ಬೆಂಗಳೂರು:
ಲಾಕ್ ಡೌನ್ ನಂತರ ಕಷ್ಟದಲ್ಲಿದ್ದಂತ ಪ್ರಯಾಣಿಕರ ಒತ್ತಡಕ್ಕೆ ಇದೀಗ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮಣಿದು ಪಾಸ್ ದರವನ್ನು ಕಡಿಮೆ ಮಾಡಿದೆ.
ಪ್ರಯಾಣಿಕರ ಒತ್ತಡಕ್ಕೆ ಮಣಿದ ಬಿಎಂಟಿಸಿ, ಇದೀಗ ದಿನದ ಪಾಸ್ ದರವನ್ನು ರೂ.70 ರಿಂದ ರೂ.50ಕ್ಕೆ ಇಳಿಕೆ ಮಾಡಿದ್ದು ಮೂಲಕ ಬಿಎಂಟಿಸಿ ಬಸ್ ಪ್ರಯಾಣಿಕರಿಗೆ ಸಿಹಿಸುದ್ದಿ ನೀಡಿದೆ. ಈ ಕುರಿತಂತೆ ಮಾಹಿತಿ ನೀಡಿರುವ ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ, ಬಿಎಂಟಿಸಿ ದಿನದ ಪಾಸ್ ದರವನ್ನು ಪ್ರಯಾಣಿಕರ ಹಿತದೃಷ್ಟಿಯಿಂದ ಏರಿಕೆ ಮಾಡಲಾಗಿತ್ತು. ಇದೀಗ ದಿನದ ಪಾಸ್ ದರವನ್ನು ರೂ.70 ರಿಂದ 50 ರೂಪಾಯಿಗೆ ಇಳಿಕೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.
ಅಲ್ಲದೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕರಿಗೆ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವ ಸಲುವಾಗಿ ಕೊರೊನಾ ಹರಡುವಿಕೆಯನ್ನು ಕಡಿಮೆಮಾಡುವ ದೃಷ್ಟಿಯಿಂದ ಪಾಸುಗಳ ಹೊಂದಿದವರು ಸಾರಿಗೆ ವಾಹನದಲ್ಲಿ ಪ್ರಯಾಣಿಸಲು ಅವಕಾಶವನ್ನು ಕಲ್ಪಿಸಲಾಗಿತ್ತು.
ಸಾರ್ವಜನಿಕರ ಬೇಡಿಕೆಯಂತೆ, ಪ್ಲಾಟ್ ದರದ ಬಗ್ಗೆ ಪ್ರಸ್ತಾಪನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಅದರಂತೆ, ಸರ್ಕಾರವು ಪ್ಲಾಟ್ ದರವನ್ನು ಪ್ರಯಾಣಿಕರಿಂದ ಪಡೆಯಲು ಒಪ್ಪಿಗೆಯನ್ನು ಸೂಚಿಸಿದ್ದು ಮೇ 26ರಿಂದ ಪ್ಲಾಟ್ ದರ ಕಾರ್ಯರೂಪಕ್ಕೆ ತರಲು ಬೆ.ಮ.ಸಾ.ಸಂಸ್ಥೆಯು ಸಿದ್ಧತೆಯನ್ನು ಮಾಡಿಕೊಂಡಿದೆ.
ಅದರಂತೆ, 2 ಕಿ.ಮೀ.ವರೆಗೆ 5 ರೂಪಾಯಿ, 3 ರಿಂದ 4 ಕಿ.ಮೀ.ವರೆಗೆ 10 ರೂ., 5 ರಿಂದ 6 ಕಿ.ಮೀ.ವರೆಗೆ 15 ರೂ., 7 ರಿಂದ 14 ಕಿ.ಮೀ. ವರೆಗೆ 20 ರೂ. ಹಾಗೂ 41 ಕಿ.ಮೀ.ನಿಂದ ಹಾಗೂ ಹೆಚ್ಚಿನ ದೂರದವರೆಗೆ 30 ರೂ. ದರ ನಿಗದಿಪಡಿಸಲಾಗಿದೆ.
ಸಾರ್ವಜನಿಕ ಪ್ರಯಾಣಿಕರಿಗೆ ಚಿಲ್ಲರೆ ಕೊಟ್ಟು ಸಹಕರಿಸ ಬೇಕು. ಪ್ರಯಾಣಿಕರ ಹಿತದೃಷ್ಟಿಯಿಂದ, ಬೆ.ಮ.ಸಾ. ಸಂಸ್ಥೆಯ ಸಾರಿಗೆಯಲ್ಲಿ ಪ್ರಯಾಣಿಸುವಾಗ ತಪ್ಪದೆ ಮುಖಗವಸುಗಳನ್ನು ಖಡ್ಡಾಯವಾಗಿ ಧರಿಸಬೇಕು. ಪ್ರಯಾಣಿಕರು ಜನ ದಟ್ಟಣೆ ಆಗದಂತೆ ಸಹಕರಿಸಬೇಕು ಎಂದು ಸಂಸ್ಥೆ ಮನವಿ ಮಾಡಿದೆ.