“ಪಿಂಕ್ ಸಾರಥಿ” ನೂತನ ಸೇವೆ ಆರಂಭಿಸಿದ ಬಿಎಂಟಿಸಿ..!!

ಬೆಂಗಳೂರು:
     ಸರ್ಕಾರ ಮಹಿಳೆಯರ ಸುರಕ್ಷತೆಗಾಗಿ ಸಾಕಷ್ಟು ಕ್ರಮ ತೆಗೆದುಕೊಂಡಿದೆ ಇದರ ಜೋತೆಗೆ ಸರ್ಕಾರದ ಅಂಗ ಸಂಸ್ಥೆಯಾದ ಬಿಎಂಡಿಸಿ ಇಂದು ಮಹಿಳೆಯರ ರಕ್ಷಣೆಗಾಗಿ “ನಿರ್ಭಯ ಯೋಜನೆ”ಯಡಿಯಲ್ಲಿ ಮಹಿಳಾ ಪ್ರಯಾಣಿಕರ ಸುರಕ್ಷತೆ ಮತ್ತು ಭದ್ರತೆಗಾಗಿ “ಪಿಂಕ್ ಸಾರಥಿ” ಎಂಬ ನೂತನ ಜೀಪುಗಳನ್ನು ಪರಿಚಯಿಸಿದ್ದು ಈ ನೂತನ ಜೀಪುಗಳನ್ನು ಮುಖ್ಯಮಂತ್ರಿಯವರು ವಿಧಾನಸೌಧದ ಮುಂಭಾಗದಲ್ಲಿ ಇಂದು ಲೋಕಾರ್ಪಣೆ ಮಾಡಿದರು.
      ಇದೇ ವೇಳೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸ್ಮಾರ್ಟ್‌ಕಾರ್ಡ್ ಮಾದರಿಯ ಉಚಿತ ವಿದ್ಯಾರ್ಥಿ ಪಾಸುಗಳನ್ನು ಮುಖ್ಯಮಂತ್ರಿ ವಿತರಿಸಿದರು.ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ಡಿ ಸಿ ತಮ್ಮಣ್ಣ, ಸಚಿವ ಪುಟ್ಟರಂಗಶೆಟ್ಡಿ, ಬಿಎಂಟಿಸಿ ಅಧ್ಯಕ್ಷ ಎನ್.ಎ.ಹ್ಯಾರಿಸ್, ವ್ಯವಸ್ಥಾಪಕ ನಿರ್ದೇಶಕ ಎನ್.ವಿ.ಪ್ರಸಾದ್, ನಿರ್ದೇಶಕ ಅನುಪಮ್ ಅಗರವಾಲ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ