ಬೆಂಗಳೂರು
ನಾವು ಸಾಕಷ್ಟು ತಂತ್ರಜ್ಞಾನವನ್ನು ಆವಿಷ್ಕರಿಸಿದ್ದೇವೆ ಆದರೆ ರಕ್ತವನ್ನು ಕೃತಕವಾಗಿ ಉತ್ಪತ್ತಿ ಮಾಡುವ ತಂತ್ರಜ್ಞಾನ ಇನ್ನು ಯಾರೂ ಸಹ ಕಂಡುಹಿಡಿದಿಲ್ಲ, ಅದಕ್ಕಾಗಿಯೇ ರಕ್ತದಾನಿಗಳನ್ನು ದೇವರಂತೆ ಕಾಣುತ್ತೇವೆ ಎಂದರು. ನಂತರದಲ್ಲಿ ಮಾತು ಮುಂದುವರೆಸಿ ಅವರು ಸದ್ಯದ ಪರಿಸ್ಥಿತಿಯಲ್ಲಿ ನಾವು ಎದುರಿಸಬೇಕಾಗಿರುವ ಸವಾಲುಗಳ ಕುರಿತು ಹೇಳಿದರು ಇಲ್ಲಿರುವ ಪ್ರತಿಯೊಬ್ಬರು ಒಬ್ಬ ದಾನಿ ಮತ್ತು ಅಕ್ಸೆಪಟಾರ್ ನಡುವಿನ ಅಂತರವನ್ನು ಕಡಿಮೆಗೊಳಿಸಬೇಕಾದ ಗುರುತರವಾದ ಸವಾಲು ನಮ್ಮ ಮುಂದೆ ಇದೆ ಮತ್ತು ಈ ದೇಶದ ಕೊನೆಯ ವ್ಯಕ್ತಿಗೂ ಕೂಡ ಸಮಯಕ್ಕೆ ಸರಿಯಾಗಿ ರಕ್ತವನ್ನು ಪಡೆಯಲು ಸಾಧ್ಯವಾಗುವಂತೆ ಮಾಡಿದರೆ ಆಗ ಅವರು ರೆಡ್‍ಕ್ರಾಸ್ ಸಂಸ್ಥೆಯ ಕೆಲಸವನ್ನು ಮೆಚ್ಚುತ್ತಾರೆ ಎಂದರು.
ಶ್ರೀ ಎಸ್. .ನಾಗಣ್ಣ, ಚೇರ್ಮನ್ ರೆಡ್ ಕ್ರಾಸ್ ಕರ್ನಾಟಕ ,ಇವರು ಮಾತನಾಡಿ , ರೆಡ್ ಕ್ರಾಸ್ ಸಂಸ್ಥೆಯೂ 100ನೇ ವರ್ಷದ ಆಚರಣೆಯ ಸಂದರ್ಭದಲ್ಲಿದ್ದೆವೆ ಮತ್ತು ನಮ್ಮ ಸಂಸ್ಥೆಯೂ ವಿಶ್ವವ್ಯಾಪಿ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಒಂದಾಗಿದೆ , ನಿಮ್ಮ ಕಾರ್ಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ರಕ್ತದಾನ ಶಿಬಿರಗಳನ್ನು ನಡೆಸಿ ಸಮಾಜಕ್ಕೆ ನಮ್ಮ ಸಂಸ್ಥೆಕಡೆಯಿಂದ ಅಳಿಲು ಸೇವೆ ಮಾಡಬೇಕಾಗಿ ವಿನಂತಿಸುತ್ತೇನೆ ,ಮತ್ತು ರಕ್ತದಾನದ ಬಗ್ಗೆ ಇಂದಿನ ಯುವಕರಲ್ಲಿ ಜಾಗೃತಿ ಮೂಡಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ತಿಳಿಸಿದ್ದರು.
ಕರ್ನಾಟಕ ಗಾಂಧಿ ಸ್ಮಾರಕ್ ನಿದಿ ಸಂಸ್ಥೆಯ ಡಾ. ವುಡೇ ಪಿ ಕೃಷ್ಣ ಅವರು ಮಾತನಾಡಿ ,ನೋಡಲ್ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿನ ಕಾಲೇಜು ಮತ್ತು ವಿವಿಗಳಲ್ಲಿನ ಯುವಕರಲ್ಲಿ ಶಾಂತಿ ಕಾರ್ಯಕರ್ತ ಎಂಬ ಸ್ಥಾನ ನಿರ್ಮಿಸಿ ಅವರಿಂದ ರಾಷ್ಟ್ರೀಯ ಏಕೀಕರಣ ಮತ್ತು ಸಾರ್ವತ್ರಿಕತೆಯನ್ನು ಸೃಷ್ಟಿಸಲು ಮತ್ತು ರೆಡ್ ಕ್ರಾಸ್ನ ಧ್ಯೇಯೋದ್ದೇಶವನ್ನು ಸಾಕಾರಗೊಳಿಸಲು ಕೆಲಸ ಮಾಡುವಂತೆ ನಾನು ನಿಮ್ಮಲ್ಲಿ ವಿನಂತಿಸುತ್ತೇನೆ.
ಮತ್ತು ಸರ್ಕಾರ ರೆಡ್ ಕ್ರಾಸ್ ಗೆ ಸರಿಯಾದ ಸಮಯಕ್ಕೆ ಅನುದಾನ ನೀಡುವ ಮೂಲಕ ಈ ಮಹತ್ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಕೆಳಿಕೊಳ್ಳುತ್ತೇನೆ ಎಂದರು.ಕಾರ್ಯಕ್ರಮದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಎನ್‍ಎಸ್‍ಎಸ್ ಘಟಕದ ಸಂಯೋಜಕರಾದ ಡಾ.ಎನ್.ಸತೀಶ್ ಗೌಡ ಸಂಯೋಜಕರು , ಡಾ.ಎನ್.ಸತೀಶ್ ಗೌಡ ಮತ್ತು ಶ್ರೀ.ಕುಮಾರ್ ಭಾಗವಹಿಸಿದ್ದರು.
