ಬೆಂಗಳೂರು:
ಕಾರು ಮಾರಟ ಕಂಪನಿಗಳು ಡಿಸೆಂಬರ್ ನಲ್ಲಿ ಆಕರ್ಷಕ ಕೊಡುಗೆ ನೀಡುವುದು ಸಾಮಾನ್ಯ ಆದರೆ ಸರ್ಕಾರಿ ಸ್ವಾಮ್ಯದ ಬಿಎಂಟಿಸಿ ತನ್ನ ಪ್ರಯಾಣಿಕರಿಗೆ ಕ್ರಿಸ್ ಮಸ್, ಹೊಸ ವರ್ಷದ ಉಡುಗೊರೆ ಘೋಷಣೆ ಮಾಡಿದೆ , ಬಿಎಂಟಿಸಿ ಬಸ್ ಪ್ರಯಾಣದಲ್ಲಿ ರಿಯಾಯಿತಿ ಘೋಷಣೆ ಮಾಡಿ ಪ್ರಯಾಣಿರಿಗೆ ಡಿಸೆಂಬರ್ ಡಿಲೈಟ್ ನೀಡಿದೆ.
ಬಿಎಂಟಿಸಿಯ ವಜ್ರ ಬಸ್‌ನಲ್ಲಿ ಪ್ರಯಾಣಿಕರು ಡಿಜಿಟಲ್ ಮಾದರಿ ದೈನಿಕ ಪಾಸ್ ಖರೀದಿ ಮಾಡಿದರೆ ರೂ,140 ರೂ ಬೆಲೆಯ ಬಸ್‌ಪಾಸ್ ನಲ್ಲಿ ಶೇ.25 ರವರೆಗೆ ರಿಯಾಯಿತಿ ಘೋಷಿಸಿದೆ. ಕ್ರಿಸ್ ಮಸ್ ಮತ್ತು ಹೊಸ ವರ್ಷದ ಹಿನ್ನೆಲೆಯಲ್ಲಿ ಬಿಎಂಟಿಸಿ ಈ ರಿಯಾಯಿತಿ ಘೋಷಿಸಿದ್ದು, ಜ.1ರ ವರೆಗೂ ಪ್ರಯಾಣಿಕರಿಗೆ ಈ ಕೊಡುಗೆ ಲಭ್ಯವಾಗಲಿದೆ ಎಂದು ಪರಕಟಣೆಯಲ್ಲಿ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








