ಉಡುಪಿ:
ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಕಾಸರಗೋಡು ಹಾಗೂ ಉಡುಪಿಯ ಪಡುಬಿದ್ರೆಯ ಕಡಲ ತೀರಗಳು (ಬೀಚ್) ಪ್ರತಿಷ್ಠಿತ ಅಂತರಾಷ್ಟ್ರೀಯ ಬ್ಲೂ ಫ್ಲಾಗ್ ಮಾನ್ಯತೆ ಪಡೆದಿವೆ. ಕಾಸರಕೋಡಿನಲ್ಲಿರುವ ಇಕೋ ಬೀಚ್ ಹಾಗೂ ಪಡುಬಿದ್ರಿಯ ಬೀಚ್ ಗಳು ತನ್ನ ಮೊದಲ ಪ್ರಯತ್ನದಲ್ಲೇ ಅಂತರಾಷ್ಟ್ರೀಯ ಮಾನ್ಯತೆ ಪಡೆಯುವಲ್ಲಿ ಯಶಸ್ವಿಯಾಗಿದೆ.
ಈ ಎರಡೂ ಬೀಚ್ ಗಳಲ್ಲಿ ಪ್ರವಾಸಿಗರು ಕುಳಿತುಕೊಳ್ಳುವ ಆಸನಗಳಿಂಡ ಹಿಡಿದು ಕುಡಿಯುವ ನೀರು, ಮಕ್ಕಳ ಆಟಿಕೆಗಳು, ಜೀವರಕ್ಷಕ ಸಿಬ್ಬಂದಿ ಹಾಗೂ ಮುಖ್ಯವಾಗಿ ಕಡಲತೀರದ ಸ್ವಚ್ಛತೆ ಸೇರಿ ಎಲ್ಲವೂ ಅಚ್ಚುಕಟ್ಟಾಗಿದೆ.ಇನ್ನು ದೇಶದಲ್ಲಿ ಒಟ್ಟಾರೆ ಹನ್ನೆರಡು ಕಡಲ ತೀರಗಳು ಬ್ಲೂ ಫ್ಲಾಗ್ ಮಾನ್ಯತೆ ಪಡೆದಿದ್ದು ಕರ್ನಾಟಕ ಹೊರತುಪಡಿಸಿ ಕೇರಳದ ಕಪ್ಪಾಡ್, ಆಂಧ್ರಪ್ರದೇಶದ ಋಷಿಕೊಂಡ, ಒಡಿಶಾದ ಗೋಲ್ಡನ್, ಮತ್ತು ಅಂಡಮಾನ್ ದ್ವೀಪದ ರಾಧಾನಗರ, ಗುಜರಾತ್‌ನ ಶಿವರಾಜಪುರ, ಡಿಯುನ ಘೋಗ್ಲಾ,ಬೀಚ್ ಗಳಿಗೆ ಈ ಗೌರವ ದೊರಕಿದೆ.








