ಚಿತ್ರದುರ್ಗ
ಪುಸ್ತಕಗಳು ನಮ್ಮ ಬದುಕನ್ನು ಕಟ್ಟಿಕೊಡುತ್ತವೆ. ಹೀಗಾಗಿ ನಾವು ಹೆಚ್ಚು ಹೆಚ್ಚು ಪುಸ್ತಕಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಜಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ ಅಭಿಪ್ರಾಯ ಪಟ್ಟರು
ಸಮಾತ ಸಾಹಿತ್ಯ ವೇದಿಕೆಯ ಆಶ್ರಯದಲ್ಲಿ ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಕೆ.ಪರಶುರಾಮ್ ಗೊರಪ್ಪರ್ ರವರ ಕವನ ಸಂಕಲನ ಕರುನಾಡ ಧ್ವನಿ ಬಿಡುಗಡೆ ಮಾಡಿ ಅವರು ಮಾತನಾಡಿದರು
ಪುಸ್ತಕಗಳು ಮನುಷ್ಯನ ಸಂಗಾತಿಗಳಾಗಬೇಕಿದೆ ಆಗ ಮಾತ್ರ ಜ್ಞಾನವನ್ನು ಪಡೆಯಲು ಸಾಧ್ಯವಿದೆ, ಓದು ಎನ್ನುವುದು ಸದಾ ಇರಬೇಕು ಆದೇ ರೀತಿ ಬರವಣಿಗೆಯೂ ಸಹಾ ಇರಬೇಕಿದೆ ಆಗ ಮಾತ್ರ ತನ್ನಲ್ಲಿನ ಸಾಹಿತ್ಯವನ್ನು ಹೊರಹಾಕಲು ಸಾಧ್ಯವಿದೆ ಎಂದರು.
ಗೂಗಲ್‍ನಲ್ಲಿ 12.34 ಕೋಟಿ ಪುಸ್ತಕಗಳನ್ನು ಸಂಗ್ರಹ ಮಾಡಲಾಗಿದೆ ಇಷ್ಟಲ್ಲದೆ ಸಂಗ್ರಹ ಮಾಡದ ಲಕ್ಷಾಂತರ ಪುಸ್ತಕಗಳು ಇದೆ ಆದರೆ ಸಾಹಿತ್ಯ ಕೃಷಿ ನಿರಂತರವಾಗಿ ಇದೆ, ಅದಕ್ಕೆ ಸರಿಯಾದ ರೀತಿಯ ಪ್ರೋತ್ಸಾಹ ಮತ್ತು ಸಹಕಾರ ಹಾಗೂ ಬೆಂಬಲ ಬೇಕಿದೆ ಎಂದು ತಿಳಿಸಿದರು
ಪುಸ್ತಕವನ್ನು ಓದುತ್ತಾ ಇದ್ದರೆ ಮಾನವನ ಆಸಕ್ತಿಯನ್ನು ಕೆರಳಿಸುವಂತೆ ಇರಬೇಕಿದೆ, ಅದು ಜೀವನದ ಒಂದು ಭಾಗವಾಗಬೇಕಿದೆ. ಈ ಮುಂಚೆ ತಾಳೆಗರಿ ಸೇರಿದಂತೆ ಇತರೆ ಕಡೆಗಳಲ್ಲಿ ಬರೆಯಲಾಗುತ್ತಿತು ನಂತರ ಮುದ್ರಣ ಬಂದ ಮೇಲೆ ಪುಸ್ತಕಗಳ ರೂಪದಲ್ಲಿ ಬರಲಾರಂಭಿಸಿದವು ಈಗ ಮೊಬೈಲ್ ಬಂದ ಮೇಲೆ ಆದರ ಭಾಷೆಗೂ ಸಹಾ ಸಾಹಿತ್ಯ ಬದಲಾಗುತ್ತಿದೆ ಎಂದರು.
ಪುಸ್ತಕ ಎನ್ನುವುದು ತ್ರಿಕಾಲ ಜ್ಞಾನ ಇದ್ದಂತೆ ಅದನ್ನು ಓದಿದರೆ ಯಾವೊತ್ತು ಸಹಾ ಮರೆಯಲು ಸಾಧ್ಯವಿಲ್ಲ, ಪುಸ್ತಕ ಸಂಸ್ಕತಿ ಆಪಾರವಾದ ಆಸ್ತಿ ಇದ್ದಂತೆ ಅದನ್ನು ಓದಿದಷ್ಟು ನಮ್ಮ ಜ್ಞಾನ ವೃದ್ದಿಯಾಗುತ್ತದೆ ಎಂದು ದೊಡ್ಡಮಲ್ಲಯ್ಯ ತಿಳಿಸಿದರು.
ಸಾಹಿತಿ ಎಸ್.ಆರ್.ಗುರುನಾಥ್ ಮಾತನಾಡಿ ಚಿತ್ರದುರ್ಗ ಜಿಲ್ಲೆ ನೀರಿಲ್ಲದೆ ಬರವನ್ನು ಅನುಭವಿಸುತ್ತಿರಬಹುದು ಆದರೆ ಸಾಹಿತ್ಯ ಕ್ಷೇತ್ರದಲ್ಲಿ ಮಾತ್ರ ಮುಂದೆ ಇದೆ ಅದಕ್ಕೆ ಜಿಲ್ಲೆಯಲ್ಲಿ ಯಾವುದೇ ಬರವಿಲ್ಲ ಎಂದು ಅಭೀಪ್ರಾಯಪಟ್ಟಿದ್ದಾರೆ.
ಚಿತ್ರದುರ್ಗ ಸದಾ ಬರಗಾಲಕ್ಕೆ ಒಳಗಾಗುವ ಜಿಲ್ಲೆಯಾಗಿದೆ ಮಳೆ ಎನ್ನುವುದು ಮರಿಚಿಕೆಯಾಗುತ್ತಿದೆ, ಬಿದ್ದ ನೀರನ್ನು ಸಂಗ್ರಹ ಮಾಡುವ ಕಾಲ ಬಂದಿದೆ ಆದರೆ ಸಾಹಿತ್ಯ ಕೃಷಿ ಮಾತ್ರ ನಿರಂತರವಾಗಿ ನಡೆಯುತ್ತಿದೆ ಇದಕ್ಕೆ ಇಂತಹ ಸಮಾರಂಭಗಳು ಸಾಕ್ಷಿಯಾಗಿದೆ ಎಂದರು.
ಗದ್ಯ ಎನ್ನುವುದು ಕಬ್ಬು ಇದ್ದಂತೆ ಪದ್ಯ ಎನ್ನುವುದು ಹಿಡಿದ ಕಬ್ಬಿನ ರಸದಂತೆ ಜನತೆ ಇದನ್ನು ಓದುವ ಕೆಲಸವನ್ನು ಮಾಡಬೇಕಿದೆ. ಸಂಘಟನೆಗಳು ಸಹಾ ಇಂತಹ ಸಾಹಿತಿಗಳಿಗೆ ಉತ್ತೇಜನ ನೀಡುವ ಕಾರ್ಯವನ್ನು ಮಾಡಬೇಕಿದೆ ಈ ಕೃತಿಯೂ 57 ಕವನಗಳನ್ನು ಹೊಂದಿದ್ದು ಉತ್ತಮವಾಗಿ ಇದೆ ಎಂದರು.
ಕಾರ್ಯಕ್ರಮದಲ್ಲಿ ಡಾ ಮಂಜುಳಾ ರಾಘವೇಂದ್ರ, ಡಾ.ಶಿವಣ್ಣ, ಶ್ರೀಮತಿ ಷರೀಫಾಬೀ, ಎಂ.ಮಲ್ಲಣ್ಣ, ಕೃಷ್ಣಪ್ಪ ದಿವುಶಂಕರ್ ಭಾಗವಹಿಸಿದ್ದರು, ವೆಂಕಟೇಶ್ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ