ಹೆಚ್ಚಾಗುತ್ತಿರುವ ಬಿಬಿಎಂಪಿ ಬೋರ್ಡ್ ಕಳ್ಳತನ..!

ಬೆಂಗಳೂರು

   ಬಿಬಿಎಂಪಿ ಕೈಗೆತ್ತಿಕೊಂಡಿರುವ ಕಾಮಗಾರಿ ಸ್ಥಳಗಳಲ್ಲಿ ರಸ್ತೆಬದಿ ಮಾಹಿತಿಗಾಗಿ ಹಾಕಲಾಗಿದ್ದ ಬೋರ್ಡ್‌ಗಳನ್ನು ಕಳ್ಳತನ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ.ಮಾರ್ಕ್ಸ್ ರಸ್ತೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಳಿ ಕಾಮಗಾರಿ ಮಾಹಿತಿಗಾಗಿ ಹಾಕಲಾಗಿದ್ದ ಬೋರ್ಡ್‌ಗಳನ್ನು ಬುಧವಾರ ರಾತ್ರಿ ಕಳವು ಮಾಡಿರುವ ದುಷ್ಕರ್ಮಿಗಳ ವಿರುದ್ಧ ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್ ಕುಮಾರ್ ಅವರು, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

  ಈ ಬೋರ್ಡ್‌ಗಳನ್ನು ಕಳ್ಳತನ ಮಾಡುವಾಗ ಬೋರ್ಡ್‌ಗಳನ್ನು ಅತ್ತಿಂದಿತ್ತ ಎಳೆದಾಡುವ ವೇಳೆ ವೈಟ್ ಟಾಪಿಂಗ್ ರಸ್ತೆಗೂ ಹಾನಿಯುಂಟಾಗಿದೆ. ಕಳ್ಳರು ಬೋರ್ಡ್‌ಗಳನ್ನು ಕಳ್ಳತನ ಮಾಡಿರುವವರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕೆಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

   ಸರ್ಕಾರ, ಪಾಲಿಕೆಗೆ ಸೇರಿದ ಸಾರ್ವತ್ರಿಕ ಆಸ್ತಿ-ಪಾಸ್ತಿಗಳನ್ನು ಹಾಳುಮಾಡುವುದು ಶಿಕ್ಷಾರ್ಹ ಅಪರಾಧ. ಸಾರ್ವಜನಿಕರು ಇಂತಹ ಘಟನೆಗಳು ನಡೆದರೆ, ತಕ್ಷಣ ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತರಬೇಕು. ಇಲ್ಲವೆ, ಪೊಲೀಸರಿಗೆ ದೂರು ನೀಡಬೇಕೆಂದು ಅನಿಲ್ ಕುಮಾರ್ ಅವರು, ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link