.ಅಮಿತ್, ಡಾ.ವೀರೇಶ್, ಡಾ.ಪ್ರಿಯಾಂಕ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link