ಬೆಂಗಳೂರು
ಬಿಎಂಟಿಸಿ ಬಸ್ ಮತ್ತು ಬಾಷ್ ಕಂಪನಿ ವಾಹನಗಳ ಮಧ್ಯೆ ಪೈಪೋಟಿಯಲ್ಲಿ ಬೈಕ್ ಸವಾರ ಸಿಲುಕಿ ಸಾವನ್ನಪ್ಪಿರುವ ದುರ್ಘಟನೆ ಬಿಡದಿಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೊಡಿಯಾಲ ಕರೇನಹಳ್ಳಿಯ ವೆಂಕಟೇಶಮೂರ್ತಿ ಎಂದು ಮೃತಪಟ್ಟವರನ್ನು ಗುರುತಿಸಲಾಗಿದೆ.ಬಾಷ್ ಕಂಪನಿ ಕಾರ್ಮಿಕರನ್ನು ಕರೆದೊಯ್ಯುವ ವಾಹನ ಮತ್ತು ಬಿಎಂಟಿಸಿ ಬಸ್ ನಾ ಮುಂದೆ, ತಾ ಮುಂದೆ ಎಂದು ಪೈಪೋಟಿಯಲ್ಲಿ ತೊಡಗಿದ್ದವು. ಈ ವೇಳೆ ಕೊಡಿಯಾಲ ಕರೇನಹಳ್ಳಿಯಿಂದ ಕಾಡುಮನೆಗೆ ಬರುತ್ತಿದ್ದ ಬೈಕ್ ಸವಾರ ವೆಂಕಟೇಶ ಮೂರ್ತಿ ಎರಡು ವಾಹನದ ಮಧ್ಯೆ ಸಿಲುಕಿ ಕೆಳಗೆ ಬಿದ್ದು ಅವರ ಬಸ್ ಚಕ್ರ ಹರಿದು ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಬಿಡದಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪದೇ ಪದೇ ಇಂತಹ ಘಟನೆಗಳು ಸಂಭವಿಸುತ್ತಿದ್ದು, ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಕೆಲಕಾಲ ರಸ್ತೆ ತಡೆ ನಡೆಸಿದರು. ಇದರಿಂದಾಗಿ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬಾಷ್ ಕಂಪನಿ ಮತ್ತು ಬಿಎಂಟಿಸಿ ವಾಹನ ಚಾಲಕರನ್ನು ಬಂಧಿಸುವಂತೆ ಸ್ಥಳಿಯರು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








